ಬೆಂಗಳೂರು: ಅಭಿನವ ಪ್ರಕಾಶನವು ಅನಂತಮೂರ್ತಿ ಗೌರವ ಮಾಲಿಕೆಯಲ್ಲಿ ಹೊರತಂದಿರುವ ‘ನುಡಿಯೊಳಗಾಗಿ’, ‘ಜೆರೋನಿಮಾ’ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್, ‘ನುಡಿಯೊಳಗಾಗಿ ಕೃತಿಯು ನುಡಿಯಲ್ಲಿ ಮನುಷ್ಯ ಒಂದಾದ ರೀತಿಯನ್ನು ವಿವರಿಸುತ್ತದೆ. ಭಾಷೆಯ ಕುರಿತ ಅಂಕಣಗಳ ಬರಹವಾದರೂ ಅದರ ಜತೆಗೆ ಮಾಹಿತಿ, ಆಲೋಚನೆ, ಭಾವನೆ, ವಿಚಾರಗಳು ಬೆಸೆದುಕೊಂಡಿವೆ’ ಎಂದರು.

ವಿಮರ್ಶಕಿ ಎಂ.ಎಸ್.ಆಶಾದೇವಿ, ‘ಜೆರೋನಿಮಾ ಕೃತಿಯು ಸ್ವಾತಂತ್ರ್ಯ, ಸಮಾನತೆಯ ಬಗೆಗಿನ ಹೋರಾಟ ಮತ್ತು ಶೋಷಣೆಯ ಇನ್ನಿತರ ಮುಖಗಳನ್ನು ಬಿಚ್ಚಿಡುತ್ತದೆ’ ಎಂದು ಹೇಳಿದರು.

ಕೃತಿಗಳ ವಿವರ: ಓ.ಎಲ್.ನಾಗಭೂಷಣ ಸ್ವಾಮಿ ಅವರ ‘ನುಡಿಯೊಳಗಾಗಿ ಭಾಷಾ ಚಿಂತನೆ’. ಬೆಲೆ– ₨ 300. ‘ಜೆರೋನಿಮಾ ಆದಿವಾಸಿಯ ಆತ್ಮಕಥನ’ ಅನುವಾದ–ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್. ಬೆಲೆ–ರೂ75.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.