ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‌ ಕ್ಯಾಬ್‌ ಚಾಲಕನಿಂದ ಲೈಂಗಿಕ ಕಿರುಕುಳ

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉಬರ್‌ ಕ್ಯಾಬ್‌ನಲ್ಲಿ ಗುಡಗಾಂವ್‌ಗೆ ತೆರಳುತ್ತಿದ್ದ 21ವರ್ಷದ ವಿದ್ಯಾರ್ಥಿನಿಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಚಾಲಕನನ್ನು ವಿನೋದ್‌ ಎಂದು ಗುರುತಿಸಲಾಗಿದೆ.

ಈ ವಿದ್ಯಾರ್ಥಿನಿ ಶನಿವಾರ ರಾತ್ರಿ 9.30ರ ಹೊತ್ತಿಗೆ ಸುಭಾಷ್‌ನಗರ ಪೆಸಿಫಿಕ್‌ ಮಾಲ್‌ ಬಳಿ ಉಬರ್‌ ಕ್ಯಾಬ್‌ ಹತ್ತಿದ್ದರು. 
‘ಚಾಲಕ ನನ್ನನ್ನ ಬಲವಂತವಾಗಿ ಚುಂಬಿಸಿದ ಹಾಗೂ ಲೈಂಗಿಕ  ಕಿರುಕುಳ ನೀಡಿದ’ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರು ತಿಂಗಳ ಹಿಂದೆ ಉಬರ್‌ ಕ್ಯಾಬ್‌ ಚಾಲಕನೊಬ್ಬ  ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ. ಇದು ರಾಜಧಾನಿಯಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT