ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗೆ ಬೆಲೆಕಟ್ಟುವ ಕೆಲಸ ಸಲ್ಲ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಮರ್ಶೆಗಳಲ್ಲಿ ಕೃತಿ ಗಳಿಗೆ ಬೆಲೆ ಕಟ್ಟುವ ಕೆಲಸ ನಡೆ ಯುತ್ತಿದೆ. ಇದು ಉತ್ತಮ ಕೃತಿ, ಇದು ಉತ್ತಮವಲ್ಲ ಎಂದು ವಿಮರ್ಶಿಸ ಲಾಗುತ್ತಿದೆ. ಉತ್ತಮವಲ್ಲದ ಕೃತಿಗಳನ್ನು ನಾವು ಓದಬಾರದೇ? ವಿಮರ್ಶೆಯಲ್ಲಿ ಸ್ಪಂದನೆಗಳನ್ನು ಹೇಳಬೇಕೇ ಹೊರತು ಬೆಲೆಕಟ್ಟಲು ಹೋಗಬಾರದು.

ಬೆಲೆ ಕಟ್ಟುವುದು ವಿದೇಶಿ ಪದ್ಧತಿ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ  ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಕನ್ನಡ ಭಾಷಾಭಿವೃದ್ಧಿ ಯೋಜನೆಯಲ್ಲಿ ಪ್ರಕ ಟಿಸಿರುವ 20 ಪುಸ್ತಕಗಳನ್ನು ನಗರದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಮಾತ ನಾಡಿದರು.

‘ಹಿಂದೆ ವಿಮರ್ಶೆಯಲ್ಲಿ ಸ್ಪಂದನೆ ಗಳನ್ನು ಮಾತ್ರ ಹೇಳಲಾಗುತ್ತಿತ್ತು. ಈ ಮೂಲಕವೇ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸರಂಥ ಕವಿಗಳ ಸಾಹಿತ್ಯ ವನ್ನು ಇಲ್ಲಿಯವರೆಗೆ ಹೊತ್ತು ಕೊಂಡು ಬರಲಾಗಿದೆ. ಏಕೆಂದರೆ ಜನ ಹಾಗೂ ಇಡೀ ಸಂಸ್ಕೃತಿ ಬದುಕಲು ಉಪಯೋಗ ವಾಗುವಂಥ ಒಳ್ಳೆಯ ವಿಚಾರಗಳನ್ನು ಅವರೆಲ್ಲಾ ಹೇಳಿದ್ದಾರೆ. ಆದರೆ, ಈಗ ಇವನು ಸಾಮಾನ್ಯ ಕವಿ, ಅವನು ಅಸಾಮಾನ್ಯ ಕವಿ ಎಂದು ವಿಂಗಡಿಸಿ ಬೆಲೆ ಕಟ್ಟಲಾಗುತ್ತಿದೆ. ಹಾಗಾದರೆ ಸಾಮಾನ್ಯ ಕವಿಯನ್ನು ನಾವು ಓದಬಾರದೇ?’ ಎಂದು ಪ್ರಶ್ನಿಸಿದರು.

ವಿದ್ವಾಂಸ ಡಾ.ಕರೀಗೌಡ ಬೀಚನ ಹಳ್ಳಿ ಮಾತನಾಡಿ, ‘ಕನ್ನಡ ಭಾಷಾ ಭಿವೃದ್ಧಿಗಾಗಿ ಸರ್ಕಾರ 2008ರಲ್ಲಿ 12 ವಿ.ವಿ­ಗಳಿಗೆ ತಲಾ ₨ 1 ಕೋಟಿ ಅನು­ದಾನ ನೀಡಿತ್ತು. ಆದರೆ, ಕೆಲ ವಿ.ವಿಗಳು ಈ ಅನುದಾನವನ್ನು ಸರಿಯಾಗಿ ಬಳಸಿ ಕೊಂಡಿಲ್ಲ. ಕೆಲ ವಿ.ವಿಗಳು ಪೀಠೋಪ ಕರಣ ಖರೀದಿ ಗಾಗಿ ಹಣವನ್ನು ಬಳಸಿ ಕೊಂಡಿವೆ. ಬೆಂಗ ಳೂರು ವಿ.ವಿ ಮಾತ್ರ ಅನುದಾನವನ್ನು ಸಮರ್ಥವಾಗಿ ಉಪ­ಯೋಗಿಸಿ ಕೊಂಡಿದೆ. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಪರಿಷ್ಕೃತ ಸಂಪುಟಗಳು ಹಾಗೂ ಹಸ್ತ ಪ್ರತಿ ಸಂಪಾದನೆ ಕೃತಿಗಳು 40 ವರ್ಷ ಗಳ ಬಳಿಕ ಪ್ರಕಟ ಗೊಳುತ್ತಿವೆ’ ಎಂದರು.

ಸಾಹಿತಿ ಸಿದ್ದಲಿಂಗಯ್ಯ ಮಾತನಾಡಿ, ‘ಕಾಲೇಜುಗಳಲ್ಲಿ ಪದವಿಯ ಎರಡನೇ ವರ್ಷದಲ್ಲಿ ಕಡ್ಡಾಯವಾಗಿ ಕನ್ನಡ ಪಠ್ಯ ಅಳವಡಿಸಬೇಕು ಎಂದು ಕುಲಪತಿ ಜೊತೆ ಮಾತನಾಡಿದ್ದೇನೆ. ಹಾಗೇ,  ಪದವಿಯಲ್ಲಿ ಐಚ್ಛಿಕ ಕನ್ನಡಕ್ಕೆ ಒತ್ತು ನೀಡುವ ಬಗ್ಗೆಯೂ ಚರ್ಚಿಸಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ’ ಎಂದರು.

11 ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಪರಿಷ್ಕೃತ ಸಂಪುಟಗಳು ಹಾಗೂ 9 ಹಸ್ತಪ್ರತಿ ಸಂಪಾದನೆ ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಗೊಳಿಸ ಲಾಯಿತು. ಕಾರ್ಯಕ್ರಮದಲ್ಲಿ ಕುಲ ಪತಿ ಪ್ರೊ.ಬಿ. ತಿಮ್ಮೇಗೌಡ, ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ, ಸಿಂಡಿಕೇಟ್‌ ಸದಸ್ಯೆ ಪ್ರಭಾವತಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸಿ.ಬಿ.ಹೊನ್ನುಸಿದ್ಧಾರ್ಥ ಇದ್ದರು.

ಕಾಮ ಬಿಟ್ಟಿದ್ದೇನೆ...! ‘ನಿಘಂಟು ಸಂಪಾ­ದನೆಗೆ ಸಂಬಂಧಿಸಿದಂತೆ ಸಾಹಿತಿ ಪ್ರೊ.ಎನ್‌.ಬಸವರಾಧ್ಯ ಅವರು ಒಮ್ಮೆ ತೀ.ನಂ.ಶ್ರೀಕಂಠಯ್ಯ ಬಳಿ ತೆರಳಿ ಕಾಮ ಬಿಟ್ಟುಬಿಟ್ಟಿದ್ದೇನೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆಗ ತೀ.ನ.ಶ್ರೀ ಅವರು ಹಿಮಾಲಯದಲ್ಲಿ ತಪಸ್ಸು ಮಾಡಿದ ಋಷಿ ಮುನಿಗಳಿಗೇ ಕಾಮ ಬಿಡಲು ಸಾಧ್ಯವಾಗಿಲ್ಲ. ನೀವು ಇಷ್ಟು ಸುಲಭ ವಾಗಿ ಕಾಮ ಬಿಟ್ಟಿದ್ದು ಹೇಗೆ ಎಂದಿ ದ್ದರು. ಹಿಂದಿನ ವಿದ್ವಾಂಸರು ಅಲ್ಪ ವಿರಾಮ, ಪೂರ್ಣ ವಿರಾಮದ ಬಗ್ಗೆಯೂ ಅಷ್ಟೊಂದು ಕಾಳಜಿವಹಿಸು ತ್ತಿದ್ದರು. ಈಗಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಆ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ’ ಎಂದು ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT