ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಉದ್ವಿಗ್ನ: ಮೃತರ ಸಂಖ್ಯೆ 9ಕ್ಕೆ ಏರಿಕೆ

Last Updated 27 ಆಗಸ್ಟ್ 2015, 6:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪಟೇಲ್‌ ಸಮುದಾಯ ಬುಧವಾರ  ಕರೆದಿದ್ದ ಬಂದ್‌ ವೇಳೆ ಗುಜರಾತ್‌ನ ಅನೇಕ ಕಡೆ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ.

‘ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸೇನೆಯನ್ನು ಕರೆಸಲಾಗಿದ್ದು, ಅಹಮದಾಬಾದ್‌, ಸೂರತ್‌, ರಾಜ್‌ಕೋಟ್‌, ಮೆಹಸಾನ್‌, ಪಟಾನ್‌, ಪಾಲಂಪುರ್‌, ಉಂಝಾ, ವಿಸ್‌ನಗರ ಹಾಗೂ ಜಾಮ್‌ ನಗರಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಪಟೇಲ್‌ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಕಾನೂನು ಹಾಗೂ ಸುವ್ಯವಸ್ಥೆ ನಿಯಂತ್ರಿಸುವುದಕ್ಕೆ ಸೇನೆಯ  ತುಕಡಿಗಳನ್ನು ಕರೆಸಲಾಗಿದ್ದು, ಅರೆ ಸೇನಾಪಡೆಯ ಸುಮಾರು 50ಸಾವಿರ ಸಿಬ್ಬಂದಿಯನ್ನು ಕೂಡ  ನಿಯೋಜಿಸಲಾಗಿದೆ ಎಂದು ಅಹಮದಾಬಾದ್‌ ಜಿಲ್ಲಾಧಿಕಾರಿ ರಾಜ್‌ಕುಮಾರ್‌ ಬೇಣಿವಾಲ್‌ ಗುರುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT