ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹ್ವಾನದ ನಿರೀಕ್ಷೆಯಲ್ಲಿ ಜಶೋದಾ ಬೆನ್‌...

Last Updated 23 ಮೇ 2014, 19:38 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ):  ‘ನರೇಂದ್ರ ಮೋದಿ ಅವರು ದೇಶದ ಅತ್ಯುನ್ನತ ಸ್ಥಾನ ಏರು­ತ್ತಿರುವುದಕ್ಕೆ ಮತ್ತು ಇದೇ ಮೊದಲ ಬಾರಿ ನನ್ನನ್ನು ಪತ್ನಿ ಎಂದು ಒಪ್ಪಿ­ಕೊಂಡಿದ್ದಕ್ಕೆ ನನಗೆ ಭಾರಿ ಖುಷಿ­ಯಾಗಿದೆ’ ಎಂದು ಮೋದಿ ಪತ್ನಿ ಜಶೋ­ದಾ ಬೆನ್‌್ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

‘ಮೋದಿ ಪತ್ನಿ ಎಂದು ಹೇಳಿ­ಕೊಳ್ಳು­ವುದಕ್ಕೆ ನನಗೆ ಹೆಮ್ಮೆ ಎನ್ನಿಸು­ತ್ತಿದೆ. ಇಷ್ಟು ವರ್ಷಗಳು ಉರುಳಿ­ದರೂ ಅವರು ನನ್ನನ್ನು ಮರೆತಿಲ್ಲ. ನಿಜಕ್ಕೂ ಖುಷಿಯಾಗು­ತ್ತಿದೆ’ ಎಂದು ಗುಜ­ರಾತಿ ಟಿವಿ9ಗೆ ನೀಡಿದ ಸಂದರ್ಶನ­ದಲ್ಲಿ ಅವರು ತಿಳಿಸಿದ್ದಾರೆ.

‘ಅವರು ಎಂದೂ ನನ್ನ ಬಗ್ಗೆ ಕೆಟ್ಟ­ದಾಗಿ ಮಾತನಾಡಿಲ್ಲ. ನನಗೆ ಅವರ ಬಗ್ಗೆ ಅಪಾರ ಗೌರವ ಇದೆ. ನಾನು ಸದಾ ಅವರ ಪತ್ನಿ­ಯಾಗಿಯೇ ಉಳಿಯಲು ಬಯಸುತ್ತೇನೆ’ ಎಂದೂ ಮನ­ದಾ­ಳದ ಮಾತುಗಳನ್ನು ಹಂಚಿ­ಕೊಂಡಿದ್ದಾರೆ.

‘ಅವರು ದೇಶ ಸೇವೆಗಾಗಿ ಮನೆ ಬಿಟ್ಟು ಹೋದರು. ಆದ್ದರಿಂದ ನಾವಿಬ್ಬರು ಪ್ರತ್ಯೇಕವಾಗಬೇಕಾಯಿತು. ಸಮಯ ಬಂದಾಗ ಅವರನ್ನು ಭೇಟಿಯಾಗು­ತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಆಹ್ವಾನ ಕೊಟ್ಟರೆ ಖಂಡಿತವಾಗಿಯೂ ಪ್ರಮಾಣ­ವಚನ ಸಮಾರಂಭದಲ್ಲಿ ಭಾಗ­ವಹಿಸುತ್ತೇನೆ’ ಎಂದೂ ಅವರು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT