ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ ತನಿಖೆಗೆ ಒತ್ತಾಯ

Last Updated 28 ನವೆಂಬರ್ 2014, 6:19 IST
ಅಕ್ಷರ ಗಾತ್ರ

ಬ್ಯಾಡಗಿ-: ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಕೈಕೊಂಡಿರುವ ₨ 5 ಕೋಟಿ ವೆಚ್ಚದ ಕಾಮಗಾರಿಗಳು    ಕಳಪೆಯಾಗಿದ್ದು, ಸೂಕ್ತ ತನಿಖೆ ಕೈಕೊ ಳ್ಳಬೇಕು ಎಂದು ಆಗ್ರಹಿಸಿ ಪುರಸಭೆಯ 1೮ ಜನ ಬಿಜೆಪಿ ಸದಸ್ಯರು,  ಉಪಾ ಧ್ಯಕ್ಷೆ ಸುಧಾ ಕಳ್ಳಿಹಾಳ ನೇತೃತ್ವದಲ್ಲಿ ನಗರಾಭಿವೃಧ್ದಿ ಸಚಿವ ವಿನಯಕುಮಾರ ಸೊರಕೆ ಅವರಿಗೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇಲ್ಲಿಯ ಎಲ್ಲಾ ಕಾಮಗಾರಿಗಳನ್ನು ಶಾಸಕರ ಹಿಂಬಾಲಕರಿಗೆ      ಉಪ ಗುತ್ತಿಗೆ ನೀಡಲಾಗಿದೆ.  ಮಣ್ಣು ಮಿಶ್ರಿತ ಮರಳು, ಕಳಪೆ ದರ್ಜೆಯ ಸಿಮೆಂಟ್ ಬಳಸಿದ್ದಾರೆ. ಹೀಗಾಗಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾ ರನನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಹಾಗೂ ಬಿಲ್‌ನ್ನು ತಡೆಹಿಡಿಯಲು ಆದೇಶ ನೀಡುವಂತೆ ಆಗ್ರಹಿಸಿದರು.

ನಗರದ ಜನತೆ ಶುದ್ದ       ಕುಡಿ ಯುವ ನೀರಿನ ಸಮಸ್ಯೆ ಎದುರಿ ಸುತ್ತಿದ್ದು, ಸ್ವತಂತ್ರ ಜಲ ಶುದ್ದೀಕರಣ     ಘಟಕವನ್ನು ಬೇಗನೆ ಪೂರ್ಣಗೊಳಿಸಿ ಕುಡಿವ ನೀರು ಪೂರೈಕೆ ಮಾಡಲು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಖಾಲಿ ಹುದ್ದೆಗಳಿಗೆ ಸಿಬ್ಬಂದಿ  ನಿಯೋಜನೆ, ಪಟ್ಟಣದ        ಅಭಿ ವೃದ್ದಿಗೆ ₨ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ  ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT