ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನ ಮುಂದುವರಿಕೆಗೆ ಹೊಸ ಪದ್ಧತಿ ಜಾರಿ: ಸ್ಮೃತಿ

ಉದ್ಯೋಗಕ್ಕಾಗಿ ವ್ಯಾಸಂಗ ಮೊಟಕು
Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲೇ ಬಿಡುವವರಿಗೆ ಪುನಃ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವ ‘ಬಾಕಿ ವ್ಯಾಸಂಗ ವರ್ಗಾವಣೆ ವ್ಯವಸ್ಥೆ’ಯನ್ನು (ಕ್ರೆಡಿಟ್‌ ಇಕ್ವಿವಲೆಂಟ್‌ ಟ್ರಾನ್‌್ಸಫರ್‌ ಸಿಸ್ಟಮ್‌) ನವೆಂಬರ್‌ ೧೧ರ ಶಿಕ್ಷಣ ದಿನಾಚರಣೆಯಂದು ಕೇಂದ್ರ ಸರ್ಕಾರ ಆರಂಭಿಸಲಿದೆ.

ಇದೇ ವೇಳೆ ಸರ್ಕಾರವು ಮುಂದಿನ ವರ್ಷ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಬಗ್ಗೆಯೂ ಪರಿಶೀಲಿಸುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ‘ಭಾರತ ಆರ್ಥಿಕ ಶೃಂಗಸಭೆ’ಯಲ್ಲಿ ಬುಧವಾರ ಹೇಳಿದರು.

ಉದ್ಯೋಗಕ್ಕಾಗಿ ವ್ಯಾಸಂಗವನ್ನು ಅರ್ಧದಲ್ಲಿ ಬಿಟ್ಟವರಿಗೆ ತಾವು ಇಷ್ಟಪಟ್ಟ ಯಾವುದೇ ಸಂದರ್ಭದಲ್ಲಿ ಬಾಕಿ ಉಳಿದ ವ್ಯಾಸಂಗವನ್ನು ಒಂದು ಶೈಕ್ಷಣಿಕ ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾಯಿಸಿಕೊಳ್ಳಲು ಹೊಸ ವ್ಯವಸ್ಥೆ ಅನುವು ಮಾಡಿಕೊಡಲಿದೆ.

ಆರಂಭದಲ್ಲಿ ಇದನ್ನು ೯ನೇ ತರಗತಿಗೆ ಜಾರಿಗೊಳಿಸಿ, ಬರುವ ಜನವರಿಯಿಂದ ಪಿಎಚ್‌.ಡಿ ವರೆಗಿನ ವ್ಯಾಸಂಗದ ತನಕ ವಿಸ್ತರಿಸಲಾಗುತ್ತದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಈ ಪದ್ಧತಿಯನ್ನು ಅನುಷ್ಠಾನಗೊಳಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಆದೇಶ ಪಾಲನೆ ಕಷ್ಟ
ನವದೆಹಲಿ (ಪಿಟಿಐ)
: ನ್ಯಾಯಾಲಯಗಳು ನೀಡುವ ಕೆಲವು ಆದೇಶಗಳನ್ನು ಅನುಷ್ಠಾನಗೊಳಿಸುವುದು ತುಂಬಾ ಕಷ್ಟ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದಾರೆ. ಪರಿಸರ ಮತ್ತಿತರ ವಿಷಯ ಗಳಿಗೆ ಸಂಬಂಧಿಸಿದ ದಾವೆ ಗಳಿಂದಾಗಿ ಹಲವು ಯೋಜನೆಗಳು ವಿಳಂಬವಾಗುತ್ತಿರುವು ದನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಹೀಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT