ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನೀರು ಹಂಚಿಕೆ ವಿವಾದ: ನೋಟಿಸ್‌

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಆಂಧ್ರಪ್ರದೇಶ ಮತ್ತು ತೆಲಂ­ಗಾಣದ ನಡುವಣ ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ.ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯ­­ಮಂಡ­ಳಿಯು  ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ  ನೋಟಿಸ್‌ ಜಾರಿ ಮಾಡಿದೆ.

ನೋಟಿಸ್‌ಗೆ ಆರು ವಾರಗಳಲ್ಲಿ ಉತ್ತ­ರಿ­ಸುವಂತೆ ಕೇಂದ್ರ ಸರ್ಕಾರ, ಕರ್ನಾ­ಟಕ, ಮಹಾರಾಷ್ಟ್ರ, ಆಂಧ್ರ­ಪ್ರದೇಶ ಮತ್ತು ತೆಲಂಗಾಣ  ಸರ್ಕಾರಕ್ಕೆ ನ್ಯಾಯ­­­ಮಂಡಳಿ ಹೇಳಿದೆ. ನ್ಯಾಯ­­­ಮಂಡಳಿ ಈಗಾಗಲೇ ಕೃಷ್ಣಾ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿದೆ. ಐತೀರ್ಪಿನ ಬಗ್ಗೆ ಸ್ಪಷ್ಟನೆ ಕೇಳಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥ­ಗೊಳಿಸಿದೆ.

ಆದರೆ, ತೆಲಂಗಾಣ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವುದರಿಂದ ರಾಜ್ಯಗಳ ಪುನರ್‌ವಿಂಗಡಣೆ ಕಾಯ್ದೆ ಸೆಕ್ಷನ್‌ 89­ರಡಿ ಆ ರಾಜ್ಯಕ್ಕೂ ನೀರು ಹಂಚಿಕೆ ಆಗ­ಬೇಕಿದೆ. ಇಡೀ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಹೊಸದಾಗಿ ಇತ್ಯರ್ಥ­ಪಡಿಸಬೇಕು ಎಂಬ ನಿಲುವನ್ನು ತೆಲಂಗಾಣ ಹೊಂದಿದೆ. ಆಂಧ್ರ ಮತ್ತು ತೆಲಂಗಾಣದ ನಡುವೆ ನೀರು ಹಂಚಿಕೆ ಮಾಡುವಾಗ ಐತೀರ್ಪಿನ ಪುನರ್‌ ವ್ಯಾಖ್ಯಾ­ನಕ್ಕೂ ಅವಕಾಶ ಇರುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಂಧ್ರಕ್ಕೆ ನಿಗದಿಪಡಿಸಿರುವ ನೀರಿ­ನಲ್ಲೇ ತೆಲಂಗಾಣಕ್ಕೂ ಹಂಚಿಕೆ ಮಾಡ­ಬೇಕೇ ವಿನಾ ಕರ್ನಾಟಕಕ್ಕೆ ನಿಗದಿ ಮಾಡಿ­­­ರುವ 907 ಟಿಎಂಸಿ ಅಡಿ ನೀರನ್ನು ಮುಟ್ಟಬಾ­ರದೆಂಬ ನಿಲುವನ್ನು ಕರ್ನಾಟಕ ಸರ್ಕಾರ ತಳೆದಿದೆ.

ನ್ಯಾಯಮಂಡಳಿ ಐತೀರ್ಪು ಅಧಿ­ಸೂಚನೆ ಹೊರಡಿಸಬೇಕು ಎಂದು ಮಹಾ­ರಾಷ್ಟ್ರ ಆಗ್ರಹಿಸಿದೆ. ಕೆಲ ಸಮಸ್ಯೆ­ ನಡುವೆಯೂ ಕಾವೇರಿ ನ್ಯಾಯ­ಮಂಡಳಿ ಐತೀರ್ಪಿನ ಅಧಿ ಸೂಚನೆ ಪ್ರಕಟಿ­ಸಿದೆ. ಅದೇ ರೀತಿ ಕೃಷ್ಣಾ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸ­ಬೇಕು ಎಂದು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT