ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಶೋಧನೆಗೆ ಅಂತರರಾಷ್ಟ್ರೀಯ ಕೇಂದ್ರ

ಬೇಸಾಯದ ವಿವಿಧ ಆಯಾಮಗಳ ಜಾಗತಿಕ ಮಟ್ಟದ ಅಧ್ಯಯನ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಧಾರವಾಡ: ಜಾಗತಿಕ ಮಟ್ಟದಲ್ಲಿ ಕೃಷಿ ಸಂಶೋಧನೆ ಕೈಗೊಳ್ಳುವ ಮಹತ್ವಾಕಾಂಕ್ಷೆ ಹೊತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ‘ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ಕೇಂದ್ರ (ಐಕ್ಯಾಡ್‌)’ ಕಾರ್ಯಾ ರಂಭ ಮಾಡಿದೆ. ಮೊದಲ ಹಂತದಲ್ಲಿ ಒಟ್ಟು ಆರು ವಿಷಯಗಳ ಮೇಲೆ ಸಂಶೋಧಕರು ಬೆಳಕು ಚೆಲ್ಲಲಿದ್ದಾರೆ. ವಿಶ್ವವಿ ದ್ಯಾಲಯದ ಕೃಷಿ ವಿಜ್ಞಾನಿಗಳೊಂದಿಗೆ ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾಲಯದ ಸಂಶೋಧಕರುಕೂಡ ಕೈ ಜೋಡಿಸಲಿದ್ದಾರೆ.

ಭಾರತದಲ್ಲಿನ ಹತ್ತಿ, ಶೇಂಗಾ ಬೆಳೆಗಳು ಹಾಗೂ ಕೃಷಿ ಪದ್ಧತಿಗಳನ್ನು ಮೂಲವಾಗಿಟ್ಟುಕೊಂಡು ಆರು ತಂಡಗಳು ಈ ಅಧ್ಯಯನದಲ್ಲಿ ತೊಡಗಿಕೊಳ್ಳಲಿವೆ. ‘ಮನುಷ್ಯನ ಆರೋಗ್ಯಕ್ಕೆ ಉತ್ತಮವೆಂದು ಕಂಡು ಬಂದರೂ ಹೆಚ್ಚು ಬಳಕೆ ಮಾಡದ ಹಣ್ಣು ಮತ್ತು ತರಕಾರಿಗಳಲ್ಲಿನ ಬಯೊ–ಆ್ಯಕ್ಟಿವ್‌ ಅಂಶಗಳು’ ಎಂಬ ವಿಷಯ ಕುರಿತು ಒಂದು ತಂಡ ಸಂಶೋಧನೆ ನಡೆಸ ಲಿದೆ. ಮತ್ತೊಂದು ತಂಡವು ‘ಭಾರತೀಯ ಹತ್ತಿಯ ಲ್ಲಿನ ನಾರಿನ ಅಂಶದ ಗುಣಗಳಿಗೆ ಸಂಬಂಧಿಸಿದಂತೆ ಡಿಎನ್‌ಎ ಅಂಶಗಳನ್ನು (ಕ್ಯೂಟಿಎಲ್‌) ಗುರು ತಿಸುವಿಕೆ’ ಕಾರ್ಯ ಮಾಡಲಿದೆ.

ಅಂತೆಯೇ, ‘ಹತ್ತಿ ಬೀಜದ ಎಣ್ಣೆಯಲ್ಲಿ ಕೊಬ್ಬಿನಾಂಶದ ಮಾರ್ಪಾಡು’, ‘ಹೆಚ್ಚಿನ ಕ್ಷಾರ ಅಂಶವುಳ್ಳ ಶೇಂಗಾ ತಳಿಯ ಜೀನ್‌ಗಳ ಉಪಯೋಗ ಮತ್ತು ಅಭಿವೃದ್ಧಿ’, ‘ಸವಳು–ಜವಳು ಭೂಮಿಯಲ್ಲಿ ಉತ್ಪಾದನೆ ಹೆಚ್ಚಳ’ ಕುರಿತು ಉಳಿದ ತಂಡಗಳು ಸಂಶೋಧನೆ ಕೈಗೊಳ್ಳಲಿವೆ. ‘ಕರ್ನಾ ಟಕದಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚು ಕಟ್ಟು ಪ್ರದೇಶದಲ್ಲಿ ಸಹಭಾಗಿತ್ವದ ನೀರಾವರಿ ಮೂಲಕ ವೈಜ್ಞಾನಿಕ ಬೆಳೆ ಮತ್ತು ನೀರಿನ ನಿರ್ವಹಣೆ’ ಕುರಿತು ಎರಡೂ ವಿಶ್ವವಿದ್ಯಾಲಯಗಳ ತಂಡಗಳು ಜಂಟಿ ಅಧ್ಯಯನ ಕೈಗೊಳ್ಳಲಿವೆ. ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಬಸವರಾಜ ಖಾದಿ ಮಾರ್ಗದರ್ಶನದಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿವೆ.

ಮಹತ್ವದ ಮೈಲುಗಲ್ಲು: ‘ವಿಶ್ವವಿದ್ಯಾಲಯದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಐಕ್ಯಾಡ್‌’ ಆರಂಭಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಪಿ. ಬಿರಾದಾರ. ‘ಜಗತ್ತಿನ ಎಲ್ಲ ಕೃಷಿ ಸಂಶೋಧಕರ ನಡುವೆ ಉತ್ತಮ ಸಂವಹನ ಮತ್ತು ಜ್ಞಾನ–ತಂತ್ರಜ್ಞಾನಗಳ ವಿನಿಮಯವಾಗಬೇಕು ಎನ್ನುವುದು ನಮ್ಮ ಆಶಯ. ಇದನ್ನೇ ಮೂಲವಾಗಿಟ್ಟುಕೊಂಡು ಈ ಕೇಂದ್ರವು ಸಂಶೋಧನೆಗಳಲ್ಲಿ ತೊಡಗಿಕೊಳ್ಳಲಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಮೊದಲ ಹಂತವಾಗಿ ₨2 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದೆ. ಸಂಶೋಧಕರಿಗೆ ಈಗಾಗಲೇ ಕೆಲಸ ವಹಿಸಲಾಗಿದೆ’ ಎಂದು ಅವರು ವಿವರಿಸಿದರು.

ಸರ್ಕಾರದ ಸಮ್ಮತಿ: ‘ಕಳೆದ ಮೇ 24ರಂದು ಟೆಕ್ಸಾಸ್‌ ವಿ.ವಿ ಪ್ರತಿನಿಧಿಗಳನ್ನೂ ಒಳಗೊಂಡ ಧಾರವಾಡ ಕೃಷಿ ವಿ.ವಿಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೇಂದ್ರದ ಆರಂಭಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕಾಗಿ ₨ 10 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಯೋಜನೆಯ ಮುಂದಿನ ಹಂತದಲ್ಲಿ ವಿವಿಯ ಕ್ಯಾಂಪಸ್‌ನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕಚೇರಿ ಹಾಗೂ ಪ್ರಯೋಗಾಲಯಗಳನ್ನು ನಿರ್ಮಿ ಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಸರ್ಕಾ ರದ ನೆರವಿನ ಜೊತೆಗೆ ಬಿಲ್‌ಗೇಟ್ಸ್‌ ಫೌಂಡೇಶನ್‌, ಇನ್ಫೊಸಿಸ್‌ ಹಾಗೂ ದೇಶಪಾಂಡೆ ಫೌಂಡೇಶನ್‌ ನಂತಹ ಸಂಸ್ಥೆಗಳ ನೆರವನ್ನೂ ಕೋರಲು ಚಿಂತನೆ ನಡೆದಿದೆ.

‘ಬೇರೆ ಬೇರೆ ದೇಶಗಳ ಸಂಶೋಧಕರು ಒಟ್ಟಾಗಿ ಕೆಲಸ ಮಾಡುವುದು ವಿಶಿಷ್ಟ ಅನುಭವ. ಹೊಸ ಪದ್ಧತಿಗೆ ಕೃಷಿ ವಿಶ್ವವಿದ್ಯಾಲಯವು ನಾಂದಿ ಹಾಕಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕೆ ನೆರವಾಗಲಿದೆ’ ಎಂದು ಯೋಜನಾ ವಿನ್ಯಾಸ ಮತ್ತು ನಿರ್ವಹಣೆ ಘಟಕದ ಮುಖ್ಯಸ್ಥ ರಾಜೇಂದ್ರ ಪೋದ್ದಾರ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT