ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗಿ ಮೇಲೆ ಅತ್ಯಾಚಾರ

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ಲಖನೌ:  ಸರ್ಕಾರಿ ಆಸ್ಪತ್ರೆಗೆ ದಾಖ­ಲಾಗಿದ್ದ ಕ್ಷಯರೋಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ  ಉತ್ತರಪ್ರದೇಶ ಮೀರಠ್‌ನಲ್ಲಿ ನಡೆದಿದೆ.

‘ಕೆಲ ದಿನಗಳ ಹಿಂದೆ ನಾನು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಶನಿವಾರ ನಸುಕಿನಲ್ಲಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ’ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ನನ್ನೊಂದಿಗೆ ವಾರ್ಡ್‌ನಲ್ಲಿ ಇನ್ನಿಬ್ಬರು ರೋಗಿಗಳು ಕೂಡ ಇದ್ದರು. ಘಟನೆ ನಡೆದಾಗ ಅವರು ನಿದ್ದೆ ಮಾಡುತ್ತಿದ್ದರು. ವಾರ್ಡ್‌ಗೆ ನುಗ್ಗಿದ ದುರುಳರು ನನ್ನನ್ನು ಮೊಗಸಾಲೆಗೆ ಎಳೆದುಕೊಂಡು ಬಂದು ಅತ್ಯಾಚಾರ ಎಸಗಿದರು. ಈ ವಿಷಯವನ್ನು ನಾನು ದಾದಿಯರಿಗೆ ತಿಳಿಸಿದೆ. ಆದರೆ ಅವರು ಏನೂ ಮಾತನಾಡದೇ ಸುಮ್ಮನಿದ್ದರು’ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT