ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

Last Updated 16 ಮೇ 2015, 19:30 IST
ಅಕ್ಷರ ಗಾತ್ರ

ಮೊನ್ನೆ ತಾನೇ ಸಂಭವಿಸಿದ ನೇಪಾಳದ ಭೂಕಂಪದ ವರದಿಗಳು ನನ್ನನ್ನು ತೀವ್ರ ದುಃಖಕ್ಕೆ ಕೆಡವಿದ್ದವು. ಕೇವಲ ಮೂರು ವರ್ಷದ ಕೆಳಗೆ ನಾನು ಓಡಾಡಿದ ಸುಂದರ ಸ್ಥಳಗಳೆಲ್ಲಾ ಈಗ ನಿರ್ನಾಮವಾಗಿ ಹೋಗಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ನೋಡುವಾಗ ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತು. ಸಾವಿರಾರು ಜನರು ಭೂಕಂಪದ ತೀವ್ರತೆಗೆ ಅಸುನೀಗಿದ ಸುದ್ದಿ ನನ್ನನ್ನು ಖಿನ್ನನನ್ನಾಗಿಸಿತ್ತು.

ಅಂತಹ ಹೊತ್ತಿನಲ್ಲಿ ಕುಟುಂಬದ ಹಿರಿಯರೊಬ್ಬರು ನನ್ನನ್ನು ಭೇಟಿಯಾದರು. ನನ್ನ ಸಂಕಟಗಳನ್ನು ಅವರ ಮುಂದೆ ಹೇಳಿಕೊಂಡೆ. ಅವರೂ ಅನಾಹುತಕ್ಕೆ ತುಂಬಾ ನೊಂದಿದ್ದರು. “ಎಂಥಾ ಅನ್ಯಾಯ ನೋಡ್ರಿ ಸಾರ್! ಇಡೀ ಪ್ರಪಂಚದಲ್ಲಿ ಹಿಂದೂ ದೇಶ ಅಂತ ಉಳಕೊಂಡಿರೋದು ನೇಪಾಳ ಒಂದೇ... ಅಂತಹ ದೇಶದಲ್ಲೂ ಈ ತರಹದ ಅನಾಹುತ ಆಗಬೇಕಾ?” ಎಂದು ಪ್ರತಿಕ್ರಿಯಿಸಿದರು.

ಅವರ ಪ್ರತಿಕ್ರಿಯೆ ನನ್ನನ್ನು ಮತ್ತೂ ಕಂಗೆಡಿಸಿತು. ಧರ್ಮಕ್ಕೂ ಜೀವಹಾನಿಗೂ ಎಲ್ಲಿಯ ಸಂಬಂಧ? ಅವರ ನೋವು ಬಹುಶಃ ಅದು ‘ಹಿಂದೂ ದೇಶ’ ಎನ್ನುವ ಕಾರಣಕ್ಕಾಗಿಯೇ ಹೆಚ್ಚಿತ್ತೇನೋ ಎಂಬ ಅನುಮಾನ ನನಗಾಯ್ತು. ಕಣ್ಣ ಮುಂದಿನ ನೋವನ್ನು ಅನುಭವಿಸಲೂ ಸರಿಯಾದ ಕಾರಣವಿರಬೇಕು ಎನ್ನುವ ಮನುಷ್ಯರ ಪೂರ್ವಗ್ರಹ ಯಾವತ್ತೂ ನನ್ನನ್ನು ಕಾಡುತ್ತದೆ.

ಇಂತಹದೇ ಅನುಭವ ಕೆಲವು ದಿನಗಳ ಕೆಳಗೆ ಬೇರೊಂದು ರೀತಿಯಲ್ಲಿ ನನಗಾಗಿತ್ತು. ಆಗ ಪಾಕಿಸ್ತಾನದ ಪೇಶಾವರದಲ್ಲಿ ಉಗ್ರಗಾಮಿಗಳು ಸುಮಾರು 145 ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಂದಿದ್ದರು. ಏನೂ ಅರಿಯದ ಕಂದಮ್ಮಗಳನ್ನು ಹೀಗೆ ಕ್ರಿಮಿಗಳನ್ನು ಹೊಸಕಿ ಹಾಕಿದಂತೆ ಕೊಂದು ಹಾಕಿದ ಆ ಘಟನೆಯೂ ನನ್ನಲ್ಲಿ ಖಿನ್ನತೆಯನ್ನು ಮೂಡಿಸಿತ್ತು.

ಆದರೆ ಬಹಳಷ್ಟು ಪರಿಚಯದವರು ಅದಕ್ಕೆ ಪ್ರತಿಕ್ರಿಯಿಸಿದ ರೀತಿ ವಿಭಿನ್ನವಾಗಿತ್ತು. “ಬಿತ್ತಿದ್ದೇ ಬೇವು. ಈಗ ಮಾವಿನಹಣ್ಣು ಬೇಕು ಅಂದ್ರೆ ಸಿಗುತ್ತಾ? ಮಾಡಿದ್ದು ಅನುಭವಿಸಬೇಕು” ಎನ್ನುವುದೇ ಬಹುತೇಕರ ನಿಲುವಾಗಿತ್ತು. ಸಾವಿಗೀಡಾದದ್ದು ಏನೂ ಅರಿಯದ ಎಳೆಯ ಕಂದಮ್ಮಗಳೆಂಬ ಅರಿವೇ ಅವರಿಗೆ ಇರದೆ, ದೊಡ್ಡವರ ಜಗತ್ತನ್ನೇ ಮಕ್ಕಳಿಗೂ ಅನ್ವಯಿಸುವುದರಲ್ಲಿ ಅವರ ಉತ್ಸಾಹ ನನಗೆ ಕಾಣುತ್ತಿತ್ತು.

ಆ ಕಾರಣಕ್ಕಾಗಿಯೇ ಏನೋ, ಅವರಿಗೆ ಆ ಅನಾಹುತ ಅಂತಹ ನೋವನ್ನು ಉಂಟು ಮಾಡಿರಲೇ ಇಲ್ಲವೆನ್ನುವ ಅನುಮಾನ ನನಗಾಗುತ್ತಿತ್ತು. ಪೂರ್ವಗ್ರಹವಿಲ್ಲದ ಯಾವುದೇ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯವಿಲ್ಲ. ವಿಭಿನ್ನ ಪರಿಸರದಲ್ಲಿ ಬೆಳೆಯುವ ಮನುಷ್ಯ ಹಲವು ಸಂಗತಿಗಳನ್ನು ಸ್ವಕೀಯವಾಗಿಯೂ ಮತ್ತು ಇತರ ಸಂಗತಿಗಳನ್ನು ಪರಕೀಯವಾಗಿಯೂ ಮಾಡಿಕೊಳ್ಳುವುದು ಅತ್ಯಂತ ಸ್ವಾಭಾವಿಕವಾಗಿದೆ.

ನನಗೆ ಸಂಬಂಧಿಸಿದ ಸಂಗತಿಗಳಿಗೆ ಮತ್ತು ವ್ಯಕ್ತಿಗಳಿಗೆ ಆದ ಹಾನಿಯು ತರುವ ನೋವು, ನನ್ನದಲ್ಲದ ಸಂಗತಿಗಳಿಗೆ ಮತ್ತು ವ್ಯಕ್ತಿಗಳಿಗೆ ಆಗುವ ಹಾನಿಯಿಂದ ಉಂಟಾಗುವ ನೋವಿಗಿಂತಲೂ ಅಧಿಕವಾಗಿರುತ್ತದೆ. ಆದರೆ ಈ ‘ನನ್ನದು’ ಮತ್ತು ‘ನನ್ನದಲ್ಲದ್ದು’ ಎಂದು ವಿಭಜನೆಗೆ ಕಾರಣವಾಗುವ ಸಂಗತಿಗಳು ಯಾವುವು? ಧರ್ಮ, ದೇಶ, ಭಾಷೆ, ಜಾತಿ, ಅಂತಸ್ತು, ಗುಂಪು – ಎಲ್ಲವೂ ಇಂತಹ ವಿಭಜನೆಗಳನ್ನು ಮಾಡುತ್ತಲೇ ಇರುತ್ತವೆ.

ನಮಗೆಲ್ಲರಿಗೂ ಅಂತರಂಗದಲ್ಲಿ ಇದರ ಅರಿವು ಮತ್ತು ಎಚ್ಚರಿಕೆ ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಆದರೆ ಆ ಅರಿವನ್ನು ಹತ್ತಿಕ್ಕುತ್ತಾ ಬದುಕುವ ಭಂಡತನವನ್ನು ನಾವು ಅಭ್ಯಾಸ ಮಾಡಿಕೊಳ್ಳುತ್ತೇವೆ. ಅವುಗಳೆಲ್ಲವನ್ನೂ ನಮ್ಮ ನಂಬಿಕೆಯೆಂದೋ ಸಿದ್ಧಾಂತವೆಂದೂ ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ.

ಎಲ್ಲಿಯೋ ಒಂದು ಹಂತದಲ್ಲಿ ನಮ್ಮ ನಂಬಿಕೆಗಳನ್ನೇ ನ್ಯಾಯವೆಂದು ಸಾಧಿಸುತ್ತಾ, ಕಣ್ಣೆದುರು ನಡೆಯುವ ಕ್ರೌರ್ಯಕ್ಕೂ ಸಮಜಾಯಿಷಿ ಕೊಡುವ ಹೀನತೆಯನ್ನು ನಾವು ಬೆಳೆಸಿಕೊಳ್ಳುತ್ತೇವೆ. ನಮ್ಮ ನೋವು ಅಥವಾ ನಲಿವು ಎನ್ನುವುದು ನಮ್ಮ ನಂಬಿಕೆಯೊಡನೆ ಬಿಡಿಸಲಾಗದಂತೆ ತಳಕು ಹಾಕಿಕೊಂಡು ಬಿಡುತ್ತದೆ.

ಹಲವು ವರ್ಷಗಳ ಕೆಳಗೆ ನಾನು ಕೈಲಾಶ ಮತ್ತು ಮಾನಸ ಸರೋವರಗಳ ಚಾರಣಕ್ಕೆ ಹೋಗಿದ್ದೆ. ಸುಮಾರು 258 ಕಿಲೋ ಮೀಟರ್‌ನಷ್ಟು ದೂರವನ್ನು ಹಿಮಾಲಯದ ತಪ್ಪಲಿನಲ್ಲಿ ನಡೆಯುತ್ತಾ ಸಾಗುವ ಈ ಚಾರಣ ಅತ್ಯಂತ ರೋಚಕವಾದದ್ದು. ಸುಮಾರು 50 ಜನರಿದ್ದ ಈ ಗುಂಪಿನಲ್ಲಿ ಹೆಚ್ಚು ಕಡಿಮೆ ಎಲ್ಲರೂ ಧಾರ್ಮಿಕ ಕಾರಣದಿಂದಲೇ ಈ ಚಾರಣಕ್ಕೆ ಸೇರಿಕೊಂಡಿದ್ದರು.

ಶಿವನ ಮನೆಯಾದ ಕೈಲಾಶವನ್ನು ಸ್ಪರ್ಶಿಸಿ, ದೇವಸರೋವರವಾದ ಮಾನಸದಲ್ಲಿ ಸ್ನಾನ ಮಾಡಿಬರುವುದೇ ಹೆಚ್ಚಿನವರ ಉದ್ದೇಶವಾಗಿತ್ತು. ನನ್ನಂತೆ ಚಾರಣದ ಹುರುಪಿನಿಂದ ಅಲ್ಲಿ ಬಂದವರು ಬಹಳ ಅಪರೂಪ. ದಾರಿಯಲ್ಲಿ ಯಾವುದೇ ದೇವಸ್ಥಾನ ಎದುರಾದರೂ ಪೂಜೆ ಮಾಡುವ, ಸಾಯಂಕಾಲದ ಹೊತ್ತಿನಲ್ಲಿ ಡೋಲು ಬಾರಿಸಿಕೊಂಡು ನರ್ತಿಸುತ್ತಾ ಭಜನೆ ಮಾಡುವದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು.

ಅವರ ಮಧ್ಯದಲ್ಲಿ ನಾನೂ ಅವರಂತೆಯೇ ಇರಲು ಸಾಕಷ್ಟು ಪ್ರಯತ್ನಿಸುತ್ತಿದ್ದೆ. ಅನವಶ್ಯಕವಾಗಿ ‘ಅನ್ಯ’ ಎಂದು ತೋರಿಸಿಕೊಳ್ಳಲು ಹೋಗಿ ಗುಂಪಿನಿಂದ ದೂರವಾಗುವ ಅನಾಹುತದ ಅರಿವು ನನಗೆ ಚೆನ್ನಾಗಿತ್ತು. ಆದರೆ ಎಲ್ಲೋ ಕೆಲವೊಮ್ಮೆ ನನ್ನ ‘ಅನ್ಯತೆ’ ಪ್ರಕಟವಾಗಿಬಿಡುತ್ತಿತ್ತು.

ಮಾನಸ ಸರೋವರದ ಎಡಪಕ್ಕದಲ್ಲಿಯೇ ರಾಕ್ಷಸ ಸರೋವರ (ರಾಕ್ಷಸ್‌ತಲ್‌) ಎನ್ನುವ ಮತ್ತೊಂದು ಅಷ್ಟೇ ಸೊಗಸಾದ ಸರೋವರವಿದೆ. ಈ ಸರೋವರದ ಹೆಸರಿನಲ್ಲಿರುವ ‘ರಾಕ್ಷಸ’ ಪದವು ರಾವಣಾಸುರನಿಗೆ ಸಂಬಂಧಿಸಿದ್ದು. ಶಿವನ ಆತ್ಮಲಿಂಗವನ್ನು ಪಡೆಯಲು ಈತನು ಕೈಲಾಶಕ್ಕೆ ಹೋದಾಗ, ಸಾಕಷ್ಟು ವರ್ಷ ತಪಸ್ಸು ಮಾಡುತ್ತಾನೆ.

ಒಂದು ಹಂತದಲ್ಲಿ ಇಡೀ ಕೈಲಾಶ ಪರ್ವತವನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ನರ್ತಿಸಲು ಶುರು ಮಾಡುತ್ತಾನೆ. ಆ ಹೊತ್ತಿನಲ್ಲಿ ಧಾರಾಕಾರವಾಗಿ ಅವನ ಮೈಯಿಂದ ಬೆವರು ಹರಿದು ಈ ಸರೋವರ ರೂಪುಗೊಂಡಿತೆಂದು ಧಾರ್ಮಿಕರು ನಂಬುತ್ತಾರೆ. ಆದ್ದರಿಂದ ದೇವಸೃಷ್ಟಿಯಾದ ಮಾನಸ ಸರೋವರದ ನೀರು ಸಿಹಿಯಾದರೆ, ರಾಕ್ಷಸ ಸೃಷ್ಟಿಯಾದ ಈ ಸರೋವರದ ನೀರು ಸ್ವಲ್ಪ ಉಪ್ಪು.

ಒಂದು ಸರೋವರ ಪವಿತ್ರವೆಂದೂ ಮತ್ತೊಂದು ಅಪವಿತ್ರವೆಂದೂ ಯಾತ್ರಿಕರು ನಂಬುತ್ತಾರೆ. ಆ ಕಾರಣವಾಗಿಯೇ ಮಾನಸ ಸರೋವರದಲ್ಲಿ ಸ್ನಾನ ಮಾಡುತ್ತಾರಾದರೂ, ರಾಕ್ಷಸ ಸರೋವರದಲ್ಲಿ ಸ್ನಾನ ಮಾಡುವುದಿಲ್ಲ. ಹಾಗೇನಾದರೂ ಸ್ನಾನ ಮಾಡಿದರೆ, ಬೆಳಗಾಗುವುದರಲ್ಲಿ ಆ ವ್ಯಕ್ತಿಗೆ ಹುಚ್ಚು ಹಿಡಿಯುತ್ತದೆಂಬ ಗಟ್ಟಿಯಾದ ನಂಬಿಕೆ ಅಲ್ಲಿದೆ. ಆದ್ದರಿಂದ ನಮ್ಮ ಜೊತೆ ಬಂದಿದ್ದ ಗೈಡ್‌ಗಳು ಮತ್ತು ಇತರ ಹಿರಿಯರು ಆ ನೀರನ್ನು ಸ್ಪರ್ಶಿಸಬಾರದೆಂದು ಎಚ್ಚರಿಕೆ ಕೊಡುತ್ತಲೇ ಬರುತ್ತಿದ್ದರು.

ನನ್ನ ಮನಸ್ಸಿಗೆ ರಾಕ್ಷಸ ಸರೋವರದ ಸೌಂದರ್ಯವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಯಾವ ಕಾರಣದಿಂದಲೂ ಮಾನಸ ಸರೋವರದ ಸೌಂದರ್ಯಕ್ಕೆ ಇದು ಕಡಿಮೆಯೆಂದು ಅನ್ನಿಸಲಿಲ್ಲ. ತಿಳಿಯಾದ ನೀರಿನಲ್ಲಿ ಆಕಾಶದ ನೀಲಿ ಸ್ಪಷ್ಟವಾಗಿ ಪ್ರಜ್ವಲಿಸುತ್ತಿತ್ತು. ಹತ್ತಿಯಂತಹ ಮೋಡಗಳು ಹಗೂರಕ್ಕೆ ಆಕಾಶದಲ್ಲಿಯೂ ಮತ್ತು ನೀರಿನಲ್ಲಿಯೂ ತೇಲಾಡುತ್ತಾ ಸಾಗುತ್ತಿದ್ದವು.

ಅಮ್ಮ ತಟ್ಟುವ ಚೋವಿಯಂತಹ ಸಣ್ಣ ಅಲೆಗಳು ದಡಕ್ಕೆ ತಾಕುತ್ತಿದ್ದವು. ಹಲವಾರು ಹಂಸಗಳು ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಅಡ್ಡಾಡುತ್ತಿದ್ದವು. ಸರೋವರದ ಹಿನ್ನೆಲೆಯಲ್ಲಿ ಸಾಕಷ್ಟು ಪರ್ವತಗಳು ಹಿಮದ ಪಟ್ಟೆಗಳನ್ನು ಮೈತುಂಬಾ ಬಳಿದುಕೊಂಡು ನಿಂತಿದ್ದವು. ನನಗೆ ಆ ಸರೋವರದಲ್ಲಿ ಸ್ನಾನ ಮಾಡುವ ಬಯಕೆಯಾಯ್ತು. ವಾತಾವರಣದಲ್ಲಿ ಮೈ ನಡುಗಿಸುವ ಚಳಿಯಿತ್ತಾದರೂ, ಸ್ನಾನ ಮಾಡುವ ನನ್ನ ಹುಮ್ಮಸ್ಸು ತಗ್ಗಲಿಲ್ಲ. ಜೊತೆಯಲ್ಲಿದ್ದವರಿಗೆ ಆ ಸಂಗತಿಯನ್ನು ಹೇಳಿದರೆ ನನ್ನನ್ನು ತಡೆಯುತ್ತಾರೆಂಬ ಅರಿವಿತ್ತು.  ಆರನೇ ಪುಟಕ್ಕೆ...

ಎಲ್ಲಿಯೋ ದೂರದಲ್ಲಿ ಅವರ ಕಣ್ಣಿಗೆ ಕಾಣದಂತೆ ಹೋಗಿ ಸ್ನಾನ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಅತ್ಯಂತ ಸಮತಟ್ಟಾದ ಬಯಲಿನಲ್ಲಿ ಆ ಸರೋವರವಿದೆ. ಎಷ್ಟೇ ದೂರ ಚಲಿಸಿದರೂ ನಾವು ಯಾರ ಕಣ್ಣಿಂದಲೂ ಮರೆಯಾಗುವ ಸಾಧ್ಯತೆ ಇಲ್ಲ. ಕೊನೆಗೆ ಬಯಕೆಯನ್ನು ತಡೆಯಲಾಗದೆ, ಉಟ್ಟ ಬಟ್ಟೆಗಳನ್ನು ಕಳಚಿ ಆ ಸರೋವರದಲ್ಲಿ ಮುಳುಗು ಹಾಕಿ ಬಿಟ್ಟೆ.

ಮೈ ಕೊರೆಯುವ ಆ ನೀರು ನನ್ನ ಎಲುಬುಗಳನ್ನೂ ಪುಡಿಪುಡಿಯಾಗಿಸುವಂತೆ ನನ್ನಲ್ಲಿ ನಡುಕವನ್ನು ಹುಟ್ಟಿಸಿಬಿಟ್ಟಿತು. ಎಲ್ಲಾ ಸಹಯಾತ್ರಿಕರು ಏನೋ ಅನಾಹುತವಾದಂತೆ ನನ್ನೆಡೆಗೆ ನೋಡಿ ‘ಹೋ’ ಎಂದು ಸದ್ದು ಮಾಡಿದರು. ಅವರ ಆಘಾತಕ್ಕೆ ವಿಚಲಿತನಾಗದೆ, ಮೂರು ಸಾರಿ ಮುಳುಗಿ ಹಾಕಿದ ನಾನು ದಂಡೆಗೆ ಬಂದು ಟವೆಲಿನಿಂದ ಮೈ ಒರೆಸಿಕೊಂಡು, ಒಣಗಿದ ವಸ್ತ್ರಗಳನ್ನು ಧರಿಸಿ ನಗುತ್ತಾ ನಿಂತು ಬಿಟ್ಟೆ.

ಸಾಕಷ್ಟು ಜನ ನನ್ನ ಕೃತ್ಯಕ್ಕೆ ಕೋಪವನ್ನು ವ್ಯಕ್ತಪಡಿಸಿದರು. ಕೆಲವರು ಹೆದರಿಕೆಯಿಂದ ಮಾತು ಹೊರಡದಂತೆ ನನ್ನೆಡೆಗೆ ನೋಡಿದರು. ಹಿರಿಯರೊಬ್ಬರು ನನ್ನ ಹತ್ತಿರ ಬಂದು “ಏನಾದ್ರೂ ಆದ್ರೆ ಗತಿಯೇನು?” ಎಂದು ದಬಾಯಿಸಿದರು. “ಇಲ್ಲ, ಏನೂ ಆಗಲ್ಲ” ಎಂದು ನಕ್ಕೆ. “ಅದು ಹೇಗೆ ಖಚಿತವಾಗಿ ಹೇಳ್ತೀರ?” ಎಂದು ಸವಾಲು ಹಾಕಿದರು. ಸ್ನಾನ ಮಾಡಿ ಯಶಸ್ವಿಯಾದ ನಾನು ಅತ್ಯಂತ ಉತ್ಸಾಹದಲ್ಲಿದ್ದೆ. ಅವರನ್ನು ತಮಾಷೆ ಮಾಡುವ ಉತ್ಸಾಹ ಬಂತು.

“ಆ ರಾವಣಾಸುರ ದಕ್ಷಿಣ ಭಾರತದವನು. ನಾನೂ ಕೂಡಾ... ಆತಂಗೆ ಶಾಸ್ತ್ರೀಯ ಸಂಗೀತ ಅಂದ್ರೆ ಜೀವ. ನಂಗೂ... ಜೊತೆಗೆ ಆತ ಮಹಾಬ್ರಾಹ್ಮಣ ಅಂತೆ, ನಾನೂ... ಅದಕ್ಕೇ ನಂಗೇನೂ ಆತ ಮಾಡಲ್ಲ ಅಂತ ಚೆನ್ನಾಗಿ ಗೊತ್ತು” ಎಂದು ನಗುತ್ತಾ ಹೇಳಿದೆ. ನನ್ನ ಈ ಉಡಾಫೆಯ ಮಾತು ಅವರಿಗೆ ಕೋಪವನ್ನು ತರಿಸಿತು. ಅದಕ್ಕೆ ಪ್ರತಿಯಾಗಿ “ಆತ ಮದುವೆಯಾದ ಹೆಂಗಸನ್ನ ಕಳ್ಳತನ ಮಾಡಿಕೊಂಡು ಹೋದ. ಮತ್ತೆ ನೀವು?” ಎಂದು ಪ್ರಶ್ನಿಸಿ ಹೊರಟುಹೋದರು.

ಇಡೀ ದಿನ ಯಾತ್ರಾರ್ಥಿಗಳು ನನ್ನನ್ನು ಗುಂಪಿಂದ ದೂರವಿಟ್ಟರು. ಆ ಸಂಜೆ ನನ್ನನ್ನು ಭಜನೆಯಲ್ಲಿ ಸೇರಿಸಿಕೊಳ್ಳಲಿಲ್ಲ. ಅವರ ನಂಬಿಕೆಗಳನ್ನು ಹುಸಿಯಾಗಿಸಲು ಪ್ರಯತ್ನಿಸಿದ ನನ್ನ ವರ್ತನೆ ಅವರಿಗೆ ನೋವು ತಂದಿತ್ತು. ನನಗೂ ಎಲ್ಲೋ ಮನಸ್ಸಿನಾಳದಲ್ಲಿ ನನ್ನ ನಡವಳಿಕೆ ತಪ್ಪಾಯಿತೇನೋ ಎಂಬ ಅಳುಕು ಉಂಟಾಗಿತ್ತು.

ಆದರೂ ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಾ ದಿನದೂಡಿದೆ. ಆದರೆ ಅವರೆಲ್ಲಾ ತಮ್ಮ ತಮ್ಮೊಳಗೆ ಗುಸುಗುಸು ಶುರು ಮಾಡಿಕೊಂಡು ಬಿಟ್ಟರು. ಮರುದಿನ ನಾನು ಖಂಡಿತವಾಗಿಯೂ ಹುಚ್ಚನಾಗಿರುತ್ತೇನೆ ಎಂಬ ವದಂತಿ ಅವರ ಮಧ್ಯೆ ಹರಡಿತು. ಅದಕ್ಕೆ ಸರಿಯಾಗಿ ನನಗೆ ಸಂಜೆಯ ವೇಳೆಗೆ ಸಣ್ಣಗೆ ಜ್ವರ ಶುರುವಾಯಿತು. ಅವರ ಗುಸುಗುಸು ಇನ್ನಷ್ಟು ಶಕ್ತಿಯನ್ನು ಪಡೆದುಕೊಂಡಿತು.

ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಒಂದು ಜ್ವರದ ಮಾತ್ರೆಯನ್ನು ನುಂಗಿ, ಒಂದು ಲೋಟ ಬಿಸಿಯಾದ ಹಾಲನ್ನು ಕುಡಿದು ನಿದ್ದೆ ಮಾಡಿದೆ. ಬೆಳಿಗ್ಗೆ ಏಳುವದರಲ್ಲಿ ಯಾವತ್ತಿನಂತೆ ಗೆಲುವಾಗಿ ಬಿಟ್ಟಿದ್ದೆ. ಒಬ್ಬೊಬ್ಬರಾಗಿ ಸಹಯಾತ್ರಿಕರು ನನ್ನನ್ನು ಮಾತನಾಡಿಸಲು ಬಂದರು. ಏನೇನೋ ತರ್ಕದ ಪ್ರಶ್ನೆಗಳನ್ನು ಕೇಳಿ ನನಗೆ ಹುಚ್ಚು ಹಿಡಿದಿಲ್ಲ ಎನ್ನುವದನ್ನು ಅವರು ಖಚಿತ ಪಡಿಸಿಕೊಳ್ಳುತ್ತಿದ್ದುದು ನನಗೆ ತಿಳಿಯುತ್ತಿತ್ತು.

ಆದರೆ ನನ್ನನ್ನು ಕಾಡಿದ ಸಂಗತಿಯೇನೆಂದರೆ, ನಾನು ಆರಾಮಾಗಿದ್ದೇನೆ ಎನ್ನುವ ಸಂಗತಿ ಅವರಿಗೆ ಬಹಳ ನಿರಾಸೆಯನ್ನು ಮೂಡಿಸುತ್ತಿತ್ತು. ಒಂದು ವೇಳೆ ನನಗೆ ನಿಜಕ್ಕೂ ಹುಚ್ಚು ಹಿಡಿದಿದ್ದರೆ ಅವರೆಲ್ಲಾ ಸಂತೋಷ ಪಡುತ್ತಿದ್ದರೇನೋ ಎಂದು ನನಗೆ ಸ್ಪಷ್ಟವಾಗಿ ಅನ್ನಿಸಿಬಿಟ್ಟು, ಎಲ್ಲೋ ಮನಸ್ಸಿನ ಆಳದಲ್ಲಿ ನೋವಿನ ಶೃತಿ ಮಿಡಿಯಿತು.

ಈ ಗುಂಪಿನ ನಂಬಿಕೆಗಳು ಆಸ್ತಿಕವೋ ನಾಸ್ತಿಕವೋ ಎಂಬುದು ಮುಖ್ಯವಾಗುವುದೇ ಇಲ್ಲ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಒಟ್ಟಾರೆ ಒಂದು ಬಗೆಯ ನಂಬಿಕೆಗಳನ್ನು ಬುನಾದಿ ಮಾಡಿಕೊಂಡ ಒಂದು ಗುಂಪು, ಅದನ್ನು ಒಪ್ಪದ ಮತ್ತೊಂದು ಗುಂಪನ್ನು ವಿರೋಧಿಸುತ್ತದೆ. ಮಾನವೀಯತೆಯನ್ನು ಬೆಳೆಸಿಕೊಳ್ಳದೆ ಹೋದರೆ ಇಂತಹ ವಿರೋಧಗಳು ಯಾವುದೇ ಕ್ರೌರ್ಯವನ್ನೂ ತಲುಪಬಲ್ಲವು.

ಇದಕ್ಕೆ ಪೂರಕವಾಗಿ ನನ್ನ ಬಾಲ್ಯದ ಒಂದು ಘಟನೆಯನ್ನು ಹೇಳಿಬಿಡುತ್ತೇನೆ. ಈ ಘಟನೆಯು ನಾವೆಲ್ಲರೂ ‘ಕಿಟ್ಟಣ್ಣ ಮಾಮ’ ಎಂದು ಕರೆಯುತ್ತಿದ್ದ, ನಮ್ಮ ಕುಟುಂಬಕ್ಕೆ ದೂರದ ಸಂಬಂಧಿಯಾದರೂ ಸ್ನೇಹಕ್ಕೆ ಬಹು ಹತ್ತಿರದವನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ. ಸುಮಾರು ಮೂವತ್ತೈದರ ವಯಸ್ಸಿನ ಈತ ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಮಾಡಿಕೊಂಡಿದ್ದ.

ಸಾಕಷ್ಟು ಶ್ರೀಮಂತ ಮನೆತನದವರಾದ ಕಾರಣ ಇವರ ಬಳ್ಳಾರಿಯ ಮನೆ ವಿಶಾಲವಾಗಿತ್ತು. ನಾವು ಬಳ್ಳಾರಿಗೆ ಹೋದಾಗಲೆಲ್ಲಾ ಇವರ ಮನೆಯಲ್ಲಿಯೇ ಉಳಿಯುತ್ತಿದ್ದೆವು. ಆತನ ತಂದೆ-ತಾಯಿಯರು ನಮ್ಮ ಅಪ್ಪ- ಅಮ್ಮರನ್ನು ತುಂಬಾ ವಿಶ್ವಾಸದಿಂದ ಕಾಣುತ್ತಿದ್ದರು. ಕಿಟ್ಟಣ್ಣ ಮಾಮ ದೂರದ ನಗರದಲ್ಲಿ ಓದಿ ಬಂದಿದ್ದ.

ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ಕಿಟ್ಟಣ್ಣ ಮಾಮ ನಾಸ್ತಿಕನಾಗಿದ್ದ. ಜನಿವಾರ ಕಿತ್ತು ಹಾಕಿ, ಊಟದ ಎಲೆಗೆ ಸುತ್ತು ಕಟ್ಟದೆ ಉಣ್ಣುತ್ತಿದ್ದ. ಆ ಕಾಲದಲ್ಲಿ ನಾಸ್ತಿಕತೆಯೂ ಒಂದು ಬಗೆಯ ಶೋಕಿ ಆಗಿತ್ತು. ತನ್ನದೇ ಮನೋಭಾವದ ಹಲವು ಗೆಳೆಯರನ್ನು ಕಟ್ಟಿಕೊಂಡು ಆತ ‘ಪವಾಡ ಬಯಲು ಸಂಘ’ ಮಾಡಿಕೊಂಡಿದ್ದ.

ಈ ಸಂಘದ ಕಾರ್ಯಕ್ರಮಕ್ಕೆ ಆಗಾಗ ಪುಟ್ಟ ಮಕ್ಕಳಾದ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ. ದೇವರು ಎಂಬುದು ಸುಳ್ಳು, ಎಲ್ಲ ಪವಾಡಗಳು ಕಣ್ಣುಕಟ್ಟು ವಿದ್ಯೆಗಳು, ಸನ್ಯಾಸಿ-–ಬಾಬಾಗಳು ನಮ್ಮನ್ನು ಮೋಸ ಮಾಡುತ್ತಾರೆ, ಪೂಜೆ– ಪುನಸ್ಕಾರ ಎಂಬುದೆಲ್ಲಾ ಮಾಡಬಾರದು– ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು.

ನಿಂಬೆ ಹಣ್ಣಿನಿಂದ ರಕ್ತ ಬರಿಸುವುದು ಹೇಗೆ, ಆಕಾಶದಲ್ಲಿ ಕೈಯಾಡಿಸಿ ವಿಭೂತಿ ಸೃಷ್ಟಿಸುವುದು ಹೇಗೆ – ಇತ್ಯಾದಿಗಳ ಪ್ರಾತ್ಯಕ್ಷಿಕೆಯೂ ಇರುತ್ತಿತ್ತು. ಇವೆಲ್ಲದರಿಂದ ಪ್ರಭಾವಿತನಾದ ನಾನು ಅಮ್ಮನ ಹತ್ತಿರ “ದೇವರು ಇಲ್ಲ ಅಂತಾರಲ್ಲಮ್ಮ, ನಿಜಾನಾ?” ಅಂತ ಕೇಳಿದ್ದೆ. ಅದಕ್ಕೆ ನಮ್ಮಮ್ಮ “ಅಯ್ಯೋ ನಮ್ಮಪ್ಪಾ, ಈ ದೇವರು ಇಲ್ಲ ಅನ್ನೋದೆಲ್ಲಾ ಹೊಟ್ಟೆ ತುಂಬಿದವರ ಶೋಕಿ.

ನಾಳೆ ಊಟಕ್ಕೆ ಏನಪ್ಪಾ ಗತಿ ಅನ್ನೋ ಬಡವರಿಗೆ, ಈವತ್ತು ರಾತ್ರಿ ಕಣ್ತುಂಬಾ ನಿದ್ದೆ ಕೊಡೋದು ಆ ಭಗವಂತನೇ!” ಎಂದು ತನ್ನ ಜೀವನಧರ್ಮವನ್ನು ತಿಳಿಸಿದ್ದಳು. ಈ ದಿನಗಳಲ್ಲಿ ಕಿಟ್ಟಣ್ಣ ಮಾಮಗೆ ಇದ್ದಕ್ಕಿದ್ದಂತೆಯೇ ಹೊಟ್ಟೆ ನೋವಿನ ರೋಗ ಶುರುವಾಯ್ತು. ಜೀವವೇ ಹೋಗುವಂತೆ ಒದ್ದಾಡಲಾರಂಭಿಸಿದ.

ಹಲವಾರು ಡಾಕ್ಟರಿಗೆ ತೋರಿಸಿದ ಮೇಲೆ ಅದು ಕರುಳಿನ ಕ್ಯಾನ್ಸರ್‌ಎಂದೂ, ಆರು ತಿಂಗಳಿಗೂ ಹೆಚ್ಚು ದಿನ ಆತ ಬದುಕುವದಿಲ್ಲವೆಂದೂ ಪತ್ತೆ ಆಯಿತು. ಡಾಕ್ಟರರು ಕೈ ಚೆಲ್ಲಿಬಿಟ್ಟರು. ಅತ್ಯಂತ ಚಟುವಟಿಕೆಯ ವ್ಯಕ್ತಿಯಾದ ಕಿಟ್ಟಣ್ಣ ಮಾಮ ಹಾಸಿಗೆ ಹಿಡಿದದ್ದು ನೋಡಿದಾಗ ಸಂಕಟವಾಗುತ್ತಿತ್ತು. ಆಗ ಬಂಧು-ಬಳಗದವರೆಲ್ಲರೂ ಆತನನ್ನು ಮಾತನಾಡಿಸಲು ಬರುತ್ತಿದ್ದರು.

ಎಲ್ಲರೂ ಅವನ ನಾಸ್ತಿಕತೆಯೇ ಈ ‘ತಿಕ್ಕಡಿ’ಗೆ ಕಾರಣವೆಂದು ಅವನ ಎದುರಿನಲ್ಲೇ ಹೇಳಿ ಹಂಗಿಸುತ್ತಿದ್ದರು. ಎಂತೆಂತಹದೋ ಪೂಜೆ, ಪುನಸ್ಕಾರಗಳನ್ನು ಮಾಡಲು ಸಲಹೆ ಕೊಡಲಾರಂಭಿಸಿದರು. ಮೊದಲಿಗೆ ಕಿಟ್ಟಣ್ಣ ಮಾಮ ಎಲ್ಲವನ್ನೂ ವಿರೋಧಿಸಿದ. ಆದರೆ ಆತನ ನೋವು ಮತ್ತು ಸಾವಿನ ಭಯ ಅದೆಷ್ಟು ಭೀಕರವಾಗಿತ್ತೆಂದರೆ, ಹೇಗಾದರೂ ಅದು ಪರಾಭವವಾದರೆ ಸಾಕು ಅಂತನ್ನಿಸಿ ಒಪ್ಪಿಕೊಳ್ಳಲು ಶುರು ಮಾಡಿದ.

ಒಮ್ಮೆ ಆತ ಬಗ್ಗಿದ ಸಂಜ್ಞೆ ಸಿಗುತ್ತಲೇ, ಆಸ್ತಿಕರ ದಬ್ಬಾಳಿಕೆ ಶಕ್ತಿ ಪಡೆದುಕೊಳ್ಳಲಾರಂಭಿಸಿತು. ‘ಮೃತ್ಯುಂಜಯ ಹೋಮ’ ಮಾಡಿದರೆ ಖಂಡಿತಾ ಎದ್ದು ಓಡಾಡುತ್ತಾನೆ ಎಂದು ಯಾರೋ ತಲೆಗೆ ತುಂಬಿಸಿಬಿಟ್ಟರು. ಹೋಮದ ತಯಾರಿ ಭರ್ಜರಿಯಾಗಿ ನಡೆಯಿತು. ನಾವೂ ಬಳ್ಳಾರಿಗೆ ಹೋದೆವು.

ಹೋಮದ ಹಿಂದಿನ ದಿನ ಎಲ್ಲರೂ ಅನೇಕ ಚಟುವಟಿಕೆಗಳಲ್ಲಿ ನಿರತರಾಗಿ ಮನೆಯಿಂದ ಹೊರಗೆ ಹೋಗಿದ್ದರೆ. ಕಿಟ್ಟಣ್ಣ ಮಾಮನ ಬಳಿ ಕುಳಿತುಕೊಳ್ಳಲು ನನಗೆ ಹೇಳಿದ್ದರು. ಆಗ ರಮೇಶಣ್ಣ ಅಲ್ಲಿಗೆ ಬಂದ. ಆತ ಕಿಟ್ಟಣ್ಣ ಮಾಮನ ಗೆಳೆಯ ಮತ್ತು ‘ಪವಾಡ ಬಯಲು ಸಂಘ’ದ ಸದಸ್ಯ. ಮನೆಯಲ್ಲಿ ಯಾರೂ ಇಲ್ಲ ಎನ್ನುವ ಧೈರ್ಯದಿಂದಲೋ ಏನೋ, ಆತ ಕಿಟ್ಟಣ್ಣ ಮಾಮನನ್ನು ಬಹುವಾಗಿ ಟೀಕಿಸಿದ.

ನೀನು ಅದು ಹೇಗೆ ಇಂತಹ ಮೌಢ್ಯಗಳಿಗೆ ಒಪ್ಪಿಕೊಂಡೆ? ಇಷ್ಟು ದಿನ ಸಂಘ ಕಟ್ಟಿ ಬೆಳೆಸಿದ ನಿನ್ನ ವರ್ತನೆಯೆಲ್ಲಾ ಬರೀ ನಾಟಕವೆ? ಮುಂದೆ ನಾವು ಸಂಘವನ್ನು ನಡೆಸುವುದಾದರೂ ಹೇಗೆ? ಇತ್ಯಾದಿ ಪ್ರಶ್ನೆಗಳನ್ನು ಬಹು ಕಟುವಾಗಿ ಕಿಟ್ಟಣ್ಣ ಮಾಮನಿಗೆ ಕೇಳಿದ. ಯಾವುದಕ್ಕೂ ಉತ್ತರಿಸದ ಕಿಟ್ಟಣ್ಣ ಮಾಮ ಒಂದೇ ಸವನೆ ಕಣ್ಣೀರು ಸುರಿಸಿದ.

ಕೊನೆಗೆ ರಮೇಶಣ್ಣ ಎದ್ದು ಹೊರಹೋದ. ಆವರೆಗಿನ ಆತನ ಮಾತುಕತೆಯಿಂದ ಕಂಗೆಟ್ಟಿದ್ದ ನಾನು ರಮೇಶಣ್ಣನ ಹಿಂದೆಯೇ ಓಡಿದೆ. ಅಂಗಳದಲ್ಲಿ ಆತನನ್ನು ನಿಲ್ಲಿಸಿ “ಮೃತ್ಯುಂಜಯ ಹೋಮ ಮಾಡಿದ್ರೆ ಕಿಟ್ಟಣ್ಣ ಮಾಮಗೆ ಗುಣ ಆಗ್ತದೆ ಅಂತ ಅಮ್ಮ ಹೇಳಿದ್ಳು. ನಿಜಾನಾ ರಮೇಶಣ್ಣ?” ಎಂದು ಕೇಳಿದೆ.

ಆತ ಎರಡೂ ಕೈಗಳನ್ನು ಇಲ್ಲವೆನ್ನುವಂತೆ ಅಲ್ಲಾಡಿಸಿ “ಯಾವುದರಿಂದಲೂ ಗುಣ ಆಗಲ್ಲ, ನೋಡ್ತಾ ಇರು, ನಿಮ್ಮ ಕಿಟ್ಟಣ್ಣ ಮಾಮ ಇನ್ನು ಸ್ವಲ್ಪ ದಿನಕ್ಕೆ ಗೊಟಕ್ ಅಂತಾನೆ” ಅಂತ ಹೇಳಿ ಹೊರಟುಹೋದ. ರಮೇಶಣ್ಣನ ಮಾತು ನಿಜವಾಯ್ತು. ಹೋಮ ಕಾರ್ಯ ನಡೆದು ಸರಿಯಾಗಿ ಒಂದು ವಾರಕ್ಕೆ ಕಿಟ್ಟಣ್ಣ ಮಾಮ ಕೊನೆಯುಸಿರೆಳೆದ.

ಕರ್ಮಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಹದಿಮೂರನೆಯ ದಿನಕ್ಕೆ ವೈಕುಂಠ ಸಮಾರಾಧನೆಯನ್ನು ಮಾಡಿದರು. ಆವತ್ತು ಕಿಟ್ಟಣ್ಣ ಮಾಮನ ಗೆಳೆಯರೆಲ್ಲರನ್ನೂ ಕರೆದಿದ್ದರು. ರಮೇಶಣ್ಣನೂ ಬಂದಿದ್ದ. ಆದರೆ ಗಲಾಟೆಯಲ್ಲಿ ನನಗೆ ಆತನನ್ನು ಮಾತನಾಡಿಸಲು ಆಗಿರಲಿಲ್ಲ. ಊಟ ಮುಗಿದು ಕೈ ತೊಳೆಯಲು ಹಿತ್ತಲಿಗೆ ಹೋದಾಗ, ಆತನೂ ನನ್ನ ಪಕ್ಕವೇ ನಿಂತು ಕೈ ತೊಳೆದ.

ನನಗೆ ಆತನನ್ನು ಹೇಗೆ ಮಾತನಾಡಿಸುವುದೋ ತಿಳಿಯಲಿಲ್ಲ. ಸುಮ್ಮನೆ ಆತನೆಡೆಗೆ ನೋಡಿದೆ. ಆಗ ರಮೇಶಣ್ಣ ಅತ್ಯಂತ ವ್ಯಂಗ್ಯವಾಗಿ ಒಂದು ನಗೆಯನ್ನು ನಕ್ಕ. “ಕಿಟ್ಟಣ್ಣ ಮಾಮ ಸಾಯ್ತಾನೆ ಅಂತ ನಾನು ಹೇಳಿರಲಿಲ್ವಾ?” ಎನ್ನುವ ಕುಹಕ ಆ ನಗೆಯಲ್ಲಿ ತುಂಬಿ ತುಳುಕುತ್ತಿತ್ತು.

ತನ್ನ ಮಾತು ಸತ್ಯವಾಗಿದ್ದಕ್ಕೆ ಆತ ಒಳಗೊಳಗೇ ಹೆಮ್ಮೆ ಪಡುತ್ತಿರುವುದು ನನಗೆ ಗೊತ್ತಾಯ್ತು. ಆತನ ಆ ನಗೆ ನನಗೆ ಅದೆಷ್ಟು ಹೇಸಿಗೆಯನ್ನು ತರಿಸಿತೆಂದರೆ, ಬದುಕಿನಲ್ಲಿ ನಾನು ಮುಂದೆ ಎಂತಹ ವ್ಯಕ್ತಿತ್ವ ಬೆಳೆಸಿಕೊಂಡರೂ ಅಡ್ಡಿಯಿಲ್ಲ, ಈ ರಮೇಶಣ್ಣನ ತರಹ ಮಾತ್ರ ಆಗಬಾರದು ಎಂದು ಆ ಕ್ಷಣದಲ್ಲಿಯೇ ನಿರ್ಧರಿಸಿದೆ.

ಎಲ್ಲಿಯೋ ದೂರದಲ್ಲಿ ಅವರ ಕಣ್ಣಿಗೆ ಕಾಣದಂತೆ ಹೋಗಿ ಸ್ನಾನ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಅತ್ಯಂತ ಸಮತಟ್ಟಾದ ಬಯಲಿನಲ್ಲಿ ಆ ಸರೋವರವಿದೆ. ಎಷ್ಟೇ ದೂರ ಚಲಿಸಿದರೂ ನಾವು ಯಾರ ಕಣ್ಣಿಂದಲೂ ಮರೆಯಾಗುವ ಸಾಧ್ಯತೆ ಇಲ್ಲ. ಕೊನೆಗೆ ಬಯಕೆಯನ್ನು ತಡೆಯಲಾಗದೆ, ಉಟ್ಟ ಬಟ್ಟೆಗಳನ್ನು ಕಳಚಿ ಆ ಸರೋವರದಲ್ಲಿ ಮುಳುಗು ಹಾಕಿ ಬಿಟ್ಟೆ.

ಮೈ ಕೊರೆಯುವ ಆ ನೀರು ನನ್ನ ಎಲುಬುಗಳನ್ನೂ ಪುಡಿಪುಡಿಯಾಗಿಸುವಂತೆ ನನ್ನಲ್ಲಿ ನಡುಕವನ್ನು ಹುಟ್ಟಿಸಿಬಿಟ್ಟಿತು. ಎಲ್ಲಾ ಸಹಯಾತ್ರಿಕರು ಏನೋ ಅನಾಹುತವಾದಂತೆ ನನ್ನೆಡೆಗೆ ನೋಡಿ ‘ಹೋ’ ಎಂದು ಸದ್ದು ಮಾಡಿದರು. ಅವರ ಆಘಾತಕ್ಕೆ ವಿಚಲಿತನಾಗದೆ, ಮೂರು ಸಾರಿ ಮುಳುಗಿ ಹಾಕಿದ ನಾನು ದಂಡೆಗೆ ಬಂದು ಟವೆಲಿನಿಂದ ಮೈ ಒರೆಸಿಕೊಂಡು, ಒಣಗಿದ ವಸ್ತ್ರಗಳನ್ನು ಧರಿಸಿ ನಗುತ್ತಾ ನಿಂತು ಬಿಟ್ಟೆ.

ಸಾಕಷ್ಟು ಜನ ನನ್ನ ಕೃತ್ಯಕ್ಕೆ ಕೋಪವನ್ನು ವ್ಯಕ್ತಪಡಿಸಿದರು. ಕೆಲವರು ಹೆದರಿಕೆಯಿಂದ ಮಾತು ಹೊರಡದಂತೆ ನನ್ನೆಡೆಗೆ ನೋಡಿದರು. ಹಿರಿಯರೊಬ್ಬರು ನನ್ನ ಹತ್ತಿರ ಬಂದು “ಏನಾದ್ರೂ ಆದ್ರೆ ಗತಿಯೇನು?” ಎಂದು ದಬಾಯಿಸಿದರು. “ಇಲ್ಲ, ಏನೂ ಆಗಲ್ಲ” ಎಂದು ನಕ್ಕೆ. “ಅದು ಹೇಗೆ ಖಚಿತವಾಗಿ ಹೇಳ್ತೀರ?” ಎಂದು ಸವಾಲು ಹಾಕಿದರು. ಸ್ನಾನ ಮಾಡಿ ಯಶಸ್ವಿಯಾದ ನಾನು ಅತ್ಯಂತ ಉತ್ಸಾಹದಲ್ಲಿದ್ದೆ.

ಅವರನ್ನು ತಮಾಷೆ ಮಾಡುವ ಉತ್ಸಾಹ ಬಂತು. “ಆ ರಾವಣಾಸುರ ದಕ್ಷಿಣ ಭಾರತದವನು. ನಾನೂ ಕೂಡಾ... ಆತಂಗೆ ಶಾಸ್ತ್ರೀಯ ಸಂಗೀತ ಅಂದ್ರೆ ಜೀವ. ನಂಗೂ... ಜೊತೆಗೆ ಆತ ಮಹಾಬ್ರಾಹ್ಮಣ ಅಂತೆ, ನಾನೂ... ಅದಕ್ಕೇ ನಂಗೇನೂ ಆತ ಮಾಡಲ್ಲ ಅಂತ ಚೆನ್ನಾಗಿ ಗೊತ್ತು” ಎಂದು ನಗುತ್ತಾ ಹೇಳಿದೆ. ನನ್ನ ಈ ಉಡಾಫೆಯ ಮಾತು ಅವರಿಗೆ ಕೋಪವನ್ನು ತರಿಸಿತು.

ಅದಕ್ಕೆ ಪ್ರತಿಯಾಗಿ “ಆತ ಮದುವೆಯಾದ ಹೆಂಗಸನ್ನ ಕಳ್ಳತನ ಮಾಡಿಕೊಂಡು ಹೋದ. ಮತ್ತೆ ನೀವು?” ಎಂದು ಪ್ರಶ್ನಿಸಿ ಹೊರಟುಹೋದರು. ಇಡೀ ದಿನ ಯಾತ್ರಾರ್ಥಿಗಳು ನನ್ನನ್ನು ಗುಂಪಿಂದ ದೂರವಿಟ್ಟರು. ಆ ಸಂಜೆ ನನ್ನನ್ನು ಭಜನೆಯಲ್ಲಿ ಸೇರಿಸಿಕೊಳ್ಳಲಿಲ್ಲ.

ಅವರ ನಂಬಿಕೆಗಳನ್ನು ಹುಸಿಯಾಗಿಸಲು ಪ್ರಯತ್ನಿಸಿದ ನನ್ನ ವರ್ತನೆ ಅವರಿಗೆ ನೋವು ತಂದಿತ್ತು. ನನಗೂ ಎಲ್ಲೋ ಮನಸ್ಸಿನಾಳದಲ್ಲಿ ನನ್ನ ನಡವಳಿಕೆ ತಪ್ಪಾಯಿತೇನೋ ಎಂಬ ಅಳುಕು ಉಂಟಾಗಿತ್ತು. ಆದರೂ ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಾ ದಿನದೂಡಿದೆ. ಆದರೆ ಅವರೆಲ್ಲಾ ತಮ್ಮ ತಮ್ಮೊಳಗೆ ಗುಸುಗುಸು ಶುರು ಮಾಡಿಕೊಂಡು ಬಿಟ್ಟರು.

ಮರುದಿನ ನಾನು ಖಂಡಿತವಾಗಿಯೂ ಹುಚ್ಚನಾಗಿರುತ್ತೇನೆ ಎಂಬ ವದಂತಿ ಅವರ ಮಧ್ಯೆ ಹರಡಿತು. ಅದಕ್ಕೆ ಸರಿಯಾಗಿ ನನಗೆ ಸಂಜೆಯ ವೇಳೆಗೆ ಸಣ್ಣಗೆ ಜ್ವರ ಶುರುವಾಯಿತು. ಅವರ ಗುಸುಗುಸು ಇನ್ನಷ್ಟು ಶಕ್ತಿಯನ್ನು ಪಡೆದುಕೊಂಡಿತು. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಒಂದು ಜ್ವರದ ಮಾತ್ರೆಯನ್ನು ನುಂಗಿ, ಒಂದು ಲೋಟ ಬಿಸಿಯಾದ ಹಾಲನ್ನು ಕುಡಿದು ನಿದ್ದೆ ಮಾಡಿದೆ.

ಬೆಳಿಗ್ಗೆ ಏಳುವದರಲ್ಲಿ ಯಾವತ್ತಿನಂತೆ ಗೆಲುವಾಗಿ ಬಿಟ್ಟಿದ್ದೆ. ಒಬ್ಬೊಬ್ಬರಾಗಿ ಸಹಯಾತ್ರಿಕರು ನನ್ನನ್ನು ಮಾತನಾಡಿಸಲು ಬಂದರು. ಏನೇನೋ ತರ್ಕದ ಪ್ರಶ್ನೆಗಳನ್ನು ಕೇಳಿ ನನಗೆ ಹುಚ್ಚು ಹಿಡಿದಿಲ್ಲ ಎನ್ನುವದನ್ನು ಅವರು ಖಚಿತ ಪಡಿಸಿಕೊಳ್ಳುತ್ತಿದ್ದುದು ನನಗೆ ತಿಳಿಯುತ್ತಿತ್ತು.

ಆದರೆ ನನ್ನನ್ನು ಕಾಡಿದ ಸಂಗತಿಯೇನೆಂದರೆ, ನಾನು ಆರಾಮಾಗಿದ್ದೇನೆ ಎನ್ನುವ ಸಂಗತಿ ಅವರಿಗೆ ಬಹಳ ನಿರಾಸೆಯನ್ನು ಮೂಡಿಸುತ್ತಿತ್ತು. ಒಂದು ವೇಳೆ ನನಗೆ ನಿಜಕ್ಕೂ ಹುಚ್ಚು ಹಿಡಿದಿದ್ದರೆ ಅವರೆಲ್ಲಾ ಸಂತೋಷ ಪಡುತ್ತಿದ್ದರೇನೋ ಎಂದು ನನಗೆ ಸ್ಪಷ್ಟವಾಗಿ ಅನ್ನಿಸಿಬಿಟ್ಟು, ಎಲ್ಲೋ ಮನಸ್ಸಿನ ಆಳದಲ್ಲಿ ನೋವಿನ ಶೃತಿ ಮಿಡಿಯಿತು.

ಈ ಗುಂಪಿನ ನಂಬಿಕೆಗಳು ಆಸ್ತಿಕವೋ ನಾಸ್ತಿಕವೋ ಎಂಬುದು ಮುಖ್ಯವಾಗುವುದೇ ಇಲ್ಲ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಒಟ್ಟಾರೆ ಒಂದು ಬಗೆಯ ನಂಬಿಕೆಗಳನ್ನು ಬುನಾದಿ ಮಾಡಿಕೊಂಡ ಒಂದು ಗುಂಪು, ಅದನ್ನು ಒಪ್ಪದ ಮತ್ತೊಂದು ಗುಂಪನ್ನು ವಿರೋಧಿಸುತ್ತದೆ. ಮಾನವೀಯತೆಯನ್ನು ಬೆಳೆಸಿಕೊಳ್ಳದೆ ಹೋದರೆ ಇಂತಹ ವಿರೋಧಗಳು ಯಾವುದೇ ಕ್ರೌರ್ಯವನ್ನೂ ತಲುಪಬಲ್ಲವು.

ಇದಕ್ಕೆ ಪೂರಕವಾಗಿ ನನ್ನ ಬಾಲ್ಯದ ಒಂದು ಘಟನೆಯನ್ನು ಹೇಳಿಬಿಡುತ್ತೇನೆ. ಈ ಘಟನೆಯು ನಾವೆಲ್ಲರೂ ‘ಕಿಟ್ಟಣ್ಣ ಮಾಮ’ ಎಂದು ಕರೆಯುತ್ತಿದ್ದ, ನಮ್ಮ ಕುಟುಂಬಕ್ಕೆ ದೂರದ ಸಂಬಂಧಿಯಾದರೂ ಸ್ನೇಹಕ್ಕೆ ಬಹು ಹತ್ತಿರದವನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ. ಸುಮಾರು ಮೂವತ್ತೈದರ ವಯಸ್ಸಿನ ಈತ ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಮಾಡಿಕೊಂಡಿದ್ದ.

ಸಾಕಷ್ಟು ಶ್ರೀಮಂತ ಮನೆತನದವರಾದ ಕಾರಣ ಇವರ ಬಳ್ಳಾರಿಯ ಮನೆ ವಿಶಾಲವಾಗಿತ್ತು. ನಾವು ಬಳ್ಳಾರಿಗೆ ಹೋದಾಗಲೆಲ್ಲಾ ಇವರ ಮನೆಯಲ್ಲಿಯೇ ಉಳಿಯುತ್ತಿದ್ದೆವು. ಆತನ ತಂದೆ-ತಾಯಿಯರು ನಮ್ಮ ಅಪ್ಪ- ಅಮ್ಮರನ್ನು ತುಂಬಾ ವಿಶ್ವಾಸದಿಂದ ಕಾಣುತ್ತಿದ್ದರು.
ಕಿಟ್ಟಣ್ಣ ಮಾಮ ದೂರದ ನಗರದಲ್ಲಿ ಓದಿ ಬಂದಿದ್ದ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು.

ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ಕಿಟ್ಟಣ್ಣ ಮಾಮ ನಾಸ್ತಿಕನಾಗಿದ್ದ. ಜನಿವಾರ ಕಿತ್ತು ಹಾಕಿ, ಊಟದ ಎಲೆಗೆ ಸುತ್ತು ಕಟ್ಟದೆ ಉಣ್ಣುತ್ತಿದ್ದ. ಆ ಕಾಲದಲ್ಲಿ ನಾಸ್ತಿಕತೆಯೂ ಒಂದು ಬಗೆಯ ಶೋಕಿ ಆಗಿತ್ತು. ತನ್ನದೇ ಮನೋಭಾವದ ಹಲವು ಗೆಳೆಯರನ್ನು ಕಟ್ಟಿಕೊಂಡು ಆತ ‘ಪವಾಡ ಬಯಲು ಸಂಘ’ ಮಾಡಿಕೊಂಡಿದ್ದ.

ಈ ಸಂಘದ ಕಾರ್ಯಕ್ರಮಕ್ಕೆ ಆಗಾಗ ಪುಟ್ಟ ಮಕ್ಕಳಾದ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ. ದೇವರು ಎಂಬುದು ಸುಳ್ಳು, ಎಲ್ಲ ಪವಾಡಗಳು ಕಣ್ಣುಕಟ್ಟು ವಿದ್ಯೆಗಳು, ಸನ್ಯಾಸಿ-–ಬಾಬಾಗಳು ನಮ್ಮನ್ನು ಮೋಸ ಮಾಡುತ್ತಾರೆ, ಪೂಜೆ– ಪುನಸ್ಕಾರ ಎಂಬುದೆಲ್ಲಾ ಮಾಡಬಾರದು– ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು.

ನಿಂಬೆ ಹಣ್ಣಿನಿಂದ ರಕ್ತ ಬರಿಸುವುದು ಹೇಗೆ, ಆಕಾಶದಲ್ಲಿ ಕೈಯಾಡಿಸಿ ವಿಭೂತಿ ಸೃಷ್ಟಿಸುವುದು ಹೇಗೆ – ಇತ್ಯಾದಿಗಳ ಪ್ರಾತ್ಯಕ್ಷಿಕೆಯೂ ಇರುತ್ತಿತ್ತು. ಇವೆಲ್ಲದರಿಂದ ಪ್ರಭಾವಿತನಾದ ನಾನು ಅಮ್ಮನ ಹತ್ತಿರ “ದೇವರು ಇಲ್ಲ ಅಂತಾರಲ್ಲಮ್ಮ, ನಿಜಾನಾ?” ಅಂತ ಕೇಳಿದ್ದೆ. ಅದಕ್ಕೆ ನಮ್ಮಮ್ಮ “ಅಯ್ಯೋ ನಮ್ಮಪ್ಪಾ, ಈ ದೇವರು ಇಲ್ಲ ಅನ್ನೋದೆಲ್ಲಾ ಹೊಟ್ಟೆ ತುಂಬಿದವರ ಶೋಕಿ.

ನಾಳೆ ಊಟಕ್ಕೆ ಏನಪ್ಪಾ ಗತಿ ಅನ್ನೋ ಬಡವರಿಗೆ, ಈವತ್ತು ರಾತ್ರಿ ಕಣ್ತುಂಬಾ ನಿದ್ದೆ ಕೊಡೋದು ಆ ಭಗವಂತನೇ!” ಎಂದು ತನ್ನ ಜೀವನಧರ್ಮವನ್ನು ತಿಳಿಸಿದ್ದಳು. ಈ ದಿನಗಳಲ್ಲಿ ಕಿಟ್ಟಣ್ಣ ಮಾಮಗೆ ಇದ್ದಕ್ಕಿದ್ದಂತೆಯೇ ಹೊಟ್ಟೆ ನೋವಿನ ರೋಗ ಶುರುವಾಯ್ತು. ಜೀವವೇ ಹೋಗುವಂತೆ ಒದ್ದಾಡಲಾರಂಭಿಸಿದ.

ಹಲವಾರು ಡಾಕ್ಟರಿಗೆ ತೋರಿಸಿದ ಮೇಲೆ ಅದು ಕರುಳಿನ ಕ್ಯಾನ್ಸರ್‌ಎಂದೂ, ಆರು ತಿಂಗಳಿಗೂ ಹೆಚ್ಚು ದಿನ ಆತ ಬದುಕುವದಿಲ್ಲವೆಂದೂ ಪತ್ತೆ ಆಯಿತು. ಡಾಕ್ಟರರು ಕೈ ಚೆಲ್ಲಿಬಿಟ್ಟರು. ಅತ್ಯಂತ ಚಟುವಟಿಕೆಯ ವ್ಯಕ್ತಿಯಾದ ಕಿಟ್ಟಣ್ಣ ಮಾಮ ಹಾಸಿಗೆ ಹಿಡಿದದ್ದು ನೋಡಿದಾಗ ಸಂಕಟವಾಗುತ್ತಿತ್ತು. ಆಗ ಬಂಧು-ಬಳಗದವರೆಲ್ಲರೂ ಆತನನ್ನು ಮಾತನಾಡಿಸಲು ಬರುತ್ತಿದ್ದರು.

ಎಲ್ಲರೂ ಅವನ ನಾಸ್ತಿಕತೆಯೇ ಈ ‘ತಿಕ್ಕಡಿ’ಗೆ ಕಾರಣವೆಂದು ಅವನ ಎದುರಿನಲ್ಲೇ ಹೇಳಿ ಹಂಗಿಸುತ್ತಿದ್ದರು. ಎಂತೆಂತಹದೋ ಪೂಜೆ, ಪುನಸ್ಕಾರಗಳನ್ನು ಮಾಡಲು ಸಲಹೆ ಕೊಡಲಾರಂಭಿಸಿದರು. ಮೊದಲಿಗೆ ಕಿಟ್ಟಣ್ಣ ಮಾಮ ಎಲ್ಲವನ್ನೂ ವಿರೋಧಿಸಿದ. ಆದರೆ ಆತನ ನೋವು ಮತ್ತು ಸಾವಿನ ಭಯ ಅದೆಷ್ಟು ಭೀಕರವಾಗಿತ್ತೆಂದರೆ, ಹೇಗಾದರೂ ಅದು ಪರಾಭವವಾದರೆ ಸಾಕು ಅಂತನ್ನಿಸಿ ಒಪ್ಪಿಕೊಳ್ಳಲು ಶುರು ಮಾಡಿದ.

ಒಮ್ಮೆ ಆತ ಬಗ್ಗಿದ ಸಂಜ್ಞೆ ಸಿಗುತ್ತಲೇ, ಆಸ್ತಿಕರ ದಬ್ಬಾಳಿಕೆ ಶಕ್ತಿ ಪಡೆದುಕೊಳ್ಳಲಾರಂಭಿಸಿತು. ‘ಮೃತ್ಯುಂಜಯ ಹೋಮ’ ಮಾಡಿದರೆ ಖಂಡಿತಾ ಎದ್ದು ಓಡಾಡುತ್ತಾನೆ ಎಂದು ಯಾರೋ ತಲೆಗೆ ತುಂಬಿಸಿಬಿಟ್ಟರು. ಹೋಮದ ತಯಾರಿ ಭರ್ಜರಿಯಾಗಿ ನಡೆಯಿತು. ನಾವೂ ಬಳ್ಳಾರಿಗೆ ಹೋದೆವು.

ಹೋಮದ ಹಿಂದಿನ ದಿನ ಎಲ್ಲರೂ ಅನೇಕ ಚಟುವಟಿಕೆಗಳಲ್ಲಿ ನಿರತರಾಗಿ ಮನೆಯಿಂದ ಹೊರಗೆ ಹೋಗಿದ್ದರೆ. ಕಿಟ್ಟಣ್ಣ ಮಾಮನ ಬಳಿ ಕುಳಿತುಕೊಳ್ಳಲು ನನಗೆ ಹೇಳಿದ್ದರು. ಆಗ ರಮೇಶಣ್ಣ ಅಲ್ಲಿಗೆ ಬಂದ. ಆತ ಕಿಟ್ಟಣ್ಣ ಮಾಮನ ಗೆಳೆಯ ಮತ್ತು ‘ಪವಾಡ ಬಯಲು ಸಂಘ’ದ ಸದಸ್ಯ. ಮನೆಯಲ್ಲಿ ಯಾರೂ ಇಲ್ಲ ಎನ್ನುವ ಧೈರ್ಯದಿಂದಲೋ ಏನೋ, ಆತ ಕಿಟ್ಟಣ್ಣ ಮಾಮನನ್ನು ಬಹುವಾಗಿ ಟೀಕಿಸಿದ.

ನೀನು ಅದು ಹೇಗೆ ಇಂತಹ ಮೌಢ್ಯಗಳಿಗೆ ಒಪ್ಪಿಕೊಂಡೆ? ಇಷ್ಟು ದಿನ ಸಂಘ ಕಟ್ಟಿ ಬೆಳೆಸಿದ ನಿನ್ನ ವರ್ತನೆಯೆಲ್ಲಾ ಬರೀ ನಾಟಕವೆ? ಮುಂದೆ ನಾವು ಸಂಘವನ್ನು ನಡೆಸುವುದಾದರೂ ಹೇಗೆ? ಇತ್ಯಾದಿ ಪ್ರಶ್ನೆಗಳನ್ನು ಬಹು ಕಟುವಾಗಿ ಕಿಟ್ಟಣ್ಣ ಮಾಮನಿಗೆ ಕೇಳಿದ. ಯಾವುದಕ್ಕೂ ಉತ್ತರಿಸದ ಕಿಟ್ಟಣ್ಣ ಮಾಮ ಒಂದೇ ಸವನೆ ಕಣ್ಣೀರು ಸುರಿಸಿದ. ಕೊನೆಗೆ ರಮೇಶಣ್ಣ ಎದ್ದು ಹೊರಹೋದ.

ಆವರೆಗಿನ ಆತನ ಮಾತುಕತೆಯಿಂದ ಕಂಗೆಟ್ಟಿದ್ದ ನಾನು ರಮೇಶಣ್ಣನ ಹಿಂದೆಯೇ ಓಡಿದೆ. ಅಂಗಳದಲ್ಲಿ ಆತನನ್ನು ನಿಲ್ಲಿಸಿ “ಮೃತ್ಯುಂಜಯ ಹೋಮ ಮಾಡಿದ್ರೆ ಕಿಟ್ಟಣ್ಣ ಮಾಮಗೆ ಗುಣ ಆಗ್ತದೆ ಅಂತ ಅಮ್ಮ ಹೇಳಿದ್ಳು. ನಿಜಾನಾ ರಮೇಶಣ್ಣ?” ಎಂದು ಕೇಳಿದೆ. ಆತ ಎರಡೂ ಕೈಗಳನ್ನು ಇಲ್ಲವೆನ್ನುವಂತೆ ಅಲ್ಲಾಡಿಸಿ “ಯಾವುದರಿಂದಲೂ ಗುಣ ಆಗಲ್ಲ, ನೋಡ್ತಾ ಇರು, ನಿಮ್ಮ ಕಿಟ್ಟಣ್ಣ ಮಾಮ ಇನ್ನು ಸ್ವಲ್ಪ ದಿನಕ್ಕೆ ಗೊಟಕ್ ಅಂತಾನೆ” ಅಂತ ಹೇಳಿ ಹೊರಟುಹೋದ.

ರಮೇಶಣ್ಣನ ಮಾತು ನಿಜವಾಯ್ತು. ಹೋಮ ಕಾರ್ಯ ನಡೆದು ಸರಿಯಾಗಿ ಒಂದು ವಾರಕ್ಕೆ ಕಿಟ್ಟಣ್ಣ ಮಾಮ ಕೊನೆಯುಸಿರೆಳೆದ. ಕರ್ಮಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಹದಿಮೂರನೆಯ ದಿನಕ್ಕೆ ವೈಕುಂಠ ಸಮಾರಾಧನೆಯನ್ನು ಮಾಡಿದರು. ಆವತ್ತು ಕಿಟ್ಟಣ್ಣ ಮಾಮನ ಗೆಳೆಯರೆಲ್ಲರನ್ನೂ ಕರೆದಿದ್ದರು. ರಮೇಶಣ್ಣನೂ ಬಂದಿದ್ದ.

ಆದರೆ ಗಲಾಟೆಯಲ್ಲಿ ನನಗೆ ಆತನನ್ನು ಮಾತನಾಡಿಸಲು ಆಗಿರಲಿಲ್ಲ. ಊಟ ಮುಗಿದು ಕೈ ತೊಳೆಯಲು ಹಿತ್ತಲಿಗೆ ಹೋದಾಗ, ಆತನೂ ನನ್ನ ಪಕ್ಕವೇ ನಿಂತು ಕೈ ತೊಳೆದ. ನನಗೆ ಆತನನ್ನು ಹೇಗೆ ಮಾತನಾಡಿಸುವುದೋ ತಿಳಿಯಲಿಲ್ಲ. ಸುಮ್ಮನೆ ಆತನೆಡೆಗೆ ನೋಡಿದೆ. ಆಗ ರಮೇಶಣ್ಣ ಅತ್ಯಂತ ವ್ಯಂಗ್ಯವಾಗಿ ಒಂದು ನಗೆಯನ್ನು ನಕ್ಕ.

“ಕಿಟ್ಟಣ್ಣ ಮಾಮ ಸಾಯ್ತಾನೆ ಅಂತ ನಾನು ಹೇಳಿರಲಿಲ್ವಾ?” ಎನ್ನುವ ಕುಹಕ ಆ ನಗೆಯಲ್ಲಿ ತುಂಬಿ ತುಳುಕುತ್ತಿತ್ತು. ತನ್ನ ಮಾತು ಸತ್ಯವಾಗಿದ್ದಕ್ಕೆ ಆತ ಒಳಗೊಳಗೇ ಹೆಮ್ಮೆ ಪಡುತ್ತಿರುವುದು ನನಗೆ ಗೊತ್ತಾಯ್ತು. ಆತನ ಆ ನಗೆ ನನಗೆ ಅದೆಷ್ಟು ಹೇಸಿಗೆಯನ್ನು ತರಿಸಿತೆಂದರೆ, ಬದುಕಿನಲ್ಲಿ ನಾನು ಮುಂದೆ ಎಂತಹ ವ್ಯಕ್ತಿತ್ವ ಬೆಳೆಸಿಕೊಂಡರೂ ಅಡ್ಡಿಯಿಲ್ಲ, ಈ ರಮೇಶಣ್ಣನ ತರಹ ಮಾತ್ರ ಆಗಬಾರದು ಎಂದು ಆ ಕ್ಷಣದಲ್ಲಿಯೇ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT