ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಟ್ಟಿ ಬಟ್ಟಿ’ ಯಲ್ಲಿ ಕಂಗನಾ–ಇಮ್ರಾನ್ ಪ್ರಣಯ

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಕಂಗನಾ ರನೋಟ್ ಮತ್ತು ಇಮ್ರಾನ್ ಖಾನ್ ಜೋಡಿ ‘ಕಟ್ಟಿ ಬಟ್ಟಿ’ ಹಿಂದಿ ಸಿನಿಮಾದ ಪ್ರಣಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಖಿಲ್ ಅಡ್ವಾಣಿ ನಿರ್ದೇಶನದ, ಯುಟಿವಿ ಮೋಷನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಪ್ರೇಮಕಥಾ ಚಿತ್ರದ ಪಾಯಲ್ ಪಾತ್ರದಲ್ಲಿ ಕಂಗನಾ ಮಿಂಚಲಿದ್ದಾರೆ.

‘ಫ್ಯಾಷನ್’ ಹಾಗೂ ‘ಲೈಫ್ ಇನ್ ಮೆಟ್ರೊ’ ಚಿತ್ರಗಳಲ್ಲಿ ಜೊತೆಗಿದ್ದ ಯುಟಿವಿ ತಂಡದೊಂದಿಗೆ ಮತ್ತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ ಕಂಗನಾ. ‘ಡೆಲ್ಲಿ–ಬೆಲ್ಲಿ’ ಅಲ್ಲದೇ ತಮ್ಮ ಅನೇಕ ಚಿತ್ರಗಳನ್ನು ನಿರ್ಮಿಸಿದ ಯುಟಿವಿ ತಂಡದ ಜೊತೆಗೆ ಮತ್ತೆ ಕೆಲಸ ಮಾಡುತ್ತಿರುವುದು ತಮಗೂ ಸಂತೋಷದ ವಿಷಯವೇ ಎಂದಿದ್ದಾರೆ ಇಮ್ರಾನ್.

ಇವತ್ತಿನ ಹೊಸ ಜೀವನ ಶೈಲಿ, ಸಂಸ್ಕೃತಿ ಹಾಗೂ ಸಂಬಂಧಗಳ ಸುತ್ತ ಹೆಣೆಯಲಾದ ಈ ಚಿತ್ರ ಹೊಸ ರೀತಿಯ ಪ್ರೇಮಕಥೆಯನ್ನು ಹೊಂದಿದೆ. ಸಂಭಾಷಣೆ ಕೂಡ ವಿಶೇಷವಾಗಿದೆ ಎನ್ನುವುದು ಚಿತ್ರದ ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಮಾತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT