ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯೋಣ ಬನ್ನಿ

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಹಾಲಿವುಡ್‌ನ ಪ್ರಸ್ತಾಪವಿಲ್ಲದೆ ಸಿನಿಮಾಗಳ ಕುರಿತ ಯಾವ ಚರ್ಚೆಯೂ ಪೂರ್ಣಗೊಳ್ಳುವುದಿಲ್ಲ. ಕೆಲವೊಮ್ಮೆ ಹಾಲಿವುಡ್ ಸಕಾರಾತ್ಮಕತೆಯ ಸಂಕೇತವಾದರೆ ಕೆಲವೊಮ್ಮೆ ನಕಾರಾತ್ಮಕತೆಯ ಸಂಕೇತ. ಚಲನಚಿತ್ರದ ಇತಿಹಾಸವನ್ನು, ಅದರಲ್ಲೂ ಮುಖ್ಯವಾಗಿ ಚಿತ್ರೋದ್ಯಮದ ಇತಿಹಾಸವನ್ನು ಹಾಲಿವುಡ್ ಬಿಟ್ಟು ಕಟ್ಟಲು ಸಾಧ್ಯವೇ ಇಲ್ಲ.

ಇಂದಿನ ಮಟ್ಟಿಗೆ ಹಾಲಿವುಡ್ ಎಂಬುದು ಜಾಗತಿಕ ಶಕ್ತಿಕೇಂದ್ರ. ಇದು ಹೀಗೆ ಬೆಳೆದದ್ದು ಹೇಗೆ ಎಂಬುದು ಕೇವಲ ಚಲನಚಿತ್ರದ ವಿದ್ಯಾರ್ಥಿಗಳ ಆಸಕ್ತಿಯ ವಿಚಾರವಲ್ಲ. ಇದು ಸಮಾಜ ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳ ಆಸಕ್ತಿಯ ವಿಷಯವೂ ಹೌದು. ಇದರ ಜೊತೆಗೆ ಕಾಪಿರೈಟ್‌ನಂಥ ಪರಿಕಲ್ಪನೆಗಳ ಕುರಿತ ಚರ್ಚೆಗೂ ಹಾಲಿವುಡ್ ಇರಲೇಬೇಕಾಗುತ್ತದೆ.

ಹಾಲಿವುಡ್‌ನ ಸಂಕೀರ್ಣ ಸ್ವರೂಪವನ್ನು ಬಿಡಿಸಿಡುವ ಕೋರ್ಸ್ ಒಂದನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ರೂಪಿಸಿದೆ. ಇದರಲ್ಲಿ ಸ್ಟುಡಿಯೊ ವ್ಯವಸ್ಥೆಯ ಇತಿಹಾಸದಿಂದ ಆರಂಭಿಸಿ ಹಾಲಿವುಡ್ ಇಂದಿನ ಮಟ್ಟಕ್ಕೆ ಬೆಳೆದ ಕಥನವನ್ನು ವಿವರಿಸಲಾಗಿದೆಯಷ್ಟೇ ಅಲ್ಲದೆ ಹಾಲಿವುಡ್‌ನ ಭವಿಷ್ಯದ ಕುರಿತ ಮಾಹಿತಿಗಳೂ ಇವೆ. ಈ ಕೋರ್ಸ್ ಸಿನಿಮಾದ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟಿಸುವಂತೆಯೇ ಜನಸಾಮಾನ್ಯರಲ್ಲೂ ಆಸಕ್ತಿ ಹುಟ್ಟಿಸುವಂಥದ್ದು. ಕೋರ್ಸ್‌ಗೆ ಸೇರಲು ಶುಲ್ಕವಿಲ್ಲ.

ಪ್ರಮಾಣ ಪತ್ರ ಬೇಕೆಂಬ ಹಟ ನಿಮ್ಮದಾಗಿದ್ದರೆ ಅದಕ್ಕೆ ಐವತ್ತು ಡಾಲರುಗಳನ್ನು ಪಾವತಿಸಬೇಕಾಗುತ್ತದೆ. ಕೋರ್ಸ್ ಸೆಪ್ಟಂಬರ್ ಮೊದಲ ವಾರದಲ್ಲಿ ಆರಂಭವಾಗುತ್ತದೆ.ನಾಲ್ಕು ವಾರಗಳ ಅವಧಿಯ ಈ ಕೋರ್ಸ್ ವಾರಕ್ಕೆ ಮೂರರಿಂದ ನಾಲ್ಕು ಗಂಟೆಗಳ ಅಧ್ಯಯನಾವಧಿಯನ್ನು ಬೇಡುತ್ತದೆ. ಸೇರಲು ಇಚ್ಛಿಸುವವರು ಇಲ್ಲಿರುವ ಲಿಂಕ್ ಬಳಸಬಹುದು: https://goo.gl/bWKQ0B

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT