ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಡಿ ₨2000ಕೋಟಿ ಸಂಗ್ರಹ: ಐಎಫ್‌ಸಿಐ ಗುರಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪರಿವರ್ತಿಸಲಾಗದ ಡಿಬೆಂಚರ್‌ (ಎನ್‌ಸಿಡಿ) ಮೂಲಕ ಗರಿಷ್ಠ ₨2000 ಕೋಟಿ ಸಂಗ್ರಹಿಸುವ ವಿಶ್ವಾಸವನ್ನು ಕೇಂದ್ರ ಸರ್ಕಾರದ ಒಡೆತನದ ಐಎಫ್‌ಸಿಐ ಲಿ. ಹೊಂದಿದೆ.

ಎನ್‌ಸಿಡಿ ಅ. 20ರಿಂದಲೇ ಹೂಡಿಕೆಗೆ ಮುಕ್ತವಾಗಿದ್ದು, ಈವರೆಗೆ ₨206 ಕೋಟಿ ಸಂಗ್ರಹವಾಗಿದೆ. ನ. 21 ಹೂಡಿ ಕೆಗೆ ಕೊನೆದಿನ. ₨೧ ಸಾವಿರ ಮುಖ ಬೆಲೆಯ ಕನಿಷ್ಠ 10 ಎನ್‌ಸಿಡಿಗಳಲ್ಲಿ ಹಣ ತೊಡಗಿಸಬೇಕು ಎಂದು ಐಎಫ್‌ ಸಿಐ ಲಿ.ನ ಉಪ ವ್ಯವಸ್ಥಾಪಕ ನಿರ್ದೇಶಕ ಅಚಲ್‌ ಕುಮಾರ್‌ ಗುಪ್ತ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಂಕ್‌ ಠೇವಣಿ ಬಡ್ಡಿದರ ಇಳಿಕೆ ಆಗಿ ರುವುದರಿಂದ ಹೂಡಿಕೆದಾರರಿಗೆ ಹಣ ತೊಡಗಿಸಲು ಎನ್‌ಸಿಡಿ ಸೂಕ್ತವಾಗಿವೆ. ವಾರ್ಷಿಕವಷ್ಟೇ ಅಲ್ಲ, ತಿಂಗಳಿಗೂ ಬಡ್ಡಿ ಪಡೆಯಬಹುದು. ಐದು, ಏಳು ಮತ್ತು ಹತ್ತು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಕನಿಷ್ಠ ಶೇ ೯.೮೦ ಗರಿಷ್ಠ ಶೇ ೧೦ರಷ್ಟು ಬಡ್ಡಿ ಗಳಿಕೆ ಅವ ಕಾಶವಿದೆ. ಈ ಎನ್‌ಸಿಡಿ, ಬಿಎಸ್‌ಇ ಮತ್ತು ಎನ್‌ಎಸ್‌ಇ ವಹಿವಾಟು ಪಟ್ಟಿಗೆ ಸೇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT