ಬೆಂಗಳೂರು: ಮಹಿಳಾ ಕಾವ್ಯ ಪುರುಷ ವಿರೋಧಿ ಅಲ್ಲ. ಅದು ಜೀವ ಪರ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಸಾಹಿತಿ ಡಾ.ಕೆ.ಷರೀಫಾ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ೭ನೇ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದಲ್ಲಿ ‘ಆಧುನಿಕ ಮಹಿಳಾ ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾವ್ಯ ಮಹಿಳೆಯರಿಗೆ ಬಿಡುಗಡೆಯ ದಾರಿ. ಅದು ಅವರ ಅಂತರಂಗದಿಂದ ಬೇರೆ ಆಗಲಿಲ್ಲ. ಒಂದು ವೇಳೆ ಅಂತರಂಗದಿಂದ ಬೇರೆ ಇದ್ದರೂ ಆಕೆಯ ಸ್ಪರ್ಶ ಆ ಕಾವ್ಯದಲ್ಲಿ ಇರುತ್ತದೆ’ ಎಂದರು.

ಮೂರನೇ ತಲೆಮಾರಿನ ಲೇಖಕಿಯರು ಹೊಸ ರೂಪಕ, ಕ್ಲೀಷೆಗಳನ್ನು ಒಳಗೊಂಡ ಕಾವ್ಯಗಳನ್ನು ರಚಿಸುತ್ತಿದ್ದಾರೆ. ಎರಡನೇ ತಲೆಮಾರಿನ ಲೇಖಕಿಯರು ಬಳಸುವ ಉಪಮೆಗಳು, ಪೌರಾಣಿಕ ಪಾತ್ರಗಳನ್ನು ಮುರಿದು ಕಟ್ಟುವ ರೀತಿ ಬಹಳ ವಿಭಿನ್ನ ಹಾಗೂ ಸುಂದರವಾಗಿತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ಅಕ್ಷರ ಲೋಕ ದಲಿತ ಹಾಗೂ ಮುಸ್ಲಿಂ ಮಹಿಳೆಯರನ್ನು ತಲುಪಿದ್ದು ಬಹಳ ತಡವಾಗಿ. ಇವರ ಕಾವ್ಯಗಳು ಗೋಳಿನ ಕಾವ್ಯಗಳಲ್ಲ. ಬದುಕಿನ ಕಟು ಸತ್ಯಗಳನ್ನು ತೆರೆದಿಡುವ ಕಾವ್ಯಗಳು ಎಂದು ವಿಶ್ಲೇಷಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಡಾ. ಸಬಿಹಾ ಭೂಮಿಗೌಡ ಮಾತನಾಡಿ, ‘ಪ್ರಸ್ತುತ ಪರಿಸ್ಥಿತಿಯಲ್ಲಿ ಪುರುಷರೂ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಹೆಣ್ಣಿನ ಸಾಮರ್ಥ್ಯವೇ ಪುರುಷನಿಗೆ ದೊಡ್ಡ ಸವಾಲಾಗಿದೆ. ಇದರಿಂದಾಗಿ ತನ್ನನ್ನು ತಾನು ಕಳೆದುಕೊಳ್ಳುವ ಆತಂಕ ಈಗ ಪುರುಷರಲ್ಲಿ ಹೆಚ್ಚಾಗಿದೆ. ಹೀಗಾಗಿಯೇ ಈಗ ಪುರುಷರು ತಮ್ಮ ಪುರುಷತ್ವದ ಮೌಲ್ಯಗಳಿಂದ ಹೊರ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಡಾ.ಎಲ್.ಜಿ.ಮೀರಾ ಮಾತನಾಡಿ, ಯುವ ಸಾಹಿತಿಗಳು ನಾಟಕ ಕ್ಷೇತ್ರ ದಲ್ಲಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ‘ನಾಟಕೋತ್ಸವ’ ನಡೆಸುವ ರೀತಿಯಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಡಾ.ಎಲ್.ಸಿ.ಸುಮಿತ್ರಾ ಅವರು ಆಧುನಿಕ ಕಥನ ಸಾಹಿತ್ಯ ಕುರಿತ ಪ್ರಬಂಧವನ್ನು ಮಂಡಿಸಿ, ಸ್ತ್ರೀ ವಾದ ಹಾಗೂ ಬದಲಾದ ಕೌಟುಂಬಿಕ ಪರಿಕಲ್ಪನೆಗಳಿಂದ ಕಥನ ಸಾಹಿತ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಇವುಗಳು ಕಥನ ಸಾಹಿತ್ಯಕ್ಕೆ ಒಂದು ವಿಭಿನ್ನವಾದ ದಾರಿಯನ್ನೇ ತೆರೆದಿಟ್ಟಿವೆ ಎಂದರು.

ವಿಗ್ರಹಭಂಜಕ ಗುಣ ಹೊಸ ಬರಹಗಾರರಲ್ಲಿ ಅತಿ ಹೆಚ್ಚಾಗಿದೆ. ಇದರಿಂದಾಗಿ ಅವರ ಬರವಣಿಗೆಗಳಲ್ಲಿ ಅವಸರ ಹಾಗೂ ರೋಚಕತೆ ಎತ್ತಿ ಕಾಣುತ್ತದೆ. ಕತೆಯಲ್ಲಿ ರೋಚಕತೆ ತರುವ ವಿಧಾನ ಆರೋಗ್ಯಕರ ಸಾಹಿತ್ಯ ಅಲ್ಲ. ಆದರೆ ಇದೂ ಒಂದು ಬರವಣಿಗೆ ಅಷ್ಟೆ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕಿ ತಾರಿಣಿ ಶುಭದಾಯಿನಿ ವಿಮರ್ಶೆ ಕುರಿತಂತೆ ಮಾತನಾಡಿ, ಆಧುನಿಕ ಸಾಹಿತ್ಯದಲ್ಲಿ ಮಹಿಳಾ ವಿಮರ್ಶೆ ಮೀಮಾಂಸೆ, ವಿಮರ್ಶೆ ಹಾಗೂ ಚರಿತ್ರೆ ಎಂಬ ಪ್ರವಾಹದಲ್ಲಿ ಹರಿಯುತ್ತಿದೆ. ಮಹಿಳಾ ಸಾಹಿತ್ಯಕ್ಕೆ ತನ್ನದೇ ಆದ ಕಾಲಘಟ್ಟ ಮತ್ತು ಪ್ರಕಾರಗಳು ಇಲ್ಲ. ಶುದ್ಧ ವಿಮರ್ಶೆಯ ತಂತ್ರಗಾರಿಕೆ ಮತ್ತು ಪರಿಭಾಷೆಯನ್ನು ಇನ್ನಷ್ಟೆ ರೂಪಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಮಲಾ ಎಂ.ಎಸ್.ಬಾಲು ಮಾತನಾಡಿ, ಸೃಜನಶೀಲ ಸಾಹಿತ್ಯವನ್ನು ಬರೆಯುವಾಗ ಸೃಜನಶೀಲತೆ ಇರಬೇಕು. ಓದುಗನನ್ನು ಹಿಡಿದಿಡುವ ಶಕ್ತಿ, ಕಲ್ಪನಾ ಶಕ್ತಿ ಹಾಗೂ ಪದ ಸಂಪತ್ತನ್ನು ಸಾಹಿತಿ ತನ್ನ ಬರವಣಿಗೆ ಯಲ್ಲಿ ಅಳವಡಿಸಿಕೊಂಡಿರಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಂಡಿಸಲಾದ ಪ್ರಬಂಧಗಳಿಗೆ ಪ್ರತಿಕ್ರಿಯಿಸಿದ ಡಾ.ಗೀತಾ ಶೆಣೈ, ಈ ಗೋಷ್ಠಿಯು ಕೇವಲ ಕಾವ್ಯ ಹಾಗೂ ಕಥನಕ್ಕೆ ಸೀಮಿತವಾಗಿದೆ. ಲೇಖಕಿಯರ ಪ್ರವೃತ್ತಿ ಹಾಗೂ ಗಮನ ಬೇರೆ ಕಡೆ ಸೆಳೆದಿರುವುದನ್ನು ಯಾರೂ ಗಮನಿಸಲಿಲ್ಲ ಎಂದರು.
ಶಾಂತಾಕುಮಾರಿ ಮಾತನಾಡಿ, ಆಧುನಿಕತೆ ಎಂಬುದು ನಿರಂತರವಾದ ಪರಿವರ್ತನಾ ಕ್ರಿಯೆ, ಯಾವ ಕ್ಷಣದಲ್ಲಿ ಮಹಿಳೆ ತನ್ನೊಳಗಿನ ಸಂಕಟಗಳಿಗೆ ಅಕ್ಷರದ ರೂಪ ಕೊಟ್ಟಳೋ ಆ ಕ್ಷಣದಿಂದಲೇ ಪರಿವರ್ತನಾ ಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.