ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮಗೆ ಬೆಂಗಳೂರಿನ ಭಯ

Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ‘ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಭಾರತ ಮತ್ತು ಚೀನಾದ ಅಸಂಖ್ಯಾತ ವಿದ್ಯಾರ್ಥಿಗಳು ಅಮೆರಿಕನ್ನ­ರನ್ನು ಮೀರಿಸುವ ರೀತಿಯಲ್ಲಿ ಪರಿಶ್ರಮ ಹಾಕುತ್ತಿದ್ದಾರೆ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ತಮ್ಮ ದೇಶದ ಯುವ ಜನರಿಗೆ ಎಚ್ಚರಿಕೆ ನೀಡಿದರು.

‘ನಮ್ಮ ಹಿಂದಿನ ತಲೆಮಾರು ಆರ್ಥಿಕ­ವಾಗಿ ಬಲಿಷ್ಠವಾಗಿತ್ತು.  ಆಗ ನಮಗೆ ಎದು­ರಾಳಿ ಇರಲಿಲ್ಲ. ಆದರೆ ಈಗ ಬೀಜಿಂಗ್‌ನಿಂದ ಬೆಂಗಳೂರು, ಮಾಸ್ಕೊ ಹೀಗೆ ಎಲ್ಲ ಕಡೆ ಪೈಪೋಟಿ ಎದುರಾ­ಗು­ತ್ತಿದೆ. ಈ ದೇಶಗಳಲ್ಲಿ ಶಿಕ್ಷಣಕ್ಕೆ ಎಲ್ಲಿಲ್ಲದ ಒತ್ತು ಸಿಗುತ್ತಿದೆ. ಅವುಗಳ ಬಲವಾದ ಪೈಪೋಟಿಯನ್ನು ನಾವು ಎದುರಿಸಬೇ­ಕಾಗಿದೆ’ ಎಂದು ಹೇಳಿದರು.

‘ಬ್ರೂಕ್‌ಲಿನ್‌ನ  ಪ್ರೌಢಶಾಲೆ­ಯೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇ­ಶಿಸಿ ಮಾತನಾಡಿದ ಅವರು,  ಈ ಬೆಳವಣಿಗೆಯಿಂದ  ಯಾರಿಗೆ ಬೇಕಾ­ದರೂ ಉದ್ಯೋಗಾವಕಾಶ ಸಿಗಬ­ಹುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT