ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಕ್‌ ಮಾಡಿ; ಬಿಬಿಎಂಪಿ ವಲಯ ರಚಿಸಿ!

ಮರುಹಂಚಿಕೆಯಲ್ಲಿ ಜನರ ಸಹಭಾಗಿತ್ವಕ್ಕೆ ವಿಶೇಷ ಆ್ಯಪ್‌ ಅಭಿವೃದ್ಧಿ
Last Updated 3 ಜೂನ್ 2015, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಿಮ್ಮ ವಿಧಾನಸಭಾ ಕ್ಷೇತ್ರ ಇಲ್ಲವೆ ವಾರ್ಡ್‌ ಯಾವ ವಲಯದಲ್ಲಿದ್ದರೆ ಚೆನ್ನ? ನಗರ ವ್ಯಾಪ್ತಿಯಲ್ಲಿ ಎಂಟು ವಲಯಗಳು ಸಾಕೋ ಇಲ್ಲವೆ ಅವುಗಳ ಸಂಖ್ಯೆಯನ್ನು 12ಕ್ಕೆ ಏರಿಸಬೇಕೋ? ವಿಸ್ತೀರ್ಣ, ವರಮಾನ ಮತ್ತು ಜನಸಾಂದ್ರತೆಯಲ್ಲಿ ವಲಯಗಳಲ್ಲಿ ಸಮಾನತೆ ತರುವುದು ಹೇಗೆ?

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇದ್ದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನರ್‌ರಚನಾ ಸಮಿತಿ ಆ ಸಲಹೆ ಪಡೆಯಲು ಉತ್ಸುಕವಾಗಿದೆ. ಈ ಉದ್ದೇಶಕ್ಕಾಗಿ ಸಮಿತಿಯಿಂದ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಜನರ ಸಹಭಾಗಿತ್ವದಿಂದ ವಲಯಗಳ ಮರು ಹಂಚಿಕೆ ಮಾಡಬೇಕು ಎನ್ನುವ ಅಭಿಲಾಷೆಯಿಂದ ಈ ಪ್ರಯತ್ನಕ್ಕೆ ಕೈಹಾಕಲಾಗಿದೆ.

ಸಮತೋಲಿತ ವಲಯಗಳ ರಚನೆಗಾಗಿ ಬಿಬಿಎಂಪಿ ಪುನರ್‌ರಚನಾ ಸಮಿತಿ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ.
ಅದರಲ್ಲಿ ಎಲ್ಲ 198 ವಾರ್ಡ್‌ಗಳ ಸರಹದ್ದು ಗುರುತಿಸಿರುವ ಬಿಬಿಎಂಪಿ ನಕಾಶೆ ಇದೆ. ಈ ನಕಾಶೆ ಪ್ರತಿಯೊಂದು ವಾರ್ಡ್‌ನ ವಿಸ್ತೀರ್ಣ, ಕಟ್ಟಡಗಳ ಸಂಖ್ಯೆ, ಜನಸಂಖ್ಯೆ, ರಸ್ತೆ ಉದ್ದ, ಕೆರೆ, ಆಟದ ಮೈದಾನ, ಪಾರ್ಕ್‌ ಮತ್ತು ಸ್ಮಶಾನಗಳ ವಿವರ, ತೆರಿಗೆ ಸಂಗ್ರಹ ಹಾಗೂ ಆ ವಾರ್ಡ್‌ ಯಾವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ ಎನ್ನುವ ಮಾಹಿತಿ ಇರುತ್ತದೆ.ಗರಿಷ್ಠ 12 ವಲಯಗಳನ್ನು ರಚಿಸಲು ಸಾರ್ವಜನಿಕರಿಗೆ  ಈ ನಕಾಶೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ವಲಯಕ್ಕೂ ಒಂದೊಂದು ಬಣ್ಣವನ್ನು ನಿಗದಿ ಮಾಡಲಾಗಿದೆ.

ವಲಯ ಸಂಖ್ಯೆ ‘1’ ರಚನೆ ಮಾಡಲು ನಕಾಶೆ ಪಕ್ಕದ ವಲಯಗಳ ಪಟ್ಟಿಯಿಂದ ಮೊದಲು ಸಂಖ್ಯೆ ‘1’ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ವಲಯ ಒಂದರಲ್ಲಿ ಯಾವ ವಾರ್ಡ್‌ಗಳು ಇರಬೇಕು ಎನ್ನುವ ಕಲ್ಪನೆ ನಿಮಗಿದೆಯೋ ಅವುಗಳನ್ನು ಕ್ಲಿಕ್‌ ಮಾಡುತ್ತಾ ಹೋಗಬೇಕು. ಆಗ ವಲಯ ಸಂಖ್ಯೆ 1ಕ್ಕೆ ನಿಗದಿಯಾದ ಕೆಂಪು ಬಣ್ಣ ಆಯಾ ವಾರ್ಡ್‌ಗಳಲ್ಲಿ ತುಂಬಿಕೊಳ್ಳುತ್ತಾ ಸಾಗುತ್ತದೆ. ವಲಯ ರಚನೆಯ ಈ ಪ್ರಕ್ರಿಯೆಯಲ್ಲಿ ಒಂದು ಪುಟ್ಟ ನಿಯಮವಿದೆ. ನಾವು ಯಾವುದೇ ಒಂದು ವಲಯಕ್ಕೆ ಗುರುತಿಸುವ ವಾರ್ಡ್‌ಗಳು ಒಂದಕ್ಕೊಂದು ಹೊಂದಿಕೊಂಡಿರಬೇಕು. ಒಂದೊಂದು ತುದಿಯಲ್ಲಿರುವ ವಾರ್ಡ್‌ಗಳನ್ನು ಆಯ್ಕೆ ಮಾಡಲು ಹೋದರೆ ‘ಆ್ಯಪ್‌’ ಸಹಕರಿಸುವುದಿಲ್ಲ.

ಒಂದು ವಲಯದ ವಾರ್ಡ್‌ ಗುರುತಿಸುತ್ತಾ ಹೋದಂತೆ ನಕಾಶೆ ಅಡಿಯಲ್ಲಿ ನೀಡಲಾಗಿರುವ ಪಟ್ಟಿಯಲ್ಲಿ ಆ ವಲಯ ಎಷ್ಟು ವಾರ್ಡ್‌ಗಳನ್ನು ಹೊಂದಿದಂತಾಯಿತು, ಯಾವ, ಯಾವ ವಿಧಾನಸಭಾ ಕ್ಷೇತ್ರ ಸೇರ್ಪಡೆಯಾದವು, ವರಮಾನದ ಪ್ರಮಾಣ ಎಷ್ಟಾಯಿತು, ಮನೆಗಳ ಸಂಖ್ಯೆ ಎಲ್ಲಿಗೆ ಮುಟ್ಟಿತು ಎನ್ನುವ ವಿವರ ‘ಅಪ್‌ಡೇಟ್‌’ ಆಗುತ್ತಾ ಹೋಗುತ್ತದೆ. ವಲಯ ‘1’ರ ಬಳಿಕ 2, 3, 4... ಹೀಗೆ ಪ್ರತಿಯೊಂದನ್ನು ರಚನೆ ಮಾಡುತ್ತಾ ಹೋಗಬೇಕು.

ಎಲ್ಲ ವಲಯಗಳು ರಚನೆಯಾದಾಗ ಆಯಾ ವಲಯಗಳಿಗೆ ವಾರ್ಡ್‌ಗಳು, ಕಟ್ಟಡಗಳು, ಜನಸಂಖ್ಯೆ, ವರಮಾನ ಎಷ್ಟೆಷ್ಟು ಹಂಚಿಕೆಯಾಗಿದೆ ಎನ್ನುವುದು ಪಟ್ಟಿಯಲ್ಲಿ ತಿಳಿಯುತ್ತದೆ. ವಲಯಗಳು ಸಮತೋಲಿತ ಆಗಿರದಿದ್ದರೆ ಪುನರ್‌ರಚನೆ ಮಾಡಲು ಅವಕಾಶ ಇದೆ. ಪ್ರಕ್ರಿಯೆ ಪೂರ್ಣಗೊಳಿಸಿದ ಮೇಲೆ ಅದನ್ನು ವೆಬ್‌ಸೈಟ್‌ಗೆ ರವಾನೆ ಮಾಡಬೇಕು. ಮಾಹಿತಿಗಾಗಿ ಸದ್ಯದ ವಲಯಗಳ ಸಂಪೂರ್ಣ ವಿವರವನ್ನೂ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.

ಸಾರ್ವಜನಿಕರಿಂದ ಬರುವ ಇಂತಹ ವಲಯ ರಚನೆಗಳ ಪ್ರಕ್ರಿಯೆ ಆಧರಿಸಿ ಪುನರ್‌ರಚನಾ ಸಮಿತಿ ವಲಯಗಳ ವಿನ್ಯಾಸವನ್ನು ನಿರ್ಧರಿಸಲಿದೆ.

ವೆಬ್‌ಸೈಟ್‌ ವಿಳಾಸ: www.bbmprestructuring.org
 

ಎಷ್ಟೊಂದು ಅಸಮಾನತೆ!

ಬಿಬಿಎಂಪಿ ಸದ್ಯ ಹೊಂದಿರುವ ಎಂಟೂ ವಲಯಗಳು ಅಸಮತೋಲಿತವಾಗಿವೆ. ಒಂದೊಂದು ವಲಯದ ಜನಸಂಖ್ಯೆ, ವಿಸ್ತೀರ್ಣ, ಮನೆಗಳ ಸಂಖ್ಯೆ ಮತ್ತೊಂದು ವಲಯಕ್ಕೆ ಹೋಲಿಸಿದರೆ ಅಜಗಜಾಂತರವಿದೆ. ಅಂತಹ ಕೆಲವು ಕನಿಷ್ಠ ಮತ್ತು ಗರಿಷ್ಠ ವ್ಯತ್ಯಾಸಗಳ ವಿವರ ಇಲ್ಲಿದೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT