ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ವಿಧಾನಸೌಧದ ಸದನದಲ್ಲಿ ವಿದ್ಯುತ್ ‘ಕೈ’ಕೊಟ್ಟು, ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಬಜೆಟ್ ಪ್ರತಿ ಓದಿದ ಪ್ರಸಂಗ ನಡೆಯಿತು.

ಸಿದ್ದರಾಮಯ್ಯ ಅವರು ಶುಕ್ರವಾರ 2016–17ನೇ ಸಾಲಿನ ಬಜೆಟ್ ಪ್ರತಿ ಓದುತ್ತಿದ್ದಾಗ ವಿದ್ಯುತ್ ಕೈಕೊಟ್ಟಿತು. ಇಡೀ ಸದನದಲ್ಲಿ ಕತ್ತಲು ಆವರಿಸಿತು. ಅಲ್ಲಲ್ಲಿ ಮೊಬೈಲ್ ಬ್ಯಾಟರಿಗಳು ಹೊತ್ತಿದವು. ತಕ್ಷಣ ಮಾರ್ಷಲ್ ಸಿಬ್ಬಂದಿಯೊಬ್ಬರು ಮೊಬೈಲ್ ಬ್ಯಾಟರಿ ಹಾಕಿ ಸಿದ್ದರಾಮಯ್ಯ ಅವರು ಓದು ಮುಂದುವರಿಸಲು ನೆರವಾದರು.

ಬಜೆಟ್ ಮಂಡನೆ ವೇಳೆ ವಿದ್ಯುತ್ ‘ಕೈ’ಕೊಟ್ಟ ಘಟನೆ ರಾಜ್ಯದಲ್ಲಿನ ವಿದ್ಯುತ್ ಕ್ಷಾಮದ ಬಿಸಿ ಮುಖ್ಯಮಂತ್ರಿ ಅವರಿಗೂ ತಟ್ಟುವಂತೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.