ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಯಾ ಕನಸು

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಪ್ಪ ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು. ಮಗಳು ನಟಿ. ನಟಿಸಿದ ಸಿನಿಮಾಗಳ ಪ್ರಚಾರಕ್ಕೆ ಹೋದರೆ ಮೊದಲು ಎದುರಾಗುವ ಪ್ರಶ್ನೆ ನಿಮ್ಮ ತಂದೆಯ ಜತೆ ಕೆಲಸ ಮಾಡುವ ಆಸೆ ಇದೆಯೇ ಎಂದು. ‘ಅವರು ನಿರ್ದೇಶನ ಮಾಡಿದರೆ ನಾನು ಸಿದ್ಧ’ ಎಂಬುದು ಮಗಳ ಉತ್ತರ. ಆ ಅಪ್ಪನ ಹೆಸರು ಮಹೇಶ್ ಭಟ್‌. ಮಗಳು ಅಲಿಯಾ ಭಟ್‌. ‘ಹೈವೆ’ ಸಿನಿಮಾದಲ್ಲಿ ಮುಗ್ಧತೆಯ ಜತೆಗೆ ಗಂಭೀರವಾಗಿ ಕಂಡರೂ ನುಡಿಯುವ ಪದಗಳನ್ನು ಅಳೆದು ತೂಗಿ ಮಾತನಾಡುತ್ತಾರೆ.

ಇಮ್ತಿಯಾಜ್‌ ಅಲಿ ಅವರ ಹೈವೆ ಸಿನಿಮಾದಲ್ಲಿ ನಟಿಸಿದ ಅಲಿಯಾ, ತಂದೆ ಮಹೇಶ್‌ ಭಟ್‌ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಕನಸು ಕಟ್ಟಿಕೊಂಡಿದ್ದಾರಂತೆ. ‘ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ, ಹಾಗಾಗಿ ನಾನು ಇನ್ನು ಬೇರೆ ಕನಸು ಕಟ್ಟಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ಈ ಬೆಡಗಿ.

‘ನನ್ನ ತಂದೆ ನಿರ್ದೇಶಿಸಿದ ಸಿನಿಮಾ ದಲ್ಲಿ ಮೊದಲ ಬಾರಿ ನಟಿಸಿದರೆ ನನ್ನ ಸಾಮರ್ಥ್ಯವನ್ನು ತೋರಿಸುವುದಕ್ಕೆ ಆಗುತ್ತಿರಲಿಲ್ಲ. ಬೇರೆ ನಿರ್ದೇಶಕರ ಜತೆ ಕೆಲಸ ಮಾಡಿದಾಗ ನಮ್ಮ ನಟನೆಯಲ್ಲಿ ಪಕ್ವತೆ ಕಂಡುಕೊಳ್ಳಬಹುದು’ ಎಂದು ಅನುಭವದ ಮಾತನ್ನಾಡಿದ್ದಾರೆ ಅಲಿಯಾ. ಅಲಿಯಾ ಸದ್ಯಕ್ಕೆ ‘2–ಸ್ಟೇಟ್ಸ್‌’ ಹಿಂದಿ  ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT