ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌ನಲ್ಲಿ 8 ಲಕ್ಷ ಭಾರತೀಯರು

Last Updated 26 ಏಪ್ರಿಲ್ 2015, 19:54 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಕುವೈತ್‌ನಲ್ಲಿ 8 ಲಕ್ಷಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ. ವೀಸಾ ಅವಧಿ ಮುಗಿದಿದ್ದರೂ 25 ಸಾವಿರ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು  ಕುವೈತ್‌ ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು  ಹೇಳಿದೆ.

ಭಾರತೀಯರ ಜನಸಂಖ್ಯೆ ಪ್ರತಿವರ್ಷ ಶೇ 5ರಿಂದ 6ರಷ್ಟು ಹೆಚ್ಚುತ್ತಿದೆ. ಭಾರತೀಯ ಶುಶ್ರೂಷಕಿಯರಿಗೆ ಭಾರಿ ಬೇಡಿಕೆ ಇದ್ದು, ಮುಂಬರುವ ದಿನಗಳಲ್ಲಿ ಭಾರತೀಯರ ಜನಸಂಖ್ಯೆ 10 ಲಕ್ಷ ದಾಟಲಿದೆ ಎಂದು ಅಂದಾಜಿಸಲಾಗಿದೆ. ‘ಕುವೈತ್‌ನಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಈಜಿಪ್ಟ್‌ ದೇಶದ ವಲಸಿಗರ ನಂತರದ ಸ್ಥಾನ ಭಾರತೀಯರದ್ದಾಗಿದೆ.

ಭಾರತೀಯರ ಲಿಂಗಾನುಪಾತದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿದ್ದು, ಒಟ್ಟು ಜನಸಂಖ್ಯೆಯಲ್ಲಿ 6 ಲಕ್ಷ ಪುರುಷರು ಹಾಗೂ 2 ಲಕ್ಷ ಮಹಿಳೆಯರಿದ್ದಾರೆ’ ಎಂದು ಹೇಳಿದೆ. ಭಾರತೀಯರಲ್ಲಿ ಹೆಚ್ಚಿನವರು  ಕಟ್ಟಡ ಕಾರ್ಮಿಕರು, ವಾಹನ ಚಾಲಕರು, ಸ್ವಚ್ಛತಾ ಕೆಲಸಗಾರರು, ಉದ್ಯಾನಗಳ ನಿರ್ವಹಣೆ ಮಾಡುವವರಾಗಿದ್ದಾರೆ. ಕುವೈತ್‌ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳಲ್ಲಿ, ವಿವಿಧ ಆಸ್ಪತ್ರೆಗಳಲ್ಲಿ 24 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಮಾರು 42 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದು, 20 ಭಾರತೀಯ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಸೌಲಭ್ಯ ಭಾರತೀಯರಿಗೆ ಒದಗಿಸಲಾಗಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT