ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಗೆ ಬಸವ ಪುರಸ್ಕಾರ

Last Updated 16 ಜನವರಿ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರು 2013ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಆಯ್ಕೆ­ಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ  ಎಂ.ಎಂ.ಕಲಬುರ್ಗಿ ಅವರು, ‘ಪ್ರಶಸ್ತಿ ಬಂದಿರುವುದಕ್ಕೆ ನನಗೆ ಸಂತೋಷವೂ ಇಲ್ಲ, ಬೇಸರವೂ ಇಲ್ಲ’ ಎಂದಿದ್ದಾರೆ.

ಪ್ರಶಸ್ತಿಯು ರೂ 10 ಲಕ್ಷ ನಗದು, ಬಸವಣ್ಣನ ಪ್ರತಿಮೆಯನ್ನು ಒಳ­ಗೊಂಡಿದೆ. ಪ್ರಶಸ್ತಿ ಪ್ರದಾನ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ತಿಳಿಸಿದ್ದಾರೆ. ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ನೇತೃತ್ವದ ಸಮಿತಿಯು ‘ಬಸವ ಪುರಸ್ಕಾರ’ಕ್ಕೆ ಕಲಬುರ್ಗಿ ಅವರ ಹೆಸರು ಸೂಚಿಸಿತ್ತು.  ಸರ್ವಧರ್ಮ ಸಮಾನತೆಗೆ ವಿಶಿಷ್ಟ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT