ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಷನ್ ನಟರ ಜತೆ ಶ್ರುತಿ ಹಾಸನ್‌ ನಟನೆ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಶ್ರುತಿ ಹಾಸನ್ ಅವರು ತಮ್ಮ ಮುಂಬರುವ ಚಿತ್ರಗಳಲ್ಲಿ ಬಿ ಟೌನ್‌ನಲ್ಲಿ ಆ್ಯಕ್ಷನ್‌ಗೆ ಹೆಸರಾದ ಅಕ್ಷಯ್‌ ಕುಮಾರ್‌, ಜಾನ್‌ ಅಬ್ರಹಾಂ ಮತ್ತು ವಿದ್ಯುತ್‌ ಜಾಮ್ವಾಲ್‌ ಅವರೊಂದಿಗೆ ನಟನೆ ಮಾಡಲಿದ್ದಾರೆ.

‘ಗಬ್ಬರ್‌’ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ‘ವೆಲ್‌ಕಂ ಬ್ಯಾಕ್‌’ನಲ್ಲಿ ಜಾನ್‌ ಅಬ್ರಹಾಂ ಮತ್ತು ‘ಯಾರಾ’ ಸಿನಿಮಾದಲ್ಲಿ ಜಾಮ್ವಾಲ್‌ ಅವರೊಂದಿಗೆ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂರೂ ಚಿತ್ರಗಳು ೨೦೧೫ರಲ್ಲಿ ತೆರೆ ಕಾಣಲಿವೆ. ಈ ಎಲ್ಲ ಸಿನಿಮಾಗಳು, ವಿಭಿನ್ನ ಕಥಾಹಂದರ ಹೊಂದಿವೆ. ಮೂರರಲ್ಲೂ ಶ್ರುತಿ ಅಭಿನಯಿಸುತ್ತಿರುವುದು ವಿಶೇಷ.

ಫೈಟಿಂಗ್ ಮತ್ತು ಸ್ಟಂಟ್‌ಗೆ ಅಕ್ಷಯ್‌ ಕುಮಾರ್‌ ಹೆಸರಾಗಿದ್ದಾರೆ. ಜಾನ್‌ ಅಬ್ರಹಾಂ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಹೊಸ ತಲೆಮಾರಿನ ನಟ ಜಾಮ್ವಾಲ್‌ ಅವರು ಮಾರ್ಷಲ್‌ ಆರ್ಟ್‌ ಹಿನ್ನೆಲೆ ಹೊಂದಿದವರು. ಈ ಎಲ್ಲ ಕಾರಣಕ್ಕಾಗಿ ಈ ಮೂರು ಚಿತ್ರಗಳಲ್ಲಿ ಭರಪೂರ ಆ್ಯಕ್ಷನ್‌ ಇರುವುದಂತೂ ಗ್ಯಾರಂಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT