ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ತಂಡಕ್ಕೆ ಗೆಲುವು

ರಸೆಲ್ ಆಲ್‌ರೌಂಡ್ ಆಟದ ಸೊಬಗು
Last Updated 18 ಏಪ್ರಿಲ್ 2015, 19:32 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಆ್ಯಂಡ್ರೆ ರಸೆಲ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ಶನಿವಾರ ಐಪಿಎಲ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ   ನಾಲ್ಕು ವಿಕೆಟ್‌ಗಳಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಸೋಲಿಸಿತು.

  ಟಾಸ್  ಗೆದ್ದ  ಕೋಲ್ಕತ್ತ ನೈಟ್ ರೈಡರ್ಸ್ ಬೌಲಿಂಗ್ ಆರಂಭಿಸಿತು.  ಉಮೇಶ್ ಯಾದವ್ (33ಕ್ಕೆ3) ಮತ್ತು ಆ್ಯಂಡ್ರೆ ರಸೆಲ್ (27ಕ್ಕೆ2) ಅವರ ದಾಳಿಗೆ ಪಂಜಾಬ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ತದನಂತರ ನಾಯಕ ಜಾರ್ಜ್ ಬೇಲಿಯ ಅರ್ಧಶತಕದ ನೆರವಿನಿಂದ 155 ರನ್ನುಗಳನ್ನು ಕಲೆ ಹಾಕಿತು.

ಜಮೈಕಾದ ಆಲ್‌ರೌಂಡರ್ ರಸೆಲ್ ಅವರ ಮಿಂಚಿನ ಅರ್ಧಶತಕಕ್ಕೆ  (66; 36 ಎ, 9ಬೌಂ, 2ಸಿ) ಕೋಲ್ಕತ್ತ ತಂಡವು  ಇನ್ನೂ 13 ಎಸೆಗಳು ಬಾಕಿಯಿರುವಂತೆಯೇ ಗೆಲುವು ಪಡೆಯಿತು. 17.5 ಓವರುಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 159 ರನ್ನುಗಳನ್ನು ಸೇರಿಸಿತು.

ಪಂಜಾಬ್ ತಂಡದ ಸಂದೀಪ್ ಶರ್ಮಾ  (4–1–25–4) ಅವರ ಮೊನಚಾದ ದಾಳಿಗೆ ಕೋಲ್ಕತ್ತ ತಂಡವು ಸೋಲಿನ ಭೀತಿ ಎದುರಿಸಿತ್ತು. 60 ರನ್ನುಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಸೆಲ್ ಎದುರಾಳಿ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡು ತಮ್ಮ ತಂಡದ ಬುಟ್ಟಿಗೆ ಹಾಕಿದರು.

ಉಮೇಶ್ ಯಾದವ್ ಜೊತೆಗೆ ಬೌಲಿಂಗ್‌ನಲ್ಲಿಯೂ ಕೈಚಳಕ ತೋರಿದ್ದ ರಸೆಲ್ ಪಂಜಾಬ್ ತಂಡಕ್ಕೆ ಬಿಸಿ ಮುಟ್ಟಿಸಿದ್ದರು. ತಂಡದ ಮೊತ್ತವು 27 ರನ್ನುಗಳಿಗೆ ತಲುಪುವಷ್ಟರಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು.

ಈ ಸಂದರ್ಭದಲ್ಲಿ ನಾಯಕ ಜಾರ್ಜ್ ಬೇಲಿ ಆಸರೆಯಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಸೇರಿದ ಜಾರ್ಜ್ ಬೇಲಿ   (60; 45ಎ, 5ಬೌಂ, 2ಸಿ) ಅರ್ಧಶತಕ ಗಳಿಸಿ ತಂಡದ ಮೊತ್ತವು 20 ಓವರುಗಳಲ್ಲಿ 9 ವಿಕೆಟ್‌ಗಳಿಗ 155 ರನ್ನುಗಳ ಮೊತ್ತ ಪೇರಿಸಲು ನೆರವಾದರು.
ಬೇಲಿ ಮತ್ತು  ಮ್ಯಾಕ್ಸ್‌ವೆಲ್ (33; 26ಎ, 2ಬೌಂ, 2ಸಿ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 63 ರನ್ನುಗಳನ್ನು ಸೇರಿಸಿದರು.   

ಸೆಹ್ವಾಗ್ ವಿಫಲ: ಐಪಿಎಲ್‌ನಲ್ಲಿ 100ನೇ ಪಂದ್ಯ ಆಡಿದ ವೀರೇಂದ್ರ ಸೆಹ್ವಾಗ್ ತಮ್ಮ ಅಬ್ಬರದ ಆಟ ತೋರುವಲ್ಲಿ ವಿಫಲರಾದರು.
ಮೊದಲ ಓವರ್‌ನಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಉಮೇಶ್ ಯಾದವ್ ಅವರ ಎಸೆತದಲ್ಲಿ ಔಟಾದರು. ಇನ್ನೊಂದು ಕಡೆ ಸೆಹ್ವಾಗ್ ಎರಡು ಬೌಂಡರಿ ಹೊಡೆದು ಇನಿಂಗ್ಸ್ ಬೆಳೆಸುವ ಭರವಸೆ ಮೂಡಿಸಿದ್ದರು. ಆದರೆ,  ಕೇವಲ 11 ರನ್ನುಗಳನ್ನು ಗಳಿಸಿದ ಅವರು ಆ್ಯಂಡ್ರೆ ರಸೆಲ್ ಅವರ ಬೌಲಿಂಗ್‌ನಲ್ಲಿ ಪಿಯೂಷ್ ಚಾವ್ಲಾ ಪಡೆದ ಆಕರ್ಷಕ ಕ್ಯಾಚಿಗೆ ಔಟಾದರು.

ಎರಡನೇ ಗೆಲುವು: ಗಂಭೀರ್‌ ನಾಯಕತ್ವದ ನೈಟ್‌ರೈಡರ್ಸ್ ತಂಡ ಈ ಸಲದ ಐಪಿಎಲ್‌ನಲ್ಲಿ ಪಡೆದ ಎರಡನೇ ಗೆಲುವು ಇದಾಗಿದೆ.

ಸ್ಕೋರ್‌ಕಾರ್ಡ್‌

ಕಿಂಗ್ಸ್‌ ಇಲೆವೆನ್‌ ಪಂಜಾಬ್‌  9ಕ್ಕೆ 155 (20 ಓವರ್‌)

ಮುರಳಿ ವಿಜಯ್ ಸಿ ರಸಲ್ ಬಿ ಉಮೇಶ್ ಯಾದವ್  00
ವೀರೇಂದ್ರ ಸೆಹ್ವಾಗ್ ಸಿ ಚಾವ್ಲಾ ಬಿ ಆ್ಯಂಡ್ರೆ ರಸಲ್  11
ವೃದ್ಧಿಮಾನ್ ಸಹಾ ಸಿ ಪಠಾಣ್ ಬಿ ಮಾರ್ಕೆಲ್  15
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ರಸೆಲ್ ಬಿ ಉಮೇಶ್ ಯಾದವ್  33
ಜಾರ್ಜ್ ಬೇಲಿ ರನೌಟ್   60
ತಿಸಾರ ಪರೇರಾ ಸಿ ಮನೀಷ್ ಪಾಂಡೆ ಬಿ ರಸೆಲ್  09
ಗುರುಕೀರತ್‌ ಸಿಂಗ್ ಸಿ ಸೂರ್ಯಕುಮಾರ್  ಬಿ ಯಾದವ್  11
ಅಕ್ಷರ್ ಪಟೇಲ್ ಸಿ ಯಾದವ್ ಬಿ ಸುನಿಲ್ ನಾರಾಯಣ್  02
ಮಿಷೆಲ್ ಜಾನ್ಸನ್ ಸಿ ಗಂಭೀರ್ ಬಿ ಮಾರ್ಕೆಲ್  01
ಅನುರೀತ್‌ ಸಿಂಗ್ ಔಟಾಗದೆ  00

ಇತರೆ:   (ಬೈ –9, ಲೆಗ್‌ಬೈ–1, ವೈಡ್ –3)  13

ವಿಕೆಟ್‌ ಪತನ: 1–0 (ವಿಜಯ್ 0.4), 2–23 (ಸಹಾ 3.5), 3–27 (ಸೆಹ್ವಾಗ್ 4.2), 4–90 (ಮ್ಯಾಕ್ಸ್‌ವೆಲ್ 11.4), 5–107  (ಪೆರೆರಾ 13.6), 6–131 (ಗುರುಕೀರ್ತ್ 17.3), 7–146 (ಪಟೇಲ್ 18.6), 8–154 (ಬೇಲಿ 19.4), 9–155 (ಜಾನ್ಸನ್ 19.6)

ಬೌಲಿಂಗ್‌:  ಉಮೇಶ್ ಯಾದವ್ 4–0–33–3 (ವೈಡ್ 1), ಮಾರ್ನ್ ಮಾರ್ಕೆಲ್ 4–0–27–2, ಆ್ಯಂಡ್ರೆ ರಸೆಲ್ 4–0–39–2 (ವೈಡ್ 2), ಸುನಿಲ್ ನಾರಾಯಣ್ 4–0–17–1, ಪಿಯೂಷ್ ಚಾವ್ಲಾ 4–0–29–0

ಕೋಲ್ಕತ್ತ ನೈಟ್‌ ರೈಡರ್ಸ್‌ 6ಕ್ಕೆ 159 (17.5 ಓವರ್‌)
ರಾಬಿನ್‌ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಸಂದೀಪ್‌ ಶರ್ಮಾ   13
ಗೌತಮ್‌ ಗಂಭೀರ್‌ ಸಿ ವೃದ್ಧಿಮಾನ್‌ ಸಹಾ ಬಿ ಸಂದೀಪ್‌ ಶರ್ಮಾ   18
ಮನೀಷ್‌ ಪಾಂಡೆ ಸಿ ಬೇಲಿ ಬಿ ಸಂದೀಪ್‌ ಶರ್ಮಾ  12
ಸೂರ್ಯಕುಮಾರ್‌ ಯಾದವ್‌ ಸಿ ಸಹಾ ಬಿ ಪೆರೇರಾ  23
ಯೂಸುಫ್‌ ಪಠಾಣ್‌ ಔಟಾಗದೆ  28
ರ್‍ಯಾನ್‌ ಟೆನ್ ಡಾಷೆಟ್‌ ಎಲ್‌ಬಿಡಬ್ಲ್ಯು ಬಿ ಸಂದೀಪ್‌ ಶರ್ಮಾ   00
ಆ್ಯಂಡ್ರೆ ರಸಲ್‌ ಬಿ ಮಿಷಲ್‌ ಜಾನ್ಸನ್‌  66
ಪಿಯೂಷ್‌ ಚಾವ್ಲಾ ಔಟಾಗದೆ  04

ಇತರೆ: (ಲೆಗ್‌ಬೈ– 1, ವೈಡ್ –1)   02

ವಿಕೆಟ್‌ ಪತನ: 1–16 (ಉತ್ತಪ್ಪ 2,2), 2–34 (ಪಾಂಡೆ 4.3), 3–60 (ಯಾದವ್‌ 6.5),  4–60 (ಗಂಭೀರ್‌ 7.4),  5–60 (ರ್‍ಯಾನ್‌ ಟೆನ್‌ 7.5), 6–155 (ರಸಲ್ 17.4)

ಬೌಲಿಂಗ್‌:  ಸಂದೀಪ್‌ ಶರ್ಮಾ 4–1–25–4, ಅನುರೀತ್‌ ಸಿಂಗ್‌ 4–0–37–0, ಮಿಷಲ್‌ ಜಾನ್ಸನ್‌ 3.5–0–41–1, ಪೆರೇರಾ 4–0–33–1, ಅಕ್ಷರ್‌ ಪಟೇಲ್‌ 2–0–22–0

ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ 4 ವಿಕೆಟ್‌ಗಳ ಜಯ

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT