ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರ ಈ ಪರಿವೀಕ್ಷಣಾ ಮಂದಿರ

Last Updated 22 ಡಿಸೆಂಬರ್ 2014, 7:02 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಪ್ರವಾಸಿ ಮಂದಿರವನ್ನು ಸೂಕ್ತವಾಗಿ ನಿರ್ವಹಿ­ಸಲು ಲೋಕೋಪಯೋಗಿ ಇಲಾಖೆ ಅಧಿ­ಕಾರಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ದೂರಿದ್ದಾರೆ.

ಪರಿವೀಕ್ಷಣಾ ಮಂದಿರದಲ್ಲಿ ಕೂರಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಗೋಡೆಗಳೆಲ್ಲಾ ಹಾಳಾಗಿ ಬಣ್ಣ ಕಳೆದುಕೊಂಡಿವೆ, ಸೊಳ್ಳೆ, ತಿಗಣೆಗಳ ಆವಾಸ ಸ್ಥಾನವಾಗಿದೆ. ಉದ್ಯಾನ ನೀರು ಕಾಣದೆ ಒಣಗಿದೆ ಎಂದರು.

ಹೊರಗಿನ ಅತಿಥಿಗಳು ಬಂದರೆ ಪರಿ­ವೀಕ್ಷಣಾ ಮಂದಿರಕ್ಕೆ ಕರೆದು­ಕೊಂಡು ಬರಲು ಬೇಸರವಾಗುತ್ತದೆ. ತಾವು ಶಾಸ­ಕರಿದ್ದಾಗ ಹೆಚ್ಚುವರಿ ಕೊಠ­ಡಿ­ಗ­ಳನ್ನು ನಿರ್ಮಿಸಿ ಬರುವ ಅತಿಥಿಗಳಿಗೆ ವ್ಯವ­ಸ್ಥಿತವಾದ ಆಸನಗಳ ವ್ಯವಸ್ಥೆ­ಮಾಡ­ಲಾಗಿತ್ತು. ಈಗ ಅತಿಥಿ­ಗಳು ಬಂದರೆ ಕಿತ್ತು ಹೋದ ಆಸನಗಳ ಮೇಲೆ ಕೂರಿಸಬೇಕಾದ ಪರಿಸ್ಥಿತಿಯಿದೆ ಎಂದರು. ಆದಷ್ಟು ಶೀಘ್ರವಾಗಿ ಇಲ್ಲಿನ ಅವ್ಯ­ವಸ್ಥೆ ಸರಿಪಡಿಸದಿದ್ದಲ್ಲಿ ಲೋಕೋ­­ಪಯೋಗಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT