ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಹೋಮ್!

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ‘ಸ್ಮಾರ್ಟ್‌ಸಿಟಿ’ ಬಗ್ಗೆ ಪ್ರಸ್ತಾಪಿಸಿದೆ. ಇದೇ ವೇಳೆ, ಬೆಂಗಳೂರು, ನವ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮೊದಲಾದ ದೊಡ್ಡ ನಗರ ಗಳಲ್ಲಿ ‘ಸ್ಮಾರ್ಟ್‌ಹೋಮ್‌’ಗಳು ಅವತರಿಸಲಾರಂಭಿಸಿವೆ.

ನಿರಂತರ ಅಂತರ್ಜಾಲ ಸಂಪರ್ಕದಲ್ಲಿ ಇರುವ ಇಂದಿನ ಯುವಪೀಳಿಗೆಯವರೇ ಸ್ಮಾರ್ಟ್ ಹೋಮ್ (ಸತತ ಸಂಪರ್ಕದ ಸುಸಜ್ಜಿತ ಮನೆ) ಪರಿಕಲ್ಪನೆಗೆ ಪ್ರೇರಣೆ ಒದಗಿಸಿದವರು ಎನ್ನಬ ಹುದು. ಈಗಂತೂ ಬಹಳಷ್ಟು ಮಂದಿಯ ಅಂಗೈಯಲ್ಲಿ ಸ್ಮಾರ್ಟ್‌ ಫೋನ್, ಟ್ಯಾಬ್ಲೆಟ್ ಸೇರಿದಂತೆ ತಂತ್ರಜ್ಞಾನದ ಲೋಕವೇ ಅವತ ರಿಸಿದೆ. ಜನರ ಮುಷ್ಟಿಯೊಳಗಿನ ಈ ಅತ್ಯಾಧುನಿಕ ಗ್ಯಾಡ್ಜೆಟ್‌ಗಳು ಮತ್ತು ಬದಲಾದ ಜೀವನಶೈಲಿ ಹಾಗೂ ತಂತ್ರಜ್ಞಾನದ ಮೇಲಿನ ಅವಲಂಬನೆ ಮೊದಲಾದ ಅಂಶಗಳೇ ಸ್ಮಾರ್ಟ್ ಹೋಮ್ ಪರಿಕಲ್ಪನೆ ವಾಸ್ತವಕ್ಕಿಳಿಯಲು ಉತ್ತೇಜನ ನೀಡಿವೆ.

ಇತ್ತೀಚೆಗೆ ಮಾರುಕಟ್ಟೆಗೆ ದಾಂಗುಡಿ ಇಡುತ್ತಿರುವ ಸ್ಮಾರ್ಟ್ ಡಿವೈಸ್‌ಗಳಿಂದಾಗಿ ಜನರ ನಡುವಿನ  ಸಂಪರ್ಕದ ಕವಲುಗಳು ನಿರಂತರವಾಗಿವೆ.  ಅಂತರ್ಜಾಲ ಸಂಪರ್ಕ ಎಂಬುದು ಈಗಿನ ಬದುಕಿನ ಮೂಲ ಅವಶ್ಯಕತೆಗಳಲ್ಲಿ ಒಂದು ಎನಿಸಿಬಿಟ್ಟಿದೆ. ಈ ತಲೆಮಾರಿನವರ ಅಗತ್ಯ ಹಾಗೂ ಬೇಡಿಕೆಗಳಿಗೆ ತಕ್ಕಂತೆಯೇ ಹೊಸಬಗೆಯ ಹಾಗೂ ಸುಧಾರಣೆಗೊಂಡ ಸೇವೆಗಳೂ ಬಳಕೆಗೆ ಬಂದಿವೆ. ಆದರೆ, ಇಂತಹ ಆಧುನಿಕ ಸೇವೆಗಳನ್ನು ಮನೆ ಮಂದಿಯೆಲ್ಲಾ ಪಡೆದುಕೊಳ್ಳಬೇಕೆಂದರೆ ನಿರಂತರವಾದ ಹಾಗೂ ಕ್ಷಿಪ್ರಗತಿಯ ಅಂತರ್ಜಾಲ ಸಂಪರ್ಕ ಅಗತ್ಯವಾಗಿರುತ್ತದೆ.

ಉದಾಹರಣೆಗೆ ಸ್ಮಾರ್ಟ್ ಟಿವಿ, ಹೋಮ್ ಥಿಯೇಟರ್ ಸಿಸ್ಟೆಂ, ಮಕ್ಕಳಿಗೆ ಬಲು ಇಷ್ಟವಾದ ಗೇಮಿಂಗ್ ವ್ಯವಸ್ಥೆ, ಮನೆಯಲ್ಲಿನ ಎಲ್ಲರ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್ಸ್, ಗೃಹ ಬಳಕೆ ಉಪಕ ರಣಗಳು, ಮನೆ, ಕಚೇರಿ, ಗೋದಾಮು ಕಣ್ಗಾವಲಿಗೆಂದು ಅಳ ವಡಿಸಿಕೊಂಡ ಸಿಸಿಟಿವಿ ಕ್ಯಾಮೆರಾ ಸಹಿತವಾದ ಭದ್ರತಾ ವ್ಯವಸ್ಥೆ, ಹೋಮ್ ಆಟೊಮೇಷನ್ ಸಿಸ್ಟಂ ಮೊದಲಾದವು ಈಗ ಒಂದು ಆಧುನಿಕ ಮನೆಯ ಭಾಗವೇ ಆಗಿಬಿಟ್ಟಿವೆ.

ಆದರೆ, ಈ ಎಲ್ಲ ತಾಂತ್ರಿಕ ವ್ಯವಸ್ಥೆಗಳೂ ಸಮರ್ಪಕವಾಗಿ ಹಾಗೂ ಅಡೆತಡೆ ಇಲ್ಲದೇ ಕಾರ್ಯನಿರ್ವಹಿಸಬೇಕೆಂದರೆ ಅಂತರ್ಜಾಲದ ನಿರಂತರ ಸಂಪರ್ಕ ಅತ್ಯಗತ್ಯ. ಶರವೇಗದ ಅಂತರ್ಜಾಲ ಸಂಪರ್ಕ ಇದ್ದುಬಿಟ್ಟರಂತೂ ಈ ಆಧುನಿಕ ಸಾಧನಗಳು ಸುಲಭವಾಗಿ ಹಾಗೂ ವೇಗವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತವೆ. ಇದುವೇ ಈಗಿನ ಸಂದರ್ಭವನ್ನು ಇಂಟರ್ನೆಟ್ ಅಫ್ ಥಿಂಗ್ಸ್ (ಐಒಟಿ) ಅರ್ಥಾತ್ ಅಂತರ್ಜಾಲ ಆಧರಿಸಿದ ಸಾಮಗ್ರಿಗಳ ಕಾಲಮಾನವಾಗಿ ರೂಪಾಂತರ ಗೊಳಿಸಿದೆ.
ಇಂತಹ ಸೇವೆ, ಸೌಲಭ್ಯಗಳನ್ನು ತಮ್ಮ ಮನೆಗೆ ಬಯಸುವ ಗ್ರಾಹ ಕರಿಂದಾಗಿಯೇ ಕನೆಕ್ಟೆಡ್ ಹೋಮ್ಸ್ (ಸಂಪೂರ್ಣ ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟ ಮನೆ) ಪರಿಕಲ್ಪನೆ ಒಡಮೂಡಲು ಕಾರಣವಾಗಿದೆ.

ಇದು ಈಗಿನ ಪೀಳಿಗೆಯ ಜನರ ಕನೆಕ್ಟೆಡ್ ಲೈಫ್‌ ಸ್ಟೈಲ್‌ನಿಂದಲೂ ಪ್ರೇರಿತವಾಗಿದೆ ಎನ್ನುವುದೂ ಹೌದು. ಹೋಮ್ಸ್ ಆಫ್ ಫ್ಯೂಚರ್ (ಭವಿಷ್ಯದ ಮನೆಗಳು) ಎಂಬ ದೂರದೃಷ್ಟಿ ಯೋಜನೆಯು ಮನೆಯಲ್ಲಿನ ಪ್ರತಿಯೊಂದು ಎಲೆಕ್ಟ್ರಾನಿಕ್, ಎಲೆ ಕ್ಟ್ರಿಕ್, ಗೃಹ ಬಳಕೆ ಉಪಕರಣಗಳನ್ನು ಅಂತರ್ಜಾಲದಲ್ಲಿ ಸಂಪರ್ಕ ಗೊಳಿಸುತ್ತದೆ. ಅದರಿಂದ ನಿಗದಿತ ಸಮಯದಲ್ಲಿ ಉಪಕರಣಗಳು ಸ್ವಯಂಚಾಲಿತವಾಗಿ ನಿರ್ದಿಷ್ಟ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಾಗುತ್ತದೆ. ಇದರಿಂದ ಆ ಮನೆಯ ಎಲ್ಲ ಸದಸ್ಯರ ನಿತ್ಯದ ಚಟುವಟಿಕೆಗಳ ನಿರ್ವಹಣೆ ಬಹಳ ಸುಲಭಗೊಳ್ಳುತ್ತದೆ.

ಲ್ಯಾಂಡ್‌ಲೈನ್‌ ಕರೆ ಮೊಬೈಲ್‌ನಲ್ಲೇ ಸ್ವೀಕರಿಸಿ
ಉದಾಹರಣೆಗೆ, ಮನೆಯ ಹಜಾರದಲ್ಲಿರುವ ಲ್ಯಾಂಡ್‌ಲೈನ್‌ಗೆ (ಸ್ಥಿರ ದೂರವಾಣಿಗೆ) ಕರೆ ಬಂದಿದೆ. ಕಾರ್ಡ್‌್ಲೆಸ್ ಹ್ಯಾಂಡ್‌ಸೆಟ್ ಕೂಡ ಅದರ ಪಕ್ಕದಲ್ಲೇ ಉಳಿದುಬಿಟ್ಟಿದೆ. ನೀವು ಸ್ನಾನದ ಮನೆ ಯಲ್ಲೊ, ಹೊರಗೆ ಕೈತೋಟದಲ್ಲಿಯೋ ಅಥವಾ ತಾರಸಿ ಮೇಲೆ ವಿರಮಿಸುತ್ತಲೋ ಇದ್ದೀರಿ. ಸ್ಥಿರ ದೂರವಾಣಿಗೆ ಬಂದ ಕರೆಯನ್ನು ನೀವು ಸ್ವೀಕರಿಸಬೇಕೆಂದರೆ ಅದರ ಬಳಿಗೆ ಧಾವಿಸಲೇಬೇಕಿದೆ. ಅದು ಈವರೆಗಿನ ಪರಿಸ್ಥಿತಿ.

ಆದರೆ, ಈಗ ಸಂದರ್ಭ ಬದಲಾಗಿದೆ. ನಿಮ್ಮ ಜತೆಗೇ ಇರುವ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದಲೇ ಸ್ಥಿರ ದೂರವಾಣಿಗೆ ಬಂದ ಕರೆಯನ್ನು ಸ್ವೀಕರಿಸಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿರುವ ಒಂದು ಅಪ್ಲಿಕೇಷನ್ ಮತ್ತು ನಿಮ್ಮ ಮನೆಯ ಎಲ್ಲ ಎಲೆ ಕ್ಟ್ರಾನಿಕ್ ಉಪಕರಣಗಳನ್ನು ಪರಸ್ಪರ ಸಂಪರ್ಕಗೊಳಿಸಿರುವ ಅಂತರ್ಜಾಲ ವ್ಯವಸ್ಥೆ ಎಲ್ಲೇ ಇದ್ದರೂ ಸ್ಥಿರ ದೂರವಾಣಿ ಕರೆ ಸ್ವೀಕರಿಸುವ ಮತ್ತು ಕರೆ ಮಾಡುವ ಸುಲಭ ಸಾಧ್ಯವಾಗಿಸಿದೆ. ಅದುವೇ ಈ ಸ್ಮಾರ್ಟ್‌ಹೋಮ್ ಅಥವಾ ಕನೆಕ್ಟೆಡ್ ಹೋಮ್ ಪರಿಕಲ್ಪನೆಯ ಅನುಕೂಲ.
ಸಂಗೀತ ವಿಭಜನೆ

ನಿಮ್ಮ ಮನೆಯ ಹಿರಿಯರೋ, ಬಂಧುಗಳೋ ಟಿ.ವಿಯಲ್ಲಿ ಅವರಿಷ್ಟದ ಧಾರವಾಹಿಯನ್ನು ಬಲು ಆಸಕ್ತಿಯಿಂದ ನೋಡುತ್ತಿ ದ್ದಾರೆ. ಅಂತಹ ಸಂದರ್ಭದಲ್ಲಿಯೇ ನಿಮಗೆ ಶಾಸ್ತ್ರೀಯ ಸಂಗೀತ ಅಥವಾ ನಿಮ್ಮ ಮಗಳಿಗೆ ಪಾಪ್ ಗಾಯನ ಕೇಳಬೇಕಿಸುತ್ತದೆ. ಆದರೆ, ಹೋಮ್ ಥಿಯೇಟರ್ ಸಿಸ್ಟೆಂ ಹಜಾರದಲ್ಲಿನ ಸ್ಮಾರ್ಟ್ ಟಿವಿಗೆ ಬೆಸೆದುಕೊಂಡು ಬಿಟ್ಟಿದೆ. ಏನು ಮಾಡುವುದು?

ಚಿಂತಿಸಬೇಕಾದ ಅಗತ್ಯವೇ ಇಲ್ಲ. ನಿಮ್ಮದೇ ಕೊಠಡಿಯ ಲ್ಲಿರುವ ಇನ್ನೊಂದು ವೈರ್‌ಲೆಸ್ ಸ್ಮಾರ್ಟ್ ಸ್ಪೀಕರ್‌ನಲ್ಲಿ ನಿಮ್ಮಿಷ್ಟದ ಸಂಗೀತ, ಹಾಡು ಹೋಂ ಥಿಯೇಟರ್ ಎಫೆಕ್ಟ್‌ನಲ್ಲೇ ಬರುವಂತೆ ಮಾಡಬಹುದು. ಜತೆಗೆ, ಯು ಟ್ಯೂಬ್, ನಿಮ್ಮಿಷ್ಟ ಸಿನಿಮಾ, ರೇಡಿಯೊ, ಫೋಟೊ ಸ್ಟ್ರೀಮ್, ಆಪಲ್ ಈವೆಂಟ್ಸ್ ಮೊದಲಾದ ಸೇವೆಗಳನ್ನು ನಿಮ್ಮ ಸ್ಮಾರ್ಟ್ ಟಿವಿಯಲ್ಲೇ ಪಡೆದುಕೊಳ್ಳಬಹುದು. ಅದೂ ತಡೆರಹಿತವಾಗಿದೆ. ಇದೆಲ್ಲವನ್ನೂ ಸ್ಮಾರ್ಟ್‌ಹೋಮ್ ತಂತ್ರ ಜ್ಞಾನ ಮತ್ತು ಆಪಲ್ ಟಿವಿ ರೀತಿಯ ಅಪ್ಲಿಕೇಷನ್ ಸಾಧ್ಯ ವಾಗಿಸುತ್ತದೆ. ನಿಮ್ಮ ಸಾಮಾನ್ಯವಾದ ಅಂತರ್ಜಾಲ ಸಂಪರ್ಕದಲ್ಲಿ ನಿದಾನಗತಿ ಪ್ರಕ್ರಿಯೆ ನಿಮ್ಮ ಸಹನೆಯನ್ನೇ ಪರೀಕ್ಷಿಸುತ್ತಿರುತ್ತದೆ. ಆದರೆ, ಟಾಟಾ ಡೊಕೊಮೊದ ಕನೆಕ್ಟೆಡ್ ಹೋಮ್ ಸೇವೆಯಲ್ಲಿ ಪ್ರತಿ ಸೆಕೆಂಡ್‌ಗೆ 100 ಮೆಗಾಬೈಟ್ ವೇಗದಲ್ಲಿ ಅಂತರ್ಜಾಲ ಸಂಪರ್ಕ ಸಾಧ್ಯವಾಗುತ್ತದೆ.

ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಹಾಗಾಗಿ, ನಮ್ಮ ನಿತ್ಯದ ಬದುಕಿನಲ್ಲಿ ಸುರಕ್ಷತಾ ವ್ಯವಸ್ಥೆ ವಿಚಾರ ಬಹಳ ಪ್ರಮುಖವಾಗಿದೆ. ಅದರಲ್ಲೂ ಕುಟುಂಬದ ಸಂರಕ್ಷಣೆ, ಆಸ್ತಿಯ ರಕ್ಷಣೆಗೆ ವಿಶ್ವಾಸಾರ್ಹ ಭದ್ರತಾ ವ್ಯವಸ್ಥೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನೆಕ್ಟೆಡ್ ಹೋಮ್ಸ್ ಪರಿಕಲ್ಪನೆ ವಾಸ್ತವಕ್ಕಿಳಿಯಲು ವೇಗವಾಗಿ ಕೆಲಸ ಮಾಡುವಂತಹ ಬ್ರಾಡ್‌ಬ್ಯಾಂಡ್ ಸೇವೆ ಅಗತ್ಯವಾಗಿದೆ.

ಮನೆಯ ಕಣ್ಗಾವಲು
ನೀವು ವಾರದ ಮಟ್ಟಿಗೆ ಬೇರೆ ಊರಿಗೋ, ಪ್ರವಾಸಕ್ಕೋ ಹೋಗಿದ್ದೀರಿ. ನಿಮ್ಮ ಅನುಪಸ್ಥಿತಿಯಲ್ಲಿ ಮನೆಯೊಳಗೆ, ಹೊರಗೆ ಏನೇನಾಗುತ್ತಿದೆ ಎಂಬುದು ಮನೆಯ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯಲ್ಲಿ ಚಿತ್ರಿತವಾಗಿ, ಕ್ಲೌಡ್ ಸ್ಟೋರೇಜ್‌ನಲ್ಲಿ ದಾಖಲಾಗು ತ್ತಿರುತ್ತದೆ. ಅದೆಲ್ಲವನ್ನೂ ನೀವು ಎಲ್ಲೇ ಇದ್ದರೂ ನಿಮಗೆ ಸಮಯವಾದಾಗ ವೀಕ್ಷಿಸಬಹುದಾಗಿದೆ. ಒಂದೊಮ್ಮೆ ಇಡೀ ವಾರದ ಅಷ್ಟೂ ದೃಶ್ಯಾವಳಿಗಳನ್ನು ನೋಡಲು ನಿಮಗೆ ಸಮಯ ವಿಲ್ಲ. ಆಯ್ದ ಭಾಗ ನೋಡಬೇಕು ಅಥವಾ ಕೆಲವು ಭಾಗಗಳನ್ನು ಹಿಂದೆ ಮುಂದೆ ತಿರುಗಿಸಿ ವೀಕ್ಷಿಸಬೇಕು ಎಂದರೂ ಅದನ್ನೂ ಈ ಸ್ಮಾರ್ಟ್‌ಹೋಮ್ ತಂತ್ರಜ್ಞಾನ ಈಡೇರಿಸುತ್ತದೆ.

ಜತೆಗೆ, ಕ್ಯಾಮೆರಾಗೆ ಅಂತರ್ಜಾಲ ಸಂಪರ್ಕ ಇರುವುದರಿಂದ ಇನ್ನೊಂದು ಉಪಯೋಗವೂ ಇದೆ. ಕ್ಯಾಮೆರಾ ಎದುರು ವ್ಯಕ್ತಿಗಳ ಬರುತ್ತಿದ್ದಂತೆಯೇ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಇ ಮೇಲ್ ಮೂಲಕ ಎಚ್ಚರಿಕೆಯ ಸಂದೇಶವೂ ಸ್ವಯಂಚಾಲಿತವಾಗಿ ರವಾನೆ ಆಗುತ್ತದೆ. ಕಳ್ಳರು, ಅಪರಿಚಿತರು ನೀವಿಲ್ಲದಾಗ ಮನೆಯನ್ನು ಹೊಕ್ಕರೆ ತಕ್ಷಣವೇ ನೀವು ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವಾಗುತ್ತದೆ. ಹೀಗೆ ನೀವು ಮನೆಯಲ್ಲಿ ಇಲ್ಲದೇ ಇದ್ದರೂ ಅಮೂಲ್ಯ ವಸ್ತುಗಳು ಕಳ್ಳರ ಪಾಲಾಗುವುದನ್ನು ತಪ್ಪಿಸಬಹುದು.

ದೇಶದ ವಿವಿಧೆಡೆಯ ಬಹಳಷ್ಟು ಮನೆಗಳಲ್ಲಿ ಈಗ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿವಿಧ ಅಪ್ಲಿಕೇಷನ್ ಮತ್ತು ಅಂತರ್ಜಾಲದ ಮೂಲಕ ಪರಸ್ಪರ ಸಂಪರ್ಕಗೊಳಿಸುವುದು ಹೆಚ್ಚುತ್ತಿದೆ. 2015ರ ವೇಳೆಗೆ 2500 ಕೋಟಿ ಎಲೆಕ್ಟ್ರಾನಿಕ್ ಉಪಕರಣಗಳು ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟಿರುತ್ತವೆ, 2020ರ ವೇಳೆಗೆ ಇದರ ಪ್ರಮಾಣ 5000 ಕೋಟಿ ಉಪಕರಣಗಳಿಗೆ ಮುಟ್ಟಿರುತ್ತದೆ ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ. ಹಾಗಾಗಿ ಮಹಾನಗರಗಳಲ್ಲಿ ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಹೋಮ್‌ಗಳನ್ನು ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT