ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು, ನಂಬಿಕೆ ಮತ್ತು ಶಂಕೆ

ಅಕ್ಷರ ಗಾತ್ರ

ಇತ್ತೀಚಿನ ಎರಡು ವಿದ್ಯಮಾನಗಳು ವಿಚಾರ­ವಂತರಲ್ಲಿ ಬೆರಗು ಮೂಡಿಸಿವೆ. ಒಂದು, ಜಯಲ­ಲಿತಾ ಅವರು ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥ­ರಾದರೂ ತಮಿಳುನಾಡಿನ ಅಮ್ಮನ ಅಸಂಖ್ಯಾತ ಅಭಿಮಾನಿಗಳು ನಡೆದುಕೊಂಡ ರೀತಿ.

ಎರಡನೆ­ಯದು ನಾಡಿನ ದಕ್ಷ ಅಧಿಕಾ­ರಿ­  ರಶ್ಮಿ ಮಹೇಶ್‌ ಅವರ ಮೇಲೆ ಹಲ್ಲೆಗೆ ಪರೋಕ್ಷ ಕಾರಣವಾದ ಕಾನೂನು ಸುವ್ಯವಸ್ಥೆಯ ಪಾಲುದಾರ­ರಾದ ಪೊಲೀಸ್‌ ಅಧಿ­ಕಾರಿಗಳು ನಡೆದುಕೊಂಡ ರೀತಿ.

ಜಯ­ಲಲಿತಾ ಅವರು ಏನೇ ಹಗರಣಗಳಲ್ಲಿ ಸಿಲು­ಕಿರಲಿ, ಅಧಿಕಾರಕ್ಕೆ ಬಂದಾಕ್ಷಣ ವಿನೂತನ­ ಯೋಜ­ನೆ­ ಮೂಲಕ ಪ್ರಚಾರ ಗಿಟ್ಟಿ­ಸಿಕೊಳ್ಳುವಲ್ಲಿ ಯಶಸ್ವಿ­ಯಾಗು­ತ್ತಿ­ದ್ದಾರೆ.

ಸಾಕು ಮಗನ ಮದು­ವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡು­ವುದರ ಮೂಲಕ ಬಯಲಿಗೆ ಬಂದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕೊನೆಗೆ ನ್ಯಾಯಾ­ಲಯದ ಎದುರು ಬಯಲಾ­ಗಿದೆ. ಇದರಿಂದ ಕಾನೂನಿನ ಮೇಲೆ ನಂಬು­ಗೆಯೂ, ವಿಶ್ವಾಸವೂ ಹೆಚ್ಚಿದೆ.

ರಶ್ಮಿ ಅವರು ದೊಡ್ಡ ಮೊತ್ತ ಒಳಗೊಂಡ ಹಗ­ರಣದ ವರ­ದಿ­ಯನ್ನು ಸರ್ಕಾರಕ್ಕೆ ನೀಡಿದ್ದರೂ ಅದನ್ನು ಸರ್ಕಾರ ಗಂಭೀರ­ವಾಗಿ ಪರಿಗಣಿಸಿಲ್ಲ­ವೇನೊ ಎಂಬ ಶಂಕೆ ಉಂಟಾಗಿದೆ. ಇದರಿಂದ, ಭ್ರಷ್ಟಾಚಾರ ತಡೆ ಪ್ರಯತ್ನಗಳ ಬಗೆಗಿನ ನಂಬುಗೆ ಸ್ವಲ್ಪ ಕಡಿಮೆ ಆಗಿದೆ.­ ಒಬ್ಬ ದಕ್ಷ ಅಧಿಕಾರಿ ಮೇಲೆ ಹಲ್ಲೆ ನಡೆದಾಗ ಅದನ್ನು ಖಂಡಿಸುವ ಸಮಷ್ಟಿ ಪ್ರಜ್ಞೆಯ ಕೊರತೆ ಇದೆ ಎಂದೂ ಅ­ನಿಸುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT