ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ಗೆ 30

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ಬಿಟೌನ್ ಔರಂಗಜೇಬ್ ಅರ್ಜುನ್ ಕಪೂರ್ ಇದೀಗ 30ಕ್ಕೆ ಕಾಲಿಟ್ಟಿದ್ದು, ಬಾಲಿವುಡ್‌ ದಿಗ್ಗಜರು ಅವರಿಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ.

ತಂದೆ ಬೋನಿ ಕಪೂರ್ ಹಾಗೂ ಚಿಕ್ಕಪ್ಪ ಸಂಜಯ್ ಕಪೂರ್ ಕೂಡ ಚಿತ್ರಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದವರು. ಅವರ ನೆರಳಿನಲ್ಲಿಯೇ ಬೆಳೆದ ಅರ್ಜುನ್‌ ಅಳುಕಿನಿಂದಲೇ ಬಾಲಿವುಡ್‌ ಪ್ರವೇಶ ಪಡೆದವರು. 2003ರಲ್ಲಿ ‘ಕಲ್‌ ಹೋ ನಾ ಹೋ’ ಚಿತ್ರದಲ್ಲಿ ನಿಖಿಲ್ ಅದ್ವಾನಿ ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅರ್ಜುನ್, ನಂತರ ಅವರ ಜೊತೆಗೇ ‘ಸಲಾಮ್–ಇ–ಇಶ್ಕ್’ ಚಿತ್ರದಲ್ಲಿಯೂ ಕೆಲಸ ಮಾಡಿದರು. ಆದರೆ ಅವರ ನಟನಾ ಬದುಕು ಆರಂಭವಾದದ್ದು 2012ರಲ್ಲಿ ತೆರೆಕಂಡ ‘ಇಶ್ಕ್‌ಜಾದೆ’ ಚಿತ್ರದ ಮೂಲಕವೇ.

ಅತಿಯಾದ ತೂಕ ಹೊಂದಿದ್ದ ಅರ್ಜುನ್, ಈ ಚಿತ್ರಕ್ಕಾಗಿ ಅಷ್ಟೊಂದು ಸ್ಲಿಮ್ ಮತ್ತು ಸ್ಮಾರ್ಟ್‌ ಆಗಲು ಅದೇನು ಕಸರತ್ತು ನಡೆಸಿದ್ದಿರಬಹುದು ಎನ್ನುವುದು ಆಗ ಬಿಟೌನ್‌ನ ಬಿಸಿಬಿಸಿ ಸುದ್ದಿಯಾಗಿತ್ತು. 2013ರಲ್ಲಿ ತೆರೆಕಂಡ ‘ಔರಂಗಜೇಬ್’ ಚಿತ್ರದ ನಂತರ ಅರ್ಜುನ್ ತಿರುಗಿ ನೋಡಿದ್ದೇ ಇಲ್ಲ.  ‘ಗುಂಡೇ’ ಹಾಗೂ ‘2 ಸ್ಟೇಟ್ಸ್‌’ನಂತಹ ಚಿತ್ರಗಳನ್ನು ಕೊಟ್ಟ ಅರ್ಜುನ್, ತಮ್ಮ ಚಿತ್ರ ಬದುಕಿಗೆ ಅಪ್ಪ ಬೋನಿ ಕಪೂರ್, ಚಿಕ್ಕಪ್ಪ ಸಂಜಯ್ ಕಪೂರ್ ಹಾಗೂ ಸಹೋದರಿ ಸೋನಂ ಕಪೂರ್ ಅವರ ಪ್ರೀತಿ–ಪ್ರೋತ್ಸಾಹದ ಕೊಡುಗೆ ದೊಡ್ಡದಿದೆ ಎಂದಿದ್ದಾರೆ.

ಅರ್ಜುನ್ ಹುಟ್ಟುಹಬ್ಬಕ್ಕೆ ಮನಸ್ಸು ತುಂಬಿ ಶುಭಾಶಯ ತಿಳಿಸಿರುವ ಸಹೋದರಿ ಸೋನಂ ಕಪೂರ್, ’ನನ್ನ ಪ್ರೀತಿಯ, ಪ್ರೀತಿಯ ಸಹೋದರನಿಗೆ ಹುಟ್ಟು ಹಬ್ಬದ ಶುಭಾಶಯ. ನೂರು ವರ್ಷ ಹೀಗೇ ಆರೋಗ್ಯದಿಂದಿರು’ ಎಂದು ಹಾರೈಸಿದ್ದಾರೆ. ಅಲ್ಲದೇ, ನಟ ಅಭಿಶೇಕ್ ಬಚ್ಚನ್, ಶಾನೂ ಶರ್ಮಾ, ಶೃತಿ ಹಾಸನ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT