ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ–ಮರಗಳ ಬಗ್ಗೆ ತಿಳಿದುಕೊಳ್ಳಲು ಸಲಹೆ

‘ಫ್ಲೋರಾ ಆಫ್‌ ಸೌತ್‌ ಕೆನರಾ’ ಪುಸ್ತಕ ಬಿಡುಗಡೆ
Last Updated 24 ಜುಲೈ 2014, 4:42 IST
ಅಕ್ಷರ ಗಾತ್ರ

ಉಡುಪಿ: ‘ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಹಾಗೂ ಸಸ್ಯ ಸಂಪತ್ತನ್ನು ನಾಶ ಮಾಡಿದ ಪರಿಣಾಮ ಜನ ಇಂದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಅದ ಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇ ಜಿನ ಇಕೊಕ್ಲಬ್‌ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಬುಧವಾರ ನಡೆದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಕೆ. ಗೋಪಾಲ ಕೃಷ್ಣ ಭಟ್‌ ಅವರ ‘ಫ್ಲೋರಾ ಆಫ್‌ ಸೌತ್‌ ಕೆನರಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾನಾಡಿದರು.

‘ಈ ಹಿಂದೆ ಪರಿಸರಕ್ಕೆ ಹತ್ತಿರವಾಗಿ ಬದುಕುತ್ತಿದ್ದ ಜನ ಆರೋಗ್ಯವಂತ ರಾಗಿದ್ದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪರಿಸರದ ಗಿಡ ಮರಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪುಸ್ತಕವನ್ನು ಬಿಡುಗಡೆ ಮಾಡಿದ ಮಂಗಳೂರು ಕೊಡಿಯಾಲ್‌ಬೈಲು ಶಾರದಾ ಪಿಯು ಕಾಲೇಜಿನ ಪ್ರಾಂಶು ಪಾಲೆ ಡಾ. ಲೀಲಾ ಉಪಾಧ್ಯಾಯ ಮಾತನಾಡಿ, ‘ಸಸ್ಯ ಶಾಸ್ತ್ರದ ವಿದ್ಯಾ ರ್ಥಿಗಳು ಪರಿಸರಕ್ಕೆ ಹತ್ತಿರವಾಗಿರ ಬೇಕು. ಸಸ್ಯಗಳ ಅಧ್ಯ ಯನ ಮಾಡ ಬೇಕು’ ಎಂದು ಸಲಹೆ ನೀಡಿದರು.

ಪಶ್ಚಿಮಘಟ್ಟ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1,888 ಪ್ರಭೇದದ ಸಸ್ಯಗಳಿವೆ. ಅವಿಭಜಿತ ಜಿಲ್ಲೆಯಲ್ಲಿರುವ 166 ಸಸ್ಯ ಬಗೆಯ ಸಸ್ಯಗಳಲ್ಲಿ 34 ಉಡುಪಿ ತಾಲ್ಲೂಕಿನಲ್ಲಿವೆ. 928 ಜೀನಸ್‌ಗಳಿವೆ. ಪುಸ್ತಕದಲ್ಲಿ ಒಟ್ಟು 300 ಸಸ್ಯ ಪ್ರಭೇದ ಗಳ ಛಾಯಾಚಿತ್ರಗಳನ್ನು ಬಳಸಲಾಗಿದೆ ಎಂದು ಡಾ. ಕೆ. ಗೋಪಾಲಕೃಷ್ಣ ಭಟ್‌ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಸದಾಶಿವ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಶರಧಿ ಪಾಟೀಲ್‌ ಪ್ರಾರ್ಥಿಸಿದರು. ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಸಿ ಭಟ್‌ ಸ್ವಾಗತಿಸಿದರು. ಬಿ.ಎಸ್‌.ರಶ್ಮಿ ನಿರೂಪಿಸಿದರು. ಗಾರ್ಗಿ ಶಬರಾಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT