ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಕ್ಕೆ ‘ಸುಪ್ರೀಂ’ ನೋಟಿಸ್

ಕೃಷ್ಣಾ ನ್ಯಾಯಮಂಡಳಿ ನದಿ ನೀರು ಹಂಚಿಕೆ
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೃಷ್ಣಾ ನ್ಯಾಯಮಂಡಳಿ ನದಿ ನೀರು ಹಂಚಿಕೆ ಮಾಡಿರುವ ವಿಧಾನ ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಅರ್ಜಿಯ ಸಂಬಂಧವಾಗಿ ಆಂಧ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿತು.

ನ್ಯಾ. ಎಸ್‌.ಜೆ. ಮುಖ್ಯೋಪಾಧ್ಯಾಯ ಹಾಗೂ ನ್ಯಾ. ಪ್ರಫುಲ್ಲಚಂದ್ರ ಪಂತ್‌ ಅವರನ್ನೊಳಗೊಂಡ ನ್ಯಾಯ­ಪೀಠವು, ಕೃಷ್ಣಾ ನ್ಯಾಯಮಂಡಳಿ 2010 ಹಾಗೂ 2013ರಂದು  ನೀಡಿರುವ ಆದೇಶ ಪ್ರಶ್ನಿಸಿ ಆಂಧ್ರ­­ಪ್ರದೇಶ ಸಲ್ಲಿಸಿರುವ ಎರಡು ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು. ಈ ಅರ್ಜಿಗಳಿಗೆ ಉತ್ತರಿ­ಸುವಂತೆ ನ್ಯಾಯಪೀಠವು ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಕೇಳಿದೆ.

ಆಂಧ್ರ ಪ್ರದೇಶ ಸರ್ಕಾರವು ಆಲ­ಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಲು ಕರ್ನಾಟಕಕ್ಕೆ ಅನುಮತಿ ನೀಡಿ­ರುವ ನ್ಯಾಯ ಮಂಡಳಿ ಆದೇಶ­ವನ್ನು ಪ್ರಶ್ನಿಸಿದೆ. ಕೃಷ್ಣಾ ನ್ಯಾಯಮಂಡಳಿ ಕಳೆದ ವರ್ಷ ನವೆಂಬರ್‌ 29ರಂದು ತನ್ನ ವ್ಯಾಪ್ತಿ ಮೀರಿ ನದಿ ನೀರು ಹಂಚಿಕೆ ಮಾಡಿದೆ ಎಂದು ಕರ್ನಾಟಕ ಪ್ರತಿಪಾದಿಸಿದೆ.

ಎರಡನೇ ಕೃಷ್ಣಾ ನ್ಯಾಯ­ಮಂಡಳಿಯು ರಾಜ್ಯದ ನೀರಿನ ಪಾಲನ್ನು 911 ಟಿಎಂಸಿ ಅಡಿಯಿಂದ 907 ಟಿಎಂಸಿ ಅಡಿಗೆ ತಗ್ಗಿಸಿರುವುದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಆಂಧ್ರ ಹಾಗೂ ಮಹಾರಾಷ್ಟ್ರ ಸರ್ಕಾರವೂ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಅಲ್ಲದೆ, ಸರ್ವೋಚ್ಚ ನ್ಯಾಯಾಲಯ ತೀರ್ಪಿನ ವ್ಯಾಪ್ತಿ­­ಗೊಳಪಟ್ಟು ನ್ಯಾಯ­ಮಂಡಳಿ ಐತೀರ್ಪು ಅಧಿ­ಸೂಚನೆ ಹೊರಡಿಸಲು ಕೇಂದ್ರಕ್ಕೆ ಸೂಚಿಸುವಂತೆ ಮಹಾ­ರಾಷ್ಟ್ರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕರ್ನಾಟಕವೂ ಮಹಾರಾಷ್ಟ್ರ ನಿಲುವನ್ನು ಬೆಂಬಲಿಸಿದೆ. ಕಾವೇರಿ ನದಿ ನೀರಿನ ವಿವಾದ ಸರ್ವೋಚ್ಚ ನ್ಯಾಯಾಲಯದ ಮುಂದಿ-­ದ್ದರೂ, ಅಧಿ­ಸೂಚನೆ ಹೊರಡಿಸಲಾಗಿದೆ ಎಂದು ಕರ್ನಾಟಕ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಾದಿಸಿದೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಆರು ವಾರಗಳ ಕಾಲ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT