ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಭಾಷೆಗೂ ಮೂಲ ಸಂಸ್ಕೃತ – ಕಯ್ಯಾರ

ಭಾಷೆ ವಿಚಾರದಲ್ಲಿ ಗೌರವ ಕೊಟ್ಟು ಸ್ವೀಕರಿಸುವಂತಾಗಲಿ
Last Updated 8 ಜೂನ್ 2015, 19:46 IST
ಅಕ್ಷರ ಗಾತ್ರ

ಮಂಗಳೂರು: ‘ಎಲ್ಲ ಭಾಷೆಗಳಿಗೂ ಮೂಲ ಸಂಸ್ಕೃತ ಭಾಷೆಯಾಗಿದ್ದು, ಭಾಷೆಯ ವಿಚಾರದಲ್ಲಿ ಗೌರವ ಕೊಟ್ಟು, ಗೌರವ ಸ್ವೀಕರಿಸುವ ಮನೋಭಾವ ಬೆಳೆದು ಬರಬೇಕು. ಹಳ್ಳಿ ಜೀವನ ಹಾಗೂ ಕೃಷಿ ನನ್ನ ಆಸಕ್ತಿಯ ಕ್ಷೇತ್ರವಾಗಿದೆ. ಈ ವಾತಾವರಣವೇ ನನ್ನ ಆರೋಗ್ಯದ ಗುಟ್ಟು’ ಎಂದು ಹಿರಿಯ ಕವಿ ಕಯ್ಯಾರ ಕಿಂಞಣ್ಣ ರೈ ಅವರು ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರ ಯದಲ್ಲಿ ಸೋಮವಾರ ಬದಿಯಡ್ಕದ ಸ್ವಗೃಹ ‘ಕವಿತಾ ಕುಟೀರ’ದಲ್ಲಿ ನಡೆದ ಶತಪೂರ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಕುಟುಂಬಿಕರ ಜತೆಯಲ್ಲಿ ಕಯ್ಯಾರರು 101ನೇ ಜನ್ಮ ದಿನವನ್ನು ಆಚರಿಸಿ ಕೊಂಡರು.

ನಿವೃತ್ತ ಲೋಕಾಯುಕ್ತ ಎನ್ ಸಂತೋಷ್‌ ಹೆಗ್ಡೆ ಉದ್ಘಾಟಸಿ ಮಾತ ನಾಡಿ, ‘ಕಯ್ಯಾರರು ಕೇರಳ ಹಾಗೂ ಪ್ರಬುದ್ಧ ಚಿಂತಕ’ ಎಂದು ಹೇಳಿದರು. ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿದ್ದರು.

ಸಚಿವ ಯು.ಟಿ.ಖಾದರ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಸಾಮಾಜಿಕ ಮುಖಂಡರಾದ ಅಜಿತ್‌ ಕುಮಾರ್ ಮಾಲಾಡಿ, ಡಾ.ಮೋಹನ ಆಳ್ವ, ಕರ್ನಾ ಟಕ ಕಾವಲು ಪಡೆಯ ಮೋಹನ್ ಕುಮಾರ ಗೌಡ, ಕನ್ನಡ ಸಂಸ್ಕೃತಿ ಇಲಾ ಖೆಯ ಅಧಿಕಾರಿ ಚಂದ್ರಹಾಸ ರೈ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಎಸ್‌ ವಿ ಭಟ್, ಉಮೇಶ್‌ ಸಾಲಿಯಾನ್, ಮಂಗಳೂರು ಆಕಾಶವಾಣಿ ನಿಲಯದ  ಅಧಿಕಾರಿ ಡಾ.ವಸಂತಕುಮಾರ ಪೆರ್ಲ, ರಾಜಕೀಯ ಮುಖಂಡರಾದ ಮಾಹಿನ್ ಕೇಳೋಟ್‌, ಸಿ.ಟಿ ಅಹಮ್ಮದಾಲಿ, ಚಿತ್ರ ಕಲಾವಿದ ಪಿ.ಎಸ್ ಪುಣಿಂಚಿತ್ತಾಯ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಕಯ್ಯಾರ ಪ್ರಶಸ್ತಿಗಳು, ಪತ್ರಿಕಾ ವರದಿಗಳು ಹಾಗೂ ಅಪೂರ್ವ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಕಯ್ಯಾ ರರ ಅಭಿಮಾನಿಗಳು ಹಿರಿಯ ಕವಿಗೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT