ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ತರಬೇತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇ–ತಂತ್ರಾಂಶ ಕಾರ್ಯಾಗಾರ
Last Updated 30 ಜುಲೈ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಫೈಲ್‌ಗೂ, ಫೋಲ್ಡ­ರ್‌ಗೂ ಏನು ವ್ಯತ್ಯಾಸ? ಕಂಪ್ಯೂಟರ್‌ ಆನ್‌ ಮಾಡಿದ ತಕ್ಷಣ ಇ–ತಂತ್ರಾಂಶ ಬಂದುಬಿಡುತ್ತಾ? ಇಡೀ ಫೋಲ್ಡರ್‌­ಅನ್ನೇ ಯೂನಿಕೋಡ್‌ಗೆ ಪರಿವರ್ತಿಸಬ­ಹುದಾ? ಅಯ್ಯಯ್ಯೊ ನಾನಂತೂ ಕಂಪ್ಯೂಟರ್‌ ಆಪರೇಟ್‌ ಮಾಡಿಯೇ ಇಲ್ಲ! ಫೈಲ್‌ ಓಪನ್‌ ಮಾಡುವುದು ಹೇಗೆ? ತುಂಬಾ ಕಷ್ಟ ಸರ್‌...! ಇರಲಿ ಬಿಡಿ, ನಿಧಾನಕ್ಕೆ ಅರ್ಥವಾಗುತ್ತೆ. ನಿಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಲ್ಲಿ ಕೇಳಿ ಎಲ್ಲಾ ಹೇಳಿಕೊಡುತ್ತಾರೆ...!

–ಈ ರೀತಿಯ ಪ್ರಶ್ನೆಗಳು ಎದುರಾ­ಗಿದ್ದು, ಆತಂಕ ವ್ಯಕ್ತವಾಗಿದ್ದು ಹಾಗೂ ತಮಾಷೆ ನಡೆದಿದ್ದು ಕನ್ನಡ ಇ–ತಂತ್ರಾಂಶ ಬಳಕೆಯ ಬಗ್ಗೆ ಮಾಹಿತಿ ನೀಡಲು ಕನ್ನಡ ಭವನದ ನಯನ ಸಭಾಂಗಣದಲ್ಲಿ ಬುಧವಾರ ಆಯೋಜಿ­ಸಲಾಗಿದ್ದ ಕಾರ್ಯಾಗಾ­ರದಲ್ಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆ ಸಿಬ್ಬಂದಿ, ಸಹಾ­ಯಕ ನಿರ್ದೇಶ­ಕರು, ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರ ನೌಕರರು ಪಾಲ್ಗೊಂಡಿದ್ದರು.

ತಂತ್ರಾಂಶವನ್ನು ಡೌನ್‌ಲೋಡ್‌ ಮಾಡು­­ವುದು, ಯೂನಿಕೋಡ್‌ ಅಕ್ಷರ ವಿನ್ಯಾಸಗಳು, ಕ್ಷೇಮ ಕೀಲಿಮಣೆ ವಿನ್ಯಾಸ, ಪರಿವರ್ತಕ (ಆಸ್ಕಿಯಿಂದ ಯೂನಿ­ಕೋಡ್‌ಗೆ), ಬ್ರೈಲ್‌ ಕನ್ನಡ ತಂತ್ರಾಂಶ, ಮೊಬೈಲ್‌ ಫೋನ್‌ನಲ್ಲಿ ಕನ್ನಡ ಬಳಕೆ ಹಾಗೂ ಅಳವ­ಡಿಕೆ ಬಗ್ಗೆ ಪ್ರಾತ್ಯಕ್ಷತೆ ಹಾಗೂ ತರಬೇತಿ ಹಮ್ಮಿ­ಕೊಳ್ಳಲಾಗಿತ್ತು. ಹಾಸನದ ಮಾರುತಿ ತಂತ್ರಾಂಶ ಅಭಿವೃದ್ಧಿ ಕೇಂದ್ರದವರು ಕಾರ್ಯಾಗಾರ ನಡೆಸಿಕೊಟ್ಟರು. 

ಇಲಾಖೆ ನಿರ್ದೇಶಕ ಕೆ.ಎ. ದಯಾ­ನಂದ್‌, ‘ಇ–ತಂತ್ರಾಂಶ ಅಳವಡಿಸಿ­ಕೊ­ಳ್ಳಲು ಮಾರ್ಗದರ್ಶನ ನೀಡುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು. 30 ಸಹಾಯಕ ನಿರ್ದೇಶಕರು ಹಾಗೂ ಇತರ ಸಿಬ್ಬಂದಿ  ಪಾಲ್ಗೊಂಡಿದ್ದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಹಾಸ ರೈ,
‘ಇ–ತಂತ್ರಾಂಶ ಅಳವ­ಡಿಸಿ­ಕೊಂಡರೆ ಕಡ­ತ­ಗಳನ್ನು ತ್ವರಿತಗತಿ­ಯಲ್ಲಿ ವಿಲೇವಾರಿ ಮಾಡಬಹುದು. ಕಡತ­ಗಳು ಯಾವ ಹಂತದಲ್ಲಿವೆ ಎಂಬು­ದನ್ನು ತಿಳಿದು­ಕೊಳ್ಳಲು ಸುಲಭವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT