ಬಾಗ್ದಾದ್ ನಿಂದ 20 ಕಿ.ಮೀ. ದೂರದಲ್ಲಿರುವ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಜನರು ರಂಜಾನ್ ಖರೀದಿಗೆ ಜಮಾಯಿಸಿದ್ದಾಗ ಆತ್ಮಾಹುತಿ ದಾಳಿ ನಡೆದಿದೆ. ಘಟನೆಯಲ್ಲಿ 15 ಮಕ್ಕಳು ಸೇರಿದಂತೆ ಹಲವು ಪುರುಷರು, ಮಹಿಳೆಯರು ಸಾವಿಗೀಡಾಗಿದ್ದು, ಶನಿವಾರ ಮೃತರ ಸಂಖ್ಯೆ 115ಕ್ಕೇರಿದೆ.
ಘಟನೆಯಲ್ಲಿ 17 ಮಂದಿ ಕಾಣೆಯಾಗಿದ್ದು, 170 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.