ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹಿಂದೂಗಳ ಸಂಖ್ಯೆ ಏರಿಕೆ

Last Updated 13 ಮೇ 2015, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದಲ್ಲಿ ಹಿಂದೂಗಳ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ಏಳು ವರ್ಷಗಳಲ್ಲಿ 10 ಲಕ್ಷದ ಗಡಿ ದಾಟಿದೆ ಎಂದು ಅಧ್ಯಯನವೊಂದು ತಿಳಿಸಿದೆ.

2007ರ ಅಂಕಿ–ಅಂಶದ ಪ್ರಕಾರ ಹಿಂದೂಗಳ ಜನಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯ ಶೇ 0.4 ರಷ್ಟಿತ್ತು. 2014ರ ವೇಳೆಗೆ ಇದು ಶೇ 0.7ಕ್ಕೆ ಏರಿಕೆಯಾಗಿದೆ.

‘ಅಮೆರಿಕದ ಜನಸಂಖ್ಯೆಯಲ್ಲಿ ಶೇ 0.9 ರಷ್ಟು ಮುಸ್ಲಿಮರು ಇದ್ದರೆ, ಶೇ 0.7 ರಷ್ಟು ಬೌದ್ಧ ಧರ್ಮದವರು ಇದ್ದಾರೆ’ ಎಂದು ಅಧ್ಯಯನ ವಿವರಿಸಿದೆ. 

ಹಿಂದೂಗಳು ಮತ್ತು ಯೆಹೂದಿಗಳು ಶೈಕ್ಷಣಿಕವಾಗಿ ಇತರ ಧರ್ಮದವರಿಗಿಂತ ಮುಂದೆ ಇದ್ದಾರೆ ಎಂಬುದು ತಿಳಿದುಬಂದಿದೆ.

‘ಅಮೆರಿಕದಲ್ಲಿರುವ ಹಿಂದೂಗಳಲ್ಲಿ ಶೇ 77ರಷ್ಟು ಮಂದಿ ಮತ್ತು ಯೆಹೂದಿಗಳಲ್ಲಿ ಶೇ 59 ಮಂದಿ ಕಾಲೇಜು ಪದವಿ ಪಡೆದಿದ್ದಾರೆ. ಅಮೆರಿಕದ ಯುವಕರಿಗೆ (ಶೇ 27) ಹೋಲಿಸಿದರೆ ಇದು ತುಂಬಾ ಹೆಚ್ಚು’ ಎಂದು ಅಧ್ಯಯನ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT