ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಎಸ್‌ಎ (Methicillin-resistant Staphylococcus aureus)

Last Updated 13 ಜೂನ್ 2015, 19:30 IST
ಅಕ್ಷರ ಗಾತ್ರ

ಮಾನವ ದೇಹದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ವಾಸಿಸುತ್ತವೆ. ಎಂಆರ್‌ಎಸ್‌ಎ (Methicillin-resistant Staphylococcus aureus ) ಕೂಡ ಅಂತಹುದೇ ಒಂದು ಬ್ಯಾಕ್ಟೀರಿಯಾ. ಇವು ದೇಹದಲ್ಲೇ ವಾಸಿಸುವುದರಿಂದ ವಿವಿಧ ಕಾರಣಗಳಿಗೆ ಬ್ಯಾಕ್ಟೀರಿಯಾಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ.

ಈ ಬ್ಯಾಕ್ಟೀರಿಯಾಗಳು ಮೂಗಿನ ಹೊಳ್ಳೆಗಳ ಪ್ರವೇಶ ಭಾಗದಲ್ಲಿ, ಹೊಕ್ಕುಳಲ್ಲಿ, ಕಂಕುಳ ಕೆಳಗೆ ವಾಸಿಸುತ್ತಿವೆ. ಇವು ದೇಹದಲ್ಲಿ ಇವೆ ಎಂದ ಮಾತ್ರಕ್ಕೇ ರೋಗಗಳು ಬರುವುದಿಲ್ಲ. ಬ್ಯಾಕ್ಟೀರಿಯಾಗಳಿಂದ ದೇಹದ ಕೋಶಗಳಿಗೆ ಹಾನಿಯಾದಾಗ ಸೋಂಕು ಎನ್ನುತ್ತಾರೆ.

ಯಾರಲ್ಲಿ ಹೆಚ್ಚು?: ಸಾಮಾನ್ಯವಾಗಿ ಆಸ್ಪ‍ತ್ರೆ ಸಿಬ್ಬಂದಿಯಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳಲ್ಲಿ ಸ್ವಚ್ಛತೆಯ ಕೆಲಸ ಮಾಡುವವರನ್ನು ಈ ಕುರಿತು ವರ್ಷಕ್ಕೆ ಮೂರ್ನಾಲ್ಕು ಬಾರಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಎಂಆರ್‌ಎಸ್‌ಎ ಪ್ರಮಾಣ ಅತಿಯಾಗಿ ಕಂಡುಬಂದಲ್ಲಿ ಅವರ ಮೂಗಿನ ಕೆಳಗೆ ಹಚ್ಚಿಕೊಳ್ಳಲು ಮುಲಾಮು ನೀಡಲಾಗುತ್ತ

ಲಕ್ಷಣ: ಎಂಆರ್ಎಸ್‌ಎ ಪ್ರಮಾಣ ಹೆಚ್ಚಾದಲ್ಲಿ ರೋಮಗಳ ಬುಡದಲ್ಲಿ ಕೆರೆತ, ಗಂಟಲು ಕೆರೆತ ಬರಬಹುದು. ಅದು ಮೂಗಿನ ಮೂಲಕ ಹರಡುತ್ತದೆ. ಆದ್ದರಿಂದ ಮೂಗಿನ ಕೆಳಭಾಗಕ್ಕೆ ಔಷಧಿ ಹಚ್ಚುವಂತೆ ತಿಳಿಸಲಾಗುತ್ತದೆ.
ಚರ್ಮ, ಶ್ವಾಸಕೋಶ, ಮೂತ್ರನಾಳ ಅಥವಾ ರಕ್ತದ ಸೋಂಕು ಉಂಟು ಮಾಡಬಹುದು

ಆತಂಕ ಯಾರಿಗೆ?
ನಿರಂತರವಾಗಿ ರೋಗ ನಿರೋಧಕ ಔಷಧಿ ಪಡೆಯುವವರಲ್ಲಿ ಅಂದರೆ ಐಸಿಯುನಲ್ಲಿ ಬಹುಕಾಲ ಇರುವವರಿಗೆ ಅಥವಾ ಇತರ ಕಾರಣಗಳಿಗೆ ನಿರಂತರವಾಗಿ ರೋಗ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಈ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾದಲ್ಲಿ ಸಮಸ್ಯೆ ತೀವ್ರಗತಿಗೆ ಹೋಗಬಹುದು. ಆಗ ಸಂದರ್ಭ ಗಮನಿಸಿ ವೈದ್ಯರು ಚಿಕಿತ್ಸೆ ನಿರ್ಧರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT