ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಪತ್ರಕರ್ತನ ಶಿರಚ್ಛೇದ

ಇರಾಕ್‌ ಮೇಲೆ ವಾಯು ದಾಳಿಗೆ ಪ್ರತೀಕಾರ
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೈರೂತ್‌ (ಎಎಫ್‌ಪಿ): ಇರಾಕ್‌ ಮೇಲೆ ಅಮೆರಿಕ ನಡೆಸುತ್ತಿರುವ ವಾಯು ದಾಳಿಗೆ ಪ್ರತೀಕಾರವಾಗಿ ಅಮೆ­ರಿಕದ ಪತ್ರಕರ್ತ ಜೇಮ್ಸ್‌ ಫೋಲಿ ಅವರ ತಲೆ ಕತ್ತರಿಸಲಾಗಿದೆ ಎಂದು ಜಿಹಾದಿ ಗುಂಪು ಇಸ್ಲಾಮಿಕ್‌ ಸ್ಟೇಟ್‌ ಹೇಳಿ­ಕೊಂಡಿದೆ.

ಮುಸುಕು ಹಾಕಿಕೊಂಡಿರುವ ಉಗ್ರರು ಪತ್ರಕರ್ತ ಫೋಲಿ ಅವರ ತಲೆ ಕತ್ತರಿಸುವ ದೃಶ್ಯಗಳಿರುವ ವಿಡಿಯೊ­ವನ್ನು ಉಗ್ರರು ಬಿಡುಗಡೆ ಮಾಡಿ­ದ್ದಾರೆ. 2012ರ ನವೆಂಬರ್‌ನಲ್ಲಿ ಶಸ್ತ್ರಧಾರಿ ಉಗ್ರರು ಫೋಲಿ ಅವರನ್ನು ಸಿರಿಯಾದಿಂದ ಅಪಹರಿಸಿದ್ದರು.
ಅನುಭವಿ ಪತ್ರಕರ್ತ ಫೋಲಿ ಲಿಬಿಯಾ ಯುದ್ಧವನ್ನು ವರದಿ ಮಾಡಿ­ದ್ದರು. ನಂತರ ಅವರು ಗ್ಲೋಬಲ್‌ ಪೋಸ್ಟ್‌, ಎಎಫ್‌ಪಿ ಮುಂತಾದ ಸಂಸ್ಥೆ­ಗಳಿ­ಗಾಗಿ ಸಿರಿಯಾ­ದಲ್ಲಿ ಬಷರ್‌ ಅಲ್‌ ಅಸದ್‌ ವಿರುದ್ಧ ನಡೆಯುತ್ತಿದ್ದ ದಂಗೆಯ ವರದಿ ಮಾಡಲು ಸಿರಿಯಾಕ್ಕೆ ಹೋಗಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, 2012ರ ನವೆಂಬರ್‌ 22ರಂದು ಉತ್ತರ ಸಿರಿ­ಯಾದ ಇಡ್ಲಿಬ್‌ ಪ್ರಾಂತ್ಯ­ದಿಂದ ಫೋಲಿ ಅವರನ್ನು ಅಪಹರಿಸ­ಲಾ­ಗಿತ್ತು. ಫೋಲಿ ಬಗೆಗಿನ ಮಾಹಿತಿಗಾಗಿ ಅವರ ಕುಟುಂಬ ಸಾರ್ವಜನಿಕ ಅಭಿ­ಯಾನ­ವನ್ನೇ ನಡೆಸಿತ್ತು. ಆದರೂ ಫೋಲಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. 

ಐದು ನಿಮಿಷದ ವಿಡಿಯೊವನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಉತ್ತರ ಇರಾಕ್‌ನಲ್ಲಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವಂತೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಆದೇಶ ನೀಡಿದ ನಂತರ ಫೋಲಿ ಹತ್ಯೆ ಮಾಡಲಾಗಿದೆ ಎಂದು ಉಗ್ರರು ಹೇಳಿಕೊಂಡಿದ್ದಾರೆ. ಮರುಭೂಮಿಯಂತಹ ಪ್ರದೇಶ­ದಲ್ಲಿ ಫೋಲಿ ಅವರ ಹತ್ಯೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT