ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮಾದರಿ ಮತಗಟ್ಟೆಯಲ್ಲಿ ಮತದಾರನಿಗೆ ಪುಳಕ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೊಪ್ಪಳ: ಆಕರ್ಷಕ ಬಣ್ಣ ಬಳಿದ ಕಟ್ಟಡ, ಸ್ವಾಗತಿಸುವ ಫಲಕ, ಮುಂದೆ ಸಾಗಿದಂತೆ ಸ್ವಾಗತಿಸುವ ಅಂದಗಾತಿಯರು. ಮತಗಟ್ಟೆಯೊಳಗೂ ಮುಗುಳ್ನಗು­ವಿನ ಮುಖಗಳು–ಇದು ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾದ ಮಾದರಿ ಮತಗಟ್ಟೆಗಳ ಸ್ವರೂಪ.

ನಗರದಿಂದಾಚೆಗೆ ಭಾಗ್ಯನಗರ ಗ್ರಾಮ ಪಂಚಾಯಿತಿಯನ್ನೇ ಮಾದರಿ ಮತಗಟ್ಟೆಯನ್ನಾಗಿ ರೂಪಿಸಲಾಗಿತ್ತು. ಹೊರಗೆ ಹಾಕಿದ್ದ ಶಾಮಿಯಾನ, ಸಾಲು ಕುರ್ಚಿಗಳು ಅಪ್ಪಟ ಶುಭಕಾರ್ಯ ನಡೆಯುತ್ತಿದೆಯೇನೋ ಎಂಬಂತೆ ಆ ಕಟ್ಟಡ ಹಾಗೂ ಅಲ್ಲಿನ ವಾತಾವರಣ ಭಾಸವಾಗುತ್ತಿತ್ತು. ಮತ ಚಲಾಯಿಸ­ದಿದ್ದರೂ ಪರವಾಗಿಲ್ಲ. ಕೇಂದ್ರದೊಳ­ಗೊಮ್ಮೆ ನೋಡಿಬನ್ನಿ ಎಂದು ಸ್ವಾಗತಕಾರಿಣಿ ಕೋರಿದರು.

ಒಳಗೆ ಏರ್‌ ಕೂಲರ್‌, ಕೆಂಪು ಕಂಬಳಿಯ ಹಾಸು, ಒಟ್ಟಾರೆ ತಂಪು ವಾತಾವರಣ. ಮತಗಟ್ಟೆಗೆ ಬರುತ್ತಿ­ದ್ದಂತೆಯೇ ವೆಬ್‌ ಕ್ಯಾಮೆರಾದಲ್ಲಿ ವಿಡಿಯೊ ಮೂಡಿ ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿತ್ತು. ಮತ ಚಲಾಯಿಸಿ ಬಂದ ನಂತರ ಪಕ್ಕದಲ್ಲಿಯೇ  ತಂಪು ಪಾನೀಯದ ವ್ಯವಸ್ಥೆಯಿತ್ತು. ಅದಾದ ಬಳಿಕ ‘ಮತ ಚಲಾಯಿಸಿದ್ದಕ್ಕೆ ಕೃತಜ್ಞತೆ­ಗಳು’ ಎಂಬ ಬರಹವಿರುವ ಕಾರ್ಡನ್ನು ಮತದಾರರಿಗೆ ನೀಡಲಾ­ಗುತ್ತಿತ್ತು.

ಈ ಮತಗಟ್ಟೆ ವ್ಯಾಪ್ತಿಯಲ್ಲಿ ಸುಮಾರು 900 ಮತಗಳಿವೆ. ಕೇವಲ ಮತಗಟ್ಟೆ ನೋಡುವ ಕುತೂಹಲ­ದಿಂದಲೇ ಬಂದವರು ಹಲವು ಮಂದಿ.
ಇದೇ ಕೇಂದ್ರದಲ್ಲಿ ಮತಯಂತ್ರ ಸ್ಥಗಿತಗೊಂಡು ಸುಮಾರು 15 ನಿಮಿಷ ಕಾಲ ಆತಂಕ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT