ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕ್ಷೇತ್ರ: ಹೆಚ್ಚು ಉದ್ಯೋಗ ಸೃಷ್ಟಿ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಆರೋಗ್ಯ ರಕ್ಷಣೆ ಸೇವೆಗಳ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. 2022ರ ವೇಳೆಗೆ ಏನಿಲ್ಲವೆಂದರೂ 74 ಲಕ್ಷ ಮಂದಿಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭ್ಯ ವಾಗಲಿದೆ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ದಿ ನಿಗಮ (ಎನ್‌ಎಸ್‌ಡಿಸಿ) ಗುರುವಾರ ಹೇಳಿದೆ.

2013ರಲ್ಲಿ ದೇಶದ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಸಿಬ್ಬಂದಿಗಳ ಬೇಡಿಕೆ 35.90 ಲಕ್ಷದಷ್ಟಿತ್ತು. 2022ರ ವೇಳೆಗೆ ಈ ಕ್ಷೇತ್ರದ ಮಾನವ ಸಂಪನ್ಮೂಲ ಬೇಡಿಕೆ ಅಕ್ಷರಶಃ ಎರಡಕ್ಕಿಂತಲೂ ಅಧಿಕ ಪಟ್ಟು ಇರಲಿದೆ ಎಂದು ಎನ್ಎಸ್‌ಡಿಸಿ ಅಂಕಿ ಅಂಶ ನೀಡಿದೆ.

2017ರಲ್ಲಿ ಆರೋಗ್ಯ ಸೇವೆಗಳ ಈ ವಲಯದ ವರಮಾನ ₨9.64 ಲಕ್ಷ ಕೋಟಿಗೂ ಅಧಿಕ ಪ್ರಮಾಣದ್ದಾಗಿರಲಿದೆ ಎಂದು ನಿಗಮ ವರದಿ ಪ್ರಕಟಿಸಿದೆ.

ಸದ್ಯ ದೇಶದಲ್ಲಿ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 5ರಷ್ಟನ್ನು ಮಾತ್ರವೇ ಆರೋಗ್ಯ ಸೇವೆಗಳಿಗಾಗಿ ವಿನಿ ಯೋಗಿಸಲಾಗುತ್ತಿದೆ. ನರ್ಸಿಂಗ್‌ ಸಹಾಯ ಕರು, ಸ್ವಚ್ಚತೆ ಮತ್ತು ವೈದ್ಯಕೀಯ ಸಹಾ ಯಕರು ಸೇರಿದಂತೆ ವೈದ್ಯಕೀಯ ಸೇವೆ ಗಳ ವಿಭಾಗದಲ್ಲಿ ಒಟ್ಟು 11 ಲಕ್ಷ ಮಂದಿ ವೃತ್ತಿ ನಿರತರು ಇದ್ದಾರೆ. ಆಲೋಪತಿ ವೈದ್ಯರ ಸಂಖ್ಯೆ 6.21 ಲಕ್ಷದಷ್ಟಿದೆ. ಆದರೆ, ಇದು ಈಗ ಇರುವ ಬೇಡಿಕೆಯ ಪ್ರಮಾಣ ಕ್ಕಿಂತಲೂ ಕಡಿಮೆಯೇ ಇದೆ.

ನೋಂದಾಯಿತ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಅನುಸರಿಸುವವರ ಸಂಖ್ಯೆಯೂ 7.50 ಲಕ್ಷದಷ್ಟಿದೆ ಎಂದು ಅಂಕಿ ಅಂಶ ನೀಡಿದೆ.

ಅಂಕಿ – ಅಂಶ
356 ನೋಂದಾಯಿತ ವೈದ್ಯಕೀಯ ಶಿಕ್ಷಣ ಸಂಸ್ಥೆ
45 ಸಾವಿರ ವೈದ್ಯಕೀಯ ಪದವಿ ಪ್ರವೇಶ ಅವಕಾಶ
24 ಸಾವಿರ ಸ್ನಾತಕೋತ್ತರ ವೈದ್ಯ ಪದವಿ ಪ್ರವೇಶ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT