ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಲ್ಲಿ ಉತ್ತಮ ಸಾಹಿತ್ಯ: ವಿಷಾದ

ನಾ.ಮೊಗಸಾಲೆ ಅವರ ‘ಉಲ್ಲಂಘನೆ’ ಕೃತಿ ಕುರಿತು ವಿಚಾರಸಂಕಿರಣ
Last Updated 21 ಆಗಸ್ಟ್ 2015, 9:41 IST
ಅಕ್ಷರ ಗಾತ್ರ

ಬ್ರಹ್ಮಾವರ: ನಮ್ಮ ದೇಶದಲ್ಲಿ ಉತ್ತಮ ಸಾಹಿತಿಗಳಿದ್ದಾರೆ. ಅವರು ಬರೆದ ಉತ್ತಮ ಸಾಹಿತ್ಯ ಕೃತಿಗಳಿವೆ. ಆದರೆ, ಉತ್ತಮ ಸಾಹಿತ್ಯಗಳು ವಿಮರ್ಶೆಗೆ ಸಿಕ್ಕದೆ, ಭಾಷಾಂತರವಾಗದೇ ಇರುವುದರಿಂದ ಸಾಹಿತಿಗಳು ಮತ್ತು ಅವರ ಸಾಹಿತ್ಯಗಳು ಮೂಲೆಗುಂಪಾಗುತ್ತಿವೆ ಎಂದು ಸಂಶೋಧಕ ಡಾ.ಯು.ಪಿ.ಉಪಾಧ್ಯ ಅಭಿಪ್ರಾಯಪಟ್ಟರು.

ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ಇತ್ತೀಚೆಗೆ ಶಿವರಾಮ ಕಾರಂತ ವೇದಿಕೆ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಆಯೋಜಿಸಿದ್ದ ಡಾ.ನಾ ಮೊಗಸಾಲೆ ಅವರ ಉಲ್ಲಂಘನೆ ಕೃತಿಯ ಕುರಿತ ವಿಚಾರ ಸಂಕಿರಣ ಹಾಗೂ ಮೊಗಸಾಲೆ ಅವರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವರಾಮ ಕಾರಂತ ವೇದಿಕೆಯ ಪಾ.ಚಂದ್ರಶೇಖರ ಚಡಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ವಸಂತ ಕುಮಾರ ನಿಯೋಜಿತ ಭಾಷಣ ಮಾಡಿದರು. ಕ.ಸಾ.ಪದ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನಾ.ಮೊಗಸಾಲೆ ಅವರ ಉಲ್ಲಂಘನೆ ಕುರಿತು ಅವಲೋಕನ ನಡೆಸಿದರು.

ಡಾ.ನಾ.ಮೊಗಸಾಲೆ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಬಿ.ಎಸ್.ಪ್ರತಾಪ ಶೆಟ್ಟಿ, ಶಿವರಾಮ ಕಾರಂತ ವೇದಿಕೆ ಸಾಸ್ತಾನ ಶಾಖೆಯ ಕಾರ್ಯದರ್ಶಿ ನಾರಾಯಣ ಕೆ.ಶೆಟ್ಟಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

ಶಿವರಾಮ ಕಾರಂತ ವೇದಿಕೆ ಸಾಸ್ತಾನ ಶಾಖೆಯ ಅಧ್ಯಕ್ಷ ಎಚ್.ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಸಾಸ್ತಾನ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
*
ಕಾರಂತರಂತಹ ಶ್ರೇಷ್ಠ ಸಾಹಿತಿಗಳ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರೆ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಕಾರಂತರು ಟಾಗೋರರಂತೆ ವಿಶ್ವಮಾನ್ಯತೆ ಪಡೆಯುತ್ತಿದ್ದರು.
- ಡಾ.ಯು.ಪಿ.ಉಪಾಧ್ಯ,
ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT