ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿಗೆ ಸಂಬಳ ಇಲ್ಲ

ಕರ್ನಾಟಕ ಕೇಂದ್ರೀಯ ವಿ.ವಿ ಪ್ರಭಾರ ಕುಲಪತಿ ಸ್ಪಷ್ಟನೆ
Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ­ಯದ ಕುಲಾಧಿಪತಿ ಡಾ.ಯು.­ಆರ್.ಅನಂತಮೂರ್ತಿ ಅವರದ್ದು ಗೌರವ ಸ್ಥಾನವಾಗಿದ್ದು (Honorary Position), ವಿ.ವಿ.ಯಿಂದ ಅವರಿಗೆ ಯಾವುದೇ ರೀತಿಯ ಸಂಬಳ ಪಾವತಿಸುತ್ತಿಲ್ಲ ಎಂದು ವಿ.ವಿ ಪ್ರಭಾರ ಕುಲಪತಿ ಪ್ರೊ.ಎಂ.ಎನ್.­ಸುಧೀಂದ್ರ­ರಾವ್ ಸ್ಪಷ್ಟಪಡಿಸಿದ್ದಾರೆ.

ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಪತ್ರ ಸಂಖ್ಯೆ ನಂ.ಎಫ್.57–5/2012) ವತಿಯಿಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಅನಂತಮೂರ್ತಿ ಅವರನ್ನು ಐದು ವರ್ಷಗಳ ಅವಧಿಗೆ ಕುಲಾಧಿಪತಿಯಾಗಿ ನೇಮಕ ಮಾಡಿದ್ದು, 2012ರ ಆಗಸ್ಟ್ 17 ರಿಂದ ಅನಂತಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಅವರ ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು ₨ 15 ಸಾವಿರ ಪಾವತಿಸ­ಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರವಾಸ­ಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನ­ದಂತೆ ಪ್ರಯಾಣ ಹಾಗೂ ತುಟ್ಟಿಭತ್ಯೆ  ನೀಡಲಾಗುತ್ತದೆ.

ಪ್ರಥಮ ದರ್ಜೆ ಹವಾನಿಯಂತ್ರಿತ ಬೋಗಿ (ಎ.ಸಿ) ಹಾಗೂ ಎಕ್ಸಿಕ್ಯುಟಿವ್ ದರ್ಜೆ ವಿಮಾನದಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT