ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ನ್ಯೂಜಿಲೆಂಡ್‌ಗೆ ಜಯ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಬುಧಾಬಿ (ಎಎಫ್‌ಪಿ): ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಏಳು ರನ್‌ಗಳ ಗೆಲುವು ಸಾಧಿಸಿದ ನ್ಯೂಜಿಲೆಂಡ್‌ ತಂಡದವರು ಪಾಕಿಸ್ತಾನ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2–2ರಲ್ಲಿ ಸಮಬಲ ಸಾಧಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ಕೇನ್‌ ವಿಲಿಯಮ್ಸನ್‌ ಅವರ ಶತಕದ ನೆರವಿನಿಂದ 50 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 299 ರನ್‌ಗಳನ್ನು ಕಲೆ ಹಾಕಿತು. ಸವಾಲಿನ ಗುರಿ ಎದುರು ದಿಟ್ಟ ಹೋರಾಟ ತೋರಿದ ಪಾಕ್‌ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಈ ತಂಡ ನಿಗದಿತ ಓವರ್‌ಗಳು ಪೂರ್ಣ ಗೊಂಡಾಗ ಎಂಟು ವಿಕೆಟ್‌ ನಷ್ಟಕ್ಕೆ 292 ರನ್‌ಗಳಿಸಿತು.

ಪೆಶಾವರದ ಸೇನಾ ಶಾಲೆಯಲ್ಲಿ ಮಕ್ಕಳ ಹತ್ಯಾಕಾಂಡ ನಡೆದ ಕಾರಣ ಪಾಕ್‌ ಆಟಗಾರರು ಪಂದ್ಯ ಆರಂಭಕ್ಕೂ ಮುನ್ನ ಎರಡು ನಿಮಿಷ ಮೌನ ಆಚರಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 299ಕ್ಕೆ5 (ಮಾರ್ಟಿನ್‌ ಗುಪ್ಟಿಲ್‌ 58, ಕೇನ್‌ ವಿಲಿಯಮ್ಸನ್‌ 123, ರಾಸ್ ಟೇಲರ್‌ 26, ಕೋರಿ ಆ್ಯಂಡರ್‌ಸನ್‌ 23; ಮಹಮ್ಮದ್ ಇರ್ಫಾನ್ 53ಕ್ಕೆ2, ಶಾಹಿದ್‌ ಅಫ್ರಿದಿ 46ಕ್ಕೆ1). ಪಾಕಿಸ್ತಾನ 50 ಓವರ್‌ಗಳಲ್ಲಿ 292ಕ್ಕೆ8 (ನಾಸೀರ್‌ ಜೇಮ್‌ಷೆದ್ 30, ಯೂನಿಸ್‌ ಖಾನ್‌ 103, ಉಮರ್‌ ಅಕ್ಮಲ್‌ 29, ಶಾಹಿದ್‌ ಅಫ್ರಿದಿ 49; ಡೇನಿಯಲ್‌ ವೆಟೋರಿ 53ಕ್ಕೆ3). ಫಲಿತಾಂಶ: ನ್ಯೂಜಿಲೆಂಡ್‌ಗೆ 7 ರನ್‌ ಗೆಲುವು. ಪಂದ್ಯ ಶ್ರೇಷ್ಠ: ಕೇನ್‌ ವಿಲಿಯಮ್ಸನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT