ಇತ್ತೀಚೆಗೆ ಮರಳಿ ಚಲಾವಣೆಗೆ ಬಂದ ₹ 1ರ ನೋಟಿನ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಗುರುವಾರ ಈ ಉತ್ತರ ಸಿಕ್ಕಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ‘ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎಸ್‌ಪಿಎಂಸಿಐಎಲ್) 2014-15ರಲ್ಲಿ ₹ 1 ನೋಟು ಮುದ್ರಣಕ್ಕೆ ಅಂದಾಜು ₹ 1.14ರಷ್ಟು ವೆಚ್ಚವಾಗಿರ ಬಹುದು. ಈ ಕುರಿತ ಲೆಕ್ಕಪತ್ರಗಳು ಪರಿಶೀಲನೆಯಾಗುತ್ತಿದ್ದು, ಅಂತಿಮ ಅಂಕಿ ಅಂಶ ಇನ್ನಷ್ಟೇ ಪ್ರಕಟಗೊಳ್ಳ ಬೇಕಿದೆ ಎಂದು ತಿಳಿಸಿದೆ.
ಆರ್‌ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರ್ವಾಲ್ ಅವರು ನೋಟಿನ ಮುದ್ರಣ ವೆಚ್ಚದ ಕುರಿತು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.