ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ನಾಳೆ ತಾಂತ್ರಿಕ ಬಿಡ್‌ ಪರಿಶೀಲನೆ

Last Updated 25 ಜನವರಿ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತಿನಹೊಳೆ ಯೋಜ­ನೆಯ ತಾಂತ್ರಿಕ ಬಿಡ್ ಸೋಮವಾರ ತೆರೆಯಲಾಗುತ್ತದೆ. ಹಣ­ಕಾಸು ಬಿಡ್‌ ಫೆಬ್ರುವರಿ 7ಕ್ಕೆ ತೆರೆಯಲಿದ್ದು, ಫೆ.15ಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣ­ಗೊಳ್ಳಲಿದೆ.

ಯೋಜನೆಗೆ ಸಂಬಂಧಿಸಿದಂತೆ ಉಂಟಾ-­­­ಗಿರುವ ವಿವಾದ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯೆ ನೀಡಿ­­ರುವ ಚಿಕ್ಕ ಬಳ್ಳಾಪುರ ಜಿಲ್ಲಾ ಉಸ್ತು­ವಾರಿ ಸಚಿವರೂ ಆಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಈ ಮಾಹಿತಿ ನೀಡಿದ್ದಾರೆ.

‘ಬರಪೀಡಿತ ಕೋಲಾರ, ಚಿಕ್ಕಬಳ್ಳಾ­ಪುರ, ಬೆಂಗ­ಳೂರು ಗ್ರಾಮಾಂತರ, ರಾಮ­ನಗರ, ತುಮಕೂರು ಮತ್ತಿತರ ಜಿಲ್ಲೆ­ಗಳಿಗೆ ನೀರು ಒದಗಿ­ಸಲು ಯೋಜನೆ ರೂಪಿಸ­ಲಾಗಿದೆ. ಎತ್ತಿನ­ಹೊಳೆ ಯೋಜ­ನೆಗೆ ಸಂಬಂಧಿಸಿ­ದಂತೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಯೋಜನೆ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆ­ಯು ತ್ತಿದೆ. ಸಾರ್ವ­ಜನಿಕರು ಗೊಂದಲಗಳಿಗೆ ಕಿವಿ­ಗೊಡದೇ ಯೋಜ­ನೆಯ ಅನುಷ್ಠಾನಕ್ಕೆ ಸರ್ಕಾರದ ಜೊತೆ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದು­ಕೊಂಡ ಬಳಿಕವೇ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗು­ವುದು. ಸ್ಥಳೀಯ­ರಿಗೆ ಮನವೊಲಿಕೆ ಮಾಡಿದ ಬಳಿಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯ ಕಾಮಗಾರಿಗೆ ಶಂಕುಸ್ಥಾ­ಪನೆ ಮಾಡಲಿದ್ದಾರೆ’ ಎಂದು ಹೇಳಿಕೆ­ಯಲ್ಲಿ ತಿಳಿಸಿದ್ದಾರೆ.

ಕೇಂದ್ರದ ಯೋಜನೆ­ಯಾಗಿ ಪರಿಗಣಿಸಲು ಒತ್ತಾಯ
ಬೆಂಗಳೂರು: ‘
ಎತ್ತಿನಹೊಳೆ ಯೋಜನೆ­ಯನ್ನು ಕೇಂದ್ರ ಸರ್ಕಾರದ ಯೋಜನೆ ಎಂದು ಪರಿಗಣಿಸಬೇಕು ಎಂದು ಒತ್ತಾ­ಯಿಸಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ನರಸಿಂಹಪ್ಪ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ  ಎತ್ತಿನಹೊಳೆ ಯೋಜ­ನೆಗೆ ₨12,912 ಕೋಟಿ ವೆಚ್ಚ­ವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದ ಹಣವನ್ನು ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರ ನೀಡಲು ಕಷ್ಟವಾಗುತ್ತದೆ. ಆದ್ದರಿಂದ ಯೋಜನೆ­ಯನ್ನು ಕೇಂದ್ರ ಸರ್ಕಾರದ  ಯೋಜನೆ ಎಂದು ಪರಿಗಣಿಸುವಂತೆ ಕೇಂದ್ರದ ಸರ್ಕಾರದ ಮೇಲೆ ಪಕ್ಷಬೇಧ ಮರೆತು ಒತ್ತಡ ತರಬೇಕು ಎಂದು ಹೇಳಿದರು.

ಈ ಯೋಜನೆಯಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮ­ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ­ಗಳ ಜೊತೆಗೆ  ಬೆಂಗಳೂರು ಉತ್ತರ ಭಾಗಕ್ಕೂ ನೀರು ಒದಗಿಸಬಹುದಾಗಿದೆ. ಯೋಜನೆ ಜಾರಿಯಾದರೆ 50 ಲಕ್ಷಕ್ಕು ಹೆಚ್ಚು ಜನರಿಗೆ ಕುಡಿಯುವ ನೀರನ್ನು ಒದ­ಗಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT