ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಸಿಡ್‌ ದಾಳಿ, ವಿಷಕ್ಕೆ ಮೂರು ನಾಯಿಗಳು ಬಲಿ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ನಾಯಿಯನ್ನು ಮಹಡಿಯಿಂದ ಎಸೆದ ಮತ್ತು ಮರಿಗಳನ್ನು ಜೀವಂತ ಸುಟ್ಟ ಅಮಾನವೀಯ ಘಟನೆಗಳು ಮಾಸುವ ಮುನ್ನವೇ ಗರ್ಭ ಧರಿಸಿದ್ದ ನಾಯಿಗೆ ಆ್ಯಸಿಡ್‌ ಎರಚಿದ ಮತ್ತು ಮೂರು ನಾಯಿಗಳಿಗೆ ವಿಷ ಹಾಕಿದ ಘಟನೆ ಸಿಕಂದರಾಬಾದ್‌ನಲ್ಲಿ ಶುಕ್ರವಾರ ವರದಿಯಾಗಿದೆ.

ಸಿಕಂದರಾಬಾದ್‌ನಲ್ಲಿ ಈ   ಅಮಾನವೀಯ ಘಟನೆ  ನಡೆದಿದ್ದು, ಮೂರು ನಾಯಿಗಳು ಸಾವನ್ನಪ್ಪಿವೆ. ಪ್ರತಿನಿತ್ಯವೂ ತಮ್ಮ ಮನೆಯಲ್ಲಿ ನಾಯಿಗಳಿಗೆ ಆಹಾರ ನೀಡುವ ಅಣ್ಣಮ್ಮ ಜೋಸೆಫ್‌ ಎಂಬುವವರು ನಾಯಿಗಳು ನೋವಿನಿಂದ ನರಳುತ್ತಿರುವುದನ್ನು ನೋಡಿದ್ದಾರೆ.

ಅವುಗಳಲ್ಲಿ ಒಂದು ನಾಯಿಯ ಮುಖಕ್ಕೆ ಆ್ಯಸಿಡ್‌ ಎರಚಿರುವುದು ಪತ್ತೆಯಾಗಿದೆ. ತೀವ್ರ ಗಾಯದಿಂದ ನರಳಿ ಆ ನಾಯಿ ಮೃತಪಟ್ಟಿದೆ. ಅದರ ಜತೆಗೆ ಇನ್ನೂ ಮೂರು ನಾಯಿಗಳು ಅಸ್ವಸ್ಥಗೊಂಡಿದ್ದವು.

ಅವುಗಳಲ್ಲಿ ಎರಡು ನಾಯಿಗಳು ಮೃತಪಟ್ಟಿವೆ. ಅವುಗಳಿಗೆ ವಿಷ ಹಾಕಿರುವ ಅನುಮಾನ ವ್ಯಕ್ತವಾಗಿದೆ.ಈ ಸಂಬಂಧ ಅಣ್ಣಮ್ಮ ಜೋಸೆಫ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ನಾಯಿಗಳ ಮರಣೋತ್ತರ ಪರೀಕ್ಷೆಗೆ ಪೊಲೀಸರು ಆದೇಶಿಸಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಸುಳಿವು ನೀಡಿದವರಿಗೆ ₹50 ಸಾವಿರದವರೆಗೆ ಬಹುಮಾನ ನೀಡುವುದಾಗಿ ದಿ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್‌ ಸಂಸ್ಥೆ  ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT