ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ಕರೆಂಟ್‌ ಬಿಲ್‌ ರೂ.91 ಸಾವಿರ

Last Updated 30 ಜೂನ್ 2015, 10:13 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಏಪ್ರಿಲ್‌ ಮತ್ತು ಮೇ ತಿಂಗಳ ವಿದ್ಯುತ್‌ ಬಿಲ್‌ 91 ಸಾವಿರ ರೂಪಾಯಿ ಎಂದು ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ದಾಖಲೆ ಸಹಿತ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಎರಡು ತಿಂಗಳ ವಿದ್ಯುತ್‌ ಬಿಲ್‌ನ ಮಾಹಿತಿ ನೀಡುವಂತೆ ಇಲ್ಲಿನ ಸಾಮಾನ್ಯ ಆಡಳಿತ ಇಲಾಖೆಗೆ ಆರ್‌ಟಿಐ (ಮಾಹಿತಿ ಹಕ್ಕು) ಕಾರ್ಯಕರ್ತ ವಿವೇಕ್‌ ಗರ್ಗ್‌ ಅರ್ಜಿ ಸಲ್ಲಿಸಿದ್ದರು.

ಕೇಜ್ರಿವಾಲ್‌ ಮನೆಯಲ್ಲಿ ಎರಡು ವಿದ್ಯುತ್‌ ಮೀಟರ್‌ಗಳಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 91 ಸಾವಿರ ರೂಪಾಯಿ ಮೊತ್ತದ ವಿದ್ಯತ್‌ ಬಳಕೆಯಾಗಿದೆ ಎಂದು  ಆಡಳಿತ ಇಲಾಖೆ ಮಾಹಿತಿ ನೀಡಿದೆ.

ಮುಖ್ಯಮಂತ್ರಿಗಳು ವಿದ್ಯತ್‌ ಬಿಲ್‌ 1 ಲಕ್ಷ ರೂಪಾಯಿಗೂ ಹೆಚ್ಚಿದೆ ಎಂದು ಬಿಜೆಪಿ ಆರೋಪಿಸಿದೆ. ದೆಹಲಿಯ ಎಲ್ಲಾ ಮಂತ್ರಿಗಳ ವಿದ್ಯುತ್‌ ಬಿಲ್‌ನ ಮಾಹಿತಿ ಪಡೆಯುವುದಾಗಿ ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT