ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್ ಸುಂದರಿಯ ಅಂತರಂಗ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

*ಶರ್ಮಿಳಾ ಅಂದ್ರೆ?
ಶರ್ಮಿಳಾ ಅಂದ್ರೆ ಮೊಟ್ಟ ಮೊದಲು ಗಾಲ್ಫ್, ನಂತರ ಪ್ಯಾಷನ್, ತಿಂಡಿಪೋತಿ. ನನ್ನೂರು ಬೆಂಗಳೂರು ಅಂದ್ರೆ ನಂಗೆ ತುಂಬ ಇಷ್ಟ. ಟೆಡ್ಡಿ ಅಂದ್ರೆ ಪ್ರೀತಿ. ಸತ್ಯವನ್ನು ಹೇಳೋಕೆ ಹೆದರುವುದಿಲ್ಲ. ಅದೇನೇ ಆಗಿರಲಿ. ಅಮ್ಮ ಅಪ್ಪನ ಎದುರು ಈಗಲೂ ಪುಟ್ಟ ಮಗು. ಆದರೆ ನನ್ನ ಕ್ರೀಡೆಯ ವಿಷಯದಲ್ಲಿ ‘ಕಾಂಪಿಟೇಟಿವ್’ ಅಂಡ್ ‘ಅಗ್ರೆಸ್ಸಿವ್’.

*‘ಫ್ಯಾಮಿಲಿ’?
ಅಮ್ಮ ಸುರೇಖಾ ಹಾಗೂ ಅಪ್ಪ ಮಾರ್ಕ್ ಅವರಿಗೆ ಅವರದೇ ಆದ ಉದ್ಯಮವಿದೆ. ನನ್ನ ನೆಚ್ಚಿನ ಟೈರಾ (ನಾಯಿ) ಸಹ ನಮ್ಮನೆಯ ಸದಸ್ಯ.

*ದೊಡ್ಡ ಮಟ್ಟದ ಸಾರ್ಥಕತೆ ತರುವ ಸಣ್ಣದೊಂದು ಖುಷಿ?
ಬೀದಿ ನಾಯಿಗಳಿಗೆ ಊಟ ಹಾಕುವುದು.

*‘ಕ್ರೀಡಾ ವಲಯದ ಸೆಕ್ಸಿ ಗರ್ಲ್‌ ಶರ್ಮಿಳಾ ನಿಕೊಲೇಟ್’?
ನನ್ನ ಸೆಕ್ಸ್ ಅಪೀಲ್ ಇರೋದು ನನ್ನ ಎತ್ತರ ಹಾಗೂ ಜನರಲ್ಲಿ ಕುತೂಹಲ ಕೆರಳಿಸುವ ನನ್ನ ಸಾಮರ್ಥ್ಯದಲ್ಲಿ.

*ಪುರಷರಲ್ಲಿ ಮೊಟ್ಟ ಮೊದಲು ನೋಡುವ ಮೂರು ಗುಣಗಳು?
ಅಫ್ ಕೋರ್ಸ್ ಅವರ ಫಿಸಿಕ್, ಸೆನ್ಸ್ ಆಫ್ ಹ್ಯೂಮರ್ ಮತ್ತು ದಾಡಿ.

*ಪುರುಷರಲ್ಲಿ ನಿಮಗೆ ಕಿರಿಕಿರಿ ತರಿಸುವ ಮೂರು ಅಂಶಗಳು?
ಧೂಮಪಾನ (ಐ ಹೇಟ್), ವಂಚಿಸುವುದು, ಸುಳ್ಳು ಹೇಳುವುದು.

*ಗಾಲ್ಫರ್ ಅಥವಾ ಸ್ವಿಮ್ಮರ್  ಆಗಿರದೇ ಇದ್ದರೆ?
ಖಂಡಿತ ಹಾರ್ಸ್ ರೈಡರ್ ಆಗಿರುತ್ತಿದ್ದೆ.

*ಕ್ರೀಡೆಯನ್ನು ಹೊರತುಪಡಿಸಿ?
ಹಂ... ಮಾಡೆಲಿಂಗ್?

*ಸಿಗುವ ಸಮಯದಲ್ಲಿ ಹಾಲಿಡೇಗೆ ಹೋಗುವುದಾದರೆ?
ಗೋವಾ ಅಂದ್ರೆ ಬಹಳ ಇಷ್ಟ.

*ಅನಗತ್ಯ ಚೇಷ್ಟೆ– ಚೆಲ್ಲಾಟಗಳಿಗೆ ಪ್ರತಿಕ್ರಿಯೆ?
ನನ್ನದು ಆಸಕ್ತಿದಾಯಕ ವ್ಯಕ್ತಿತ್ವ ಅಲ್ಲ ಎನ್ನುವಂತೆ ಎದುರಿಗಿನ ವ್ಯಕ್ತಿಗೆ ತಿಳಿಯಪಡಿಸುವುದು.

*ಶರ್ಮಿಳಾ ಹುಚ್ಚು?
ಗಾಲ್ಫ್! ಇದು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮನ್ನು ಇಡಿಯಾಗಿ ಬಯಸುವ ಗೇಮ್. ಇಲ್ಲಿ ನಮ್ಮ ವಿರುದ್ಧ ನಾವೇ ಆಡುತ್ತೇವೆ. ನಮ್ಮೆದುರು ನಾವೇ ಸೋಲುತ್ತೇವೆ. ಗೆದ್ದರೂ ನಮ್ಮೊಂದಿಗೆ ನಮ್ಮ ಗೆಲುವದು. ಅದನ್ನು ಬಿಟ್ಟರೆ ಕಾರಿನ ಹುಚ್ಚು ಹಾಗೂ ಸಂಗೀತ ಪ್ರೇಮ.

*ಹವ್ಯಾಸಗಳೇನು? ಬಿಡುವಿನ ಸಮಯವನ್ನು ಹೇಗೆ ಕಳೆಯುವಿರಿ?
ಸಿನಿಮಾ/ಟಿವಿ/ಸಂಗೀತ
ಪಾರ್ಟಿ (ಯಾವಾಗಲಾದರೂ)
ಓದು/ಯೋಗ/ಫೋಟೊಗ್ರಫಿ
ಕುದುರೆ ಓಡಿಸುವುದು
ಇದನ್ನೆಲ್ಲ ಹೊರತುಪಡಿಸಿ ಸುಡೋಕು ಬಿಡಿಸುವುದನ್ನು ಎಂಜಾಯ್ ಮಾಡುತ್ತೇನೆ.

*ಶಾಲೆಯಲ್ಲಿ ಶರ್ಮಿಳಾ?
ತಂಟೆಕೋರಿ, ಕುಡುಮಿ, ಚೇಷ್ಟೆ ಉಡಾಳತನಕ್ಕೇನೂ ಕಡಿಮೆ ಇಲ್ಲ, ಆದ್ರೆ ಓದಿನಲ್ಲೂ ಟಾಪರ್.

*ಇವನ್ನು ಬಿಟ್ಟರೆ ನಿಮ್ಮ ಜಗತ್ತೇ ಖಾಲಿ ಖಾಲಿ... ಅಂತಹ ವಸ್ತುಗಳು?
ಗಾಲ್ಫ್ , ಅಮ್ಮ , ಸಂಗೀತ
ಮತ್ತು ಇಟಾಲಿಯನ್ ಆಹಾರ.

*ನಿಮ್ಮ ಸಾಮರ್ಥ್ಯವನ್ನು ವಿವರಿಸಿ
ದೃಢ ಸಂಕಲ್ಪ, ಸಂಪೂರ್ಣ ಸಮರ್ಪಣಾ ಭಾವ, ಕ್ರೀಡೆಯ ಹುಚ್ಚು, ಸ್ಪರ್ಧಾಭಾವ, ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬಲ.

*ಇಂದಿಗೆ ಈ ಯಶಸ್ವಿ ಗಾಲ್ಫರ್ ಪಟ್ಟ ಏರಲು ಜೀವನದಲ್ಲಿ ನೀವು ಮಾಡಿರುವ ತ್ಯಾಗಗಳು?
ಸಾಧಾರಣ ಟೀನೇಜ್ ಖುಷಿಗಳನ್ನು ನಾನು ತ್ಯಾಗ ಮಾಡಿದ್ದೇನೆ. ಎಲ್ಲರೂ ಆಟ ಆಡುತ್ತ, ಐಸ್‌ಕ್ರೀಮ್ ಪಾರ್ಲರ್‌ಗಳಲ್ಲಿ ಹರಟುವ ಹೊತ್ತು ನಾನು ಪ್ರ್ಯಾಕ್ಟಿಸ್, ಪ್ರ್ಯಾಕ್ಟಿಸ್ ಅಂತ ಇರುತ್ತಿದ್ದೆ.

*ಇತರೆ ಕ್ರೀಡೆಗಳಲ್ಲಿ ಆಸಕ್ತಿ?
ಕ್ರೀಡಾ ಜಗತ್ತನ್ನು ಆರಿಸಿಕೊಂಡಾಗ ನನ್ನ ಮುಂದೆ ಹಲವು ಕವಲುಗಳಿದ್ದವು. ಆದರೆ ಮುಖ್ಯವಾಗಿ ನನ್ನ ಗಮನ ಇದ್ದಿದ್ದು ಗಾಲ್ಫ್‌ನಲ್ಲಿ. ಗಾಲ್ಫ್‌ಗೆ ಧಕ್ಕೆ ಆಗಬಹುದೆಂಬ ಕಾರಣಕ್ಕೆ ಆ ಎಲ್ಲಾ ಕ್ರೀಡೆಗಳನ್ನು ತೊರೆಯಬೇಕಾಯಿತು.

*ಮಹಿಳಾ ಕ್ರೀಡಾಪಟುಗಳ ಯಶಸ್ಸಿಗೆ ಯಾರ ಸಹಕಾರ ಮುಖ್ಯ?
ಸ್ಪಾನ್ಸರ್ಸ್. ಅದರಲ್ಲೂ ಗಾಲ್ಫ್ ತುಂಬಾ ದುಬಾರಿ ಆಟ ಎಂದು ನಿಮಗೆ ಗೊತ್ತೇ? ಇದಕ್ಕೆ ತಯಾರಿ ನಡೆಸುವುದಕ್ಕೇ ಲಕ್ಷ ಲಕ್ಷ ಹಣ ಖರ್ಚಾಗುತ್ತದೆ. ಹೀರೊ, ಎವಿಟಿ, ಬ್ಲ್ಯಾಕ್‌ಬೆರಿ ಸೇರಿದಂತೆ ಸ್ಪಾನ್ಸರ್ಸ್‌ಗಳ ಸಹಾಯದಿಂದಲೇ ನಾನು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಳ್ಳಲು ನನಗೇನೂ ಮುಜುಗರವಿಲ್ಲ.

*ನಿಮ್ಮ ನೆಚ್ಚಿನ ನಟ?
ಹಿಂದಿ: ಅರ್ಜುನ್ ರಾಮ್‌ಪಾಲ್
ಇಂಗ್ಲಿಷ್: ಕ್ರಿಶ್ ಹೆಮ್ಸ್‌ವರ್ಥ್ 
ಕನ್ನಡ: ಸುದೀಪ್
ಇತರ ಭಾಷೆ: ರಜನಿಕಾಂತ್

*ನಮಗೆ ನಿಮ್ಮ ಬಗ್ಗೆ ಗೊತ್ತೇ ಇಲ್ಲದ ಕೆಲವು ಅಂಶಗಳನ್ನು ಹೇಳಿ...
ನಾನು ಫ್ರೆಂಚ್ ಮತ್ತು ಇಂಗ್ಲಿಷ್ ಬಿಟ್ಟು ಐದು ಭಾರತೀಯ ಭಾಷೆಗಳನ್ನು ಮಾತನಾಡುತ್ತೇನೆ. ತಮಿಳು, ತೆಲಗು, ಹಿಂದಿ, ಕನ್ನಡ, ಉರ್ದು. ಐ ಬೆಟ್, ಇದು ನಿಮಗೆ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಮತ್ತೆ ನಾನು ಬಾಸ್ಕೆಟ್ ಬಾಲ್, ಟೆನ್ನಿಸ್‌ನಲ್ಲೂ ಚತುರೆ ಅನ್ನುವುದೂ ಬಹಳಷ್ಟು ಜನರಿಗೆ ಹೊಸ ವಿಚಾರ.

*ಮಂದಿನ ಗುರಿಗಳು?
ಯುರೋಪಿಯನ್ ಲೇಡೀಸ್ ಗಾಲ್ಫ್ ಟೂರ್ನಲ್ಲಿ ನಂಬರ್ ಒನ್ ಪಟ್ಟ ಪಡೆಯುವುದು. 2016ರ ಎಲ್‌ಪಿಜಿಎಗೆ ಅರ್ಹತೆ ಪಡೆಯುವುದು ಮತ್ತು ಸ್ಪರ್ಧಿಸುವುದು. 2016ರ ಒಲಿಂಪಿಕ್‌ನಲ್ಲಿ ಭಾಗವಹಿಸಿ ಗೆಲ್ಲುವುದು. ವಿಶ್ವದ ನಂಬರ್ ಒನ್ ಮಹಿಳಾ ಗಾಲ್ಫರ್ ಆಗುವುದು ನನ್ನ ಜೀವಮಾನದ ಗುರಿ, ಕನಸು, ಸಂಕಲ್ಪ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT