ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ವಿಲೇವಾರಿ ಘಟಕ; ಪರಿಸರ ತಜ್ಞರ ಪರಿಶೀಲನೆ

Last Updated 25 ಜೂನ್ 2016, 6:56 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕೆಸರೆ, ರಾಯನಕೆರೆಗಳಲ್ಲಿ ಪಾಲಿಕೆ ಸ್ಥಾಪಿ ಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ಕುರಿತು ರಾಜ್ಯ ಪರಿಸರ ಅಪ್ರೈಸಲ್ ಸಮಿತಿ ಶುಕ್ರ ವಾರ ಸ್ಥಳ ಪರಿಶೀಲನೆ ನಡೆಸಿತು.

ಕೆಸರೆಯ ಭಾಗಕ್ಕೆ ಹೋದ ಸಮಿತಿ ಸದಸ್ಯರು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿರುವ ಪ್ರದೇ ಶದ ಸುತ್ತಮುತ್ತ ವೀಕ್ಷಿಸಿತು. ಗಾಳಿ ಬೀಸುವ ದಿಕ್ಕು, ಬಡಾವಣೆಗಳು ನಿರ್ಮಾಣ ವಾಗಿರುವ ಪ್ರದೇಶ, ಘಟಕ ಸ್ಥಾಪನೆಗೊಂಡರೆ ವಾಸನೆ ಯಾವ ಕಡೆಗೆ ಹೋಗುತ್ತದೆ ಮೊದಲಾದ ವಿಷಯಗಳ ಕುರಿತು ಅಧ್ಯಯನ ನಡೆಸಿತು.

ನಂತರ, ರಾಯನಕೆರೆಗೆ ಹೋದ ತಂಡದ ಸದಸ್ಯರು ಘಟಕ ಸ್ಥಾಪಿಸಬೇಕು ಎಂದುಕೊಂಡಿರುವ ಪ್ರದೇಶದ ಮಣ್ಣು ಒದ್ದೆಯಾ ಗಿರುವುದನ್ನು ಗಮನಿಸಿತು. ಈ ಕುರಿತು ಪಾಲಿಕೆ ಅಧಿಕಾರಿಗಳಿಂದ ವಿವರಣೆ ಪಡೆದರು. ಸಮೀಪದಲ್ಲಿ ರುವ ಕೆರೆಗೆ ಇದರ ತ್ಯಾಜ್ಯನೀರು ಸೋರಿಕೆಯಾಗುವ ಸಾಧ್ಯತೆ ಇದೆಯೇ ಎಂಬುದನ್ನು ಕೂಲಂಕ ಷವಾಗಿ ಪರಿಶೀಲನೆ ನಡೆಸಿತು.

ಸಮಿತಿಯ ಅಧ್ಯಕ್ಷ ನಾಗಣ್ಣ, ಸದಸ್ಯರಾದ ಜಯಪ್ರಕಾಶ, ಜಯ ರಾಮು, ಮಂಜಪ್ಪ, ಮನೋಜ್‌ ಕುಮಾರ್, ಹುಸೇನ್ ಹಾಗೂ ಇತರರು ತಂಡದಲ್ಲಿದ್ದರು. ತಂಡದ ಜತೆಗೆ, ಮೇಯರ್ ಬಿ.ಎಲ್.ಭೈರಪ್ಪ ಹಾಗೂ ಪಾಲಿಕೆ ಇತರ ಅಧಿಕಾರಿಗಳು ಇದ್ದರು.

ಪ್ರತಿಯೊಬ್ಬ ಸದಸ್ಯರು ಪರಿ ಸರದ ಒಂದೊಂದು ವಿಷಯದ ಕುರಿತು ಪರಿಣತರಿದ್ದು, ತಮ್ಮ ಪರಿಣತ ಕ್ಷೇತ್ರದಲ್ಲಿ ಘಟಕದಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದ್ದಾರೆ. ಜುಲೈ 2ರಂದು ಸಭೆ ಸೇರಿ ಸಮಿತಿಯು ಸಾಮಾನ್ಯ ಷರತ್ತುಗಳೊಂದಿಗೆ ಹೆಚ್ಚುವರಿ ಷರತ್ತು ವಿಧಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT