ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ ಆಡಳಿತ ಮಂಡಳಿ ಪುನರ್‌ರಚನೆ: ತ್ಯಾಗಿ

Last Updated 28 ಜನವರಿ 2015, 20:06 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋ­ನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಕಂಪೆನಿಯು ಏಪ್ರಿಲ್‌ 1ರ ವೇಳೆಗೆ ತನ್ನ ಆಡಳಿತ ಮಂಡಳಿಯನ್ನು ಪುನರ್‌­ರಚಿಸಲಿದೆ ಎಂದು ಅಧ್ಯಕ್ಷ ಆರ್‌.ಕೆ. ತ್ಯಾಗಿ ಹೇಳಿದರು.

ಇದೇ 31ರಂದು ಸೇವೆಯಿಂದ ನಿವೃತ್ತಿ ಆಗಲಿರುವ ತ್ಯಾಗಿ ಅವರು ನಗರದಲ್ಲಿ ಬುಧವಾರ ಮಾತನಾಡಿ, ‘ಕೇವಲ ತಯಾರಿಕಾ ಕಂಪೆನಿಯಾಗಿ ಗುರುತಿಸಿ­ಕೊಳ್ಳದೆ, ವೈಮಾನಿಕ ತಂತ್ರಜ್ಞಾನ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಎಚ್‌ಎಎಲ್‌ ಬಯಸಿದೆ. ‘ಮೂರು ವರ್ಷಗಳ ಅವಧಿಯಲ್ಲಿ ಎಚ್‌ಎಎಲ್‌ ಅನ್ನು ತಂತ್ರಜ್ಞಾನ ಕಂಪೆನಿಯನ್ನಾಗಿ ಬದಲಾಯಿಸಲು ಪ್ರಯತ್ನ ಪಟ್ಟಿದ್ದೇವೆ’ ಎಂದರು.

‘ಕಂಪನಿಯು ಶೀಘ್ರ ಗತಿಯಲ್ಲಿ ಆಧುನೀಕರಣಕ್ಕೆ ತೆರೆದು­ಕೊಳ್ಳುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಎಚ್‌ಎಎಲ್‌ ಆಡಳಿತ ಮಂಡಳಿಯು ₨7 ಸಾವಿರ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಿದೆ. 5 ಸಾವಿರಕ್ಕಿಂತಲೂ ಹೆಚ್ಚು ಪೇಟೆಂಟ್‌­ಗಳನ್ನು (ಹಕ್ಕುಸ್ವಾಮ್ಯ) ಹೊಂದಿರುವ ಎಚ್‌ಎಎಲ್‌, ‘ಮಹಾರತ್ನ’ ಕಂಪೆನಿಯಾಗಬೇಕು ಎಂಬುದು ನಮ್ಮ ಕನಸು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT