ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಒಲವು: ಸವಾಲು

ಡಿಜಿಪಿಗಳ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌
Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ/ ಐಎಎನ್‌ಎಸ್): ಭಾರತದ ಕೆಲವು ಯುವಕರು ಐಎಸ್‌ ಉಗ್ರ ಸಂಘಟನೆಯತ್ತ  ಆಕರ್ಷಿತರಾಗುತ್ತಿರುವುದಕ್ಕೆ ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ತೀವ್ರ ಆತಂಕ ವ್ಯಕ್ತಪಡಿಸಿದರು.

  ಶನಿವಾರ ಇಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇ­ಶ­ಗಳ ಉನ್ನತ ಪೊಲೀಸ್‌ ಅಧಿಕಾ­ರಿ­ಗಳ ೪೯ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬೆಳವಣಿಗೆಯನ್ನು ಹಗುರವಾಗಿ  ಪರಿ­ಗಣಿಸುವಂತಿಲ್ಲ ಎಂದರು.
ಐಎಸ್‌ ಸಂಘಟನೆ ಸಿರಿಯಾ ಹಾಗೂ ಇರಾಕ್‌ನಲ್ಲಿ ಹುಟ್ಟಿಕೊಂಡರೂ, ಭಾರತ ಉಪಖಂಡಕ್ಕೂ ಈ ಪಿಡುಗು ವ್ಯಾಪಿಸು­ತ್ತಿದೆ  ಎನ್ನುವುದನ್ನು ಅರ್ಥಮಾಡಿ­ಕೊಳ್ಳ­ಬೇಕು ಎಂದು ಹೇಳಿದರು.

ಸಿರಿಯಾದಲ್ಲಿ ಐಎಸ್‌ ಉಗ್ರರ ಪರ ಹೋರಾಡು­ವಾಗ ‘ಮೃತಪಟ್ಟಿದ್ದ’ ಎನ್ನುವ ವದಂತಿಗೆ ಕಾರಣನಾಗಿದ್ದ ಮುಂಬೈ ಯುವಕ ಆರೀಫ್‌

ಜಗತ್ತಿನಲ್ಲಿ ಅನೇಕ ಭಯೋ­ತ್ಪಾದಕ ಸಂಘಟನೆ­ಗಳು ಇರಬಹುದು. ಆದರೆ ಅವು ಭಾರತಕ್ಕೆ ಕಾಲಿಡಲು ನಾವು ಅವಕಾಶ ಮಾಡಿ­ಕೊಡುವುದಿಲ್ಲ
–ರಾಜನಾಥ್‌ ಸಿಂಗ್‌

ಮಜೀದ್‌ ವಾಪಸ್‌ ಬಂದ ಬೆನ್ನಲ್ಲಿಯೇ ಐಎಸ್‌ ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಅವರು, ‘ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ’ ಎಂದು ಘೋಷಿಸಿದರು.

‘ಕಿರುಕುಳ ನೀಡುವ ಉದ್ದೇ­ಶದಿಂದ ಆರೀಫ್‌ನನ್ನು ಬಂಧಿ­ಸಿಲ್ಲ. ಇಂಥ ಎಲ್ಲ ಘಟನೆಗಳನ್ನು ಸವಿ­ಸ್ತಾರ­ವಾಗಿ ವಿಚಾರಣೆಗೊಳ­ಪಡಿಸಲಾ­ಗು­ತ್ತದೆ’ ಎಂದು ಸ್ಪಷ್ಟಪಡಿಸಿದರು.

ಪಾಕ್‌ ಕುಂಟುನೆಪ: -ಪಾಕ್‌ ಕೃಪಾ ಪೋಷಿತ ಭಯೋ­ತ್ಪಾದನೆಯು ಭಾರತ­ವನ್ನು ಅಸ್ಥಿರಗೊಳಿಸಲು ಯತ್ನಿಸು­ತ್ತಿದೆ ಎಂದು ಗಂಭೀರ ಆರೋಪ ಮಾಡಿದ  ರಾಜ­ನಾಥ್‌,  ನೆರೆದೇಶವು ‘ವಿವಿಧ ತಂತ್ರ’­ಗಳ ಮೂಲಕ ಭಾರತಕ್ಕೆ ಕೇಡು ಬಗೆ­ಯುವ ತನ್ನ ಪ್ರಯತ್ನ ಬಿಟ್ಟಿಲ್ಲ ಎಂದು ವಿಷಾದಿಸಿದರು.
‘ಭಾರತದಲ್ಲಿ ನಡೆಯುವ ವಿಧ್ವಂಸಕ ಚಟುವ­ಟಿಕೆಗೂ ತನಗೂ ಸಂಬಂಧವೇ  ಇಲ್ಲ. ಇದು ಹೊರ­ಗಿನವರ ಕೃತ್ಯ ಎನ್ನುವ ಕುಂಟುನೆಪ ಹೇಳುವುದನ್ನು ಪಾಕಿ­ಸ್ತಾನ ಬಿಟ್ಟಿಲ್ಲ. ಹಾಗಾದರೆ ಐಎಸ್‌ಐ ಪಾಕಿಸ್ತಾನಕ್ಕೆ ಸಂಬಂಧಿಸಿ­ಲ್ಲವೇ’ ಎಂದು ಪ್ರಶ್ನಿಸಿದರು.

‘ಜಮ್ಮು–ಕಾಶ್ಮೀರ ವಿಧಾನಸಭೆಗೆ ಇತ್ತೀ­ಚೆಗೆ ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣ­ದಲ್ಲಿ ಜನ ತಮ್ಮ ಹಕ್ಕು ಚಲಾ­ಯಿಸಿ­ದ್ದಾರೆ. ರಾಜಕೀಯ ಸಭೆಗಳಲ್ಲಿಯಂತೂ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವ­ಹಿಸು­ತ್ತಿದ್ದಾರೆ. ಈ ಬೆಳವಣಿಗೆಯು ರಾಜ್ಯದ ವಸ್ತು­ಸ್ಥಿತಿಯ ಬಗ್ಗೆ ಭಯೋತ್ಪಾದಕ ಸಂಘ­ಟನೆಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ನುಡಿದರು.

ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ಅಕ್ಟೋಬರ್‌ ೨ರಂದು ಜಮಾತ್‌–ಉಲ್‌–ಮುಜಾಹಿದ್ದಿನ್‌ ಬಾಂಗ್ಲಾ­­ದೇಶ್‌ (ಜೆಎಂಬಿ) ಸಂಘಟನೆ ನಡೆಸಿದೆ ಎನ್ನಲಾದ ಸ್ಫೋಟವನ್ನು ಉಲ್ಲೇಖಿಸಿ, ವಿದೇಶಿ ಶಕ್ತಿಗಳು ತಮ್ಮ ಪಾತಕ ಕೃತ್ಯಗಳಿಗೆ ಭಾರತದ ನೆಲ­ವನ್ನು ಬಳಸಿ­ಕೊಳ್ಳುತ್ತಿವೆ ಎನ್ನುವುದು ಇದ­ರಿಂದ ಸಾಬೀತಾಗಿದೆ ಎಂದು ಹೇಳಿದರು.

‘ಭಾರತದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳ­ಬಹುದು ಎಂದು ವಿದೇಶಿ ಭಯೋತ್ಪಾದಕರು ಭಾವಿಸಿ­ದ್ದಾರೆ. ಆದರೆ ಭಾರತದ ಮುಸ್ಲಿಮರು ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಹೋರಾಡಲು ಸದಾ ಸಿದ್ಧ’ ಎಂದು ಸಿಂಗ್‌ ಶ್ಲಾಘಿಸಿದರು.

ನಮನ: ಕರ್ತವ್ಯದಲ್ಲಿದ್ದಾಗ ಜೀವ ಕಳೆದುಕೊಂಡ ಎಲ್ಲ ಪೊಲೀಸ್‌ ಸಿಬ್ಬಂದಿಗೆ  ಗೌರವ ನಮನ ಸಲ್ಲಿಸಿ ದೆಹ­ಲಿಯಲ್ಲಿ ಪೊಲೀಸ್‌ ಸ್ಮಾರಕ ನಿರ್ಮಾ­ಣಕ್ಕೆ ₨ ೫೦ ಕೋಟಿ ಮಂಜೂರು ಮಾಡಿದರು.

ರಾಷ್ಟ್ರ ರಾಜಧಾನಿ ನವದೆಹಲಿ­ಯಿಂದ ಹೊರ­ಗಡೆ ಇದೇ ಪ್ರಥಮ ಬಾರಿಗೆ ನಡೆದ ಸಭೆಯಲ್ಲಿ ಎಲ್ಲ ರಾಜ್ಯ­ಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಅರೆಸೇನಾ ಪಡೆ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ಸಮಾವೇಶದಲ್ಲಿ ಮಾತನಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT