ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂತಹ ಕ್ರೌರ್ಯ ಎಲ್ಲಿಯೂ ಆಗದಿರಲಿ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಬ್ಬಾ...! ನಂಬಲು ಅಸಾಧ್ಯ. ಕಡುವೈರಿಯ ಮಕ್ಕಳಾದರೂ, ಮನಸ್ಸು ಈ ಪರಿ ಕಲ್ಲಾಗದು. ಪೆಶಾವರದಲ್ಲಿ  ತಾಲಿಬಾನ್ ಉಗ್ರರಿಂದ ನಡೆದ ಮಕ್ಕಳ ಹತ್ಯಾಕಾಂಡಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ. ಉಗ್ರರ  ಅಟ್ಟಹಾಸ ನಿರಂತರವಾಗಿ ನಡೆಯುತ್ತಿರುವುದರಿಂದ ಒಂದು ರೀತಿಯ ಭಯದ ವಾತಾವರಣದಲ್ಲಿ ಸಿಕ್ಕಿಹಾಕಿಕೊಂಡಂತಿದೆ.

ಈ ಹತ್ಯಾಕಾಂಡ ಇವತ್ತು ಪಾಕಿಸ್ತಾನ­ದಲ್ಲಾಗಿ­ರಬಹುದು, ನಾಳೆ ನಮ್ಮ ದೇಶದಲ್ಲಿ ಕೂಡ ಆಗಬಹುದು. ದೇಶದ ರಕ್ಷಣಾ ವ್ಯವಸ್ಥೆ, ಪೋಲಿಸ್ ವ್ಯವಸ್ಥೆ ಎಚ್ಚೆತ್ತು­ಕೊಂಡು, ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳ ಬಗ್ಗೆ ವಿಶೇಷ ಸುರಕ್ಷತಾ ಕ್ರಮ­ಗಳನ್ನು ಅಳವಡಿಸಲೇಬೇಕು. ನೆರೆಹೊರೆ ರಾಷ್ಟ್ರಗಳಲ್ಲಿ ಆಗುತ್ತಿರುವ ದುಷ್ಕೃತ್ಯಗಳಿಂದ ನಾವು ಪಾಠ ಕಲಿಯದೇ ಹೋದರೆ, ಮುಂದೆ ನಾವು ಕೂಡ ಇಂತಹ­ದ್ದೊಂದು ಹತ್ಯಾಕಾಂಡಕ್ಕೆ ಗುರಿಯಾಗಬೇಕಾದೀತು.

ಮಕ್ಕಳಿಗೆ ನೀಡುವ ಶಿಕ್ಷಣದ ಗುಣಮಟ್ಟಕ್ಕಿಂತ ಅವರ ಸುರಕ್ಷತೆ ಬಗೆಗೆ ಹೆಚ್ಚು ಕಾಳಜಿ ವಹಿಸಬೇಕಾದ ಅನಿವಾರ್ಯ ಈಗ ಒದಗಿದೆ. ಪೋಷ­ಕರು ಈ ಕುರಿತು ನಿಗಾ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಶಾಲಾ ಆಡಳಿತ ಮಂಡಳಿಗಳ ಜತೆ ಸಮಾಲೋಚಿಸಬೇಕಿದೆ. ಪೆಶಾವರದಲ್ಲಿ ಆದಂತಹ ಕ್ರೌರ್ಯ, ಅಟ್ಟಹಾಸ, ಮುಂದೆ ಯಾವ ನೆಲದಲ್ಲೂ ಆಗ­ದಿ­ರಲಿ. ನಮ್ಮ ಮಕ್ಕಳ ರಕ್ಷಣೆಯನ್ನು ನಾವು ಮಾಡಿಕೊಳ್ಳಲೇಬೇಕು. ಮಕ್ಕಳು ನಮ್ಮ ಬದುಕಿನ ಕನಸುಗಳು...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT