ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಗಿರಿ ಉದ್ಯಾನಕ್ಕೆ ಕೊನೆಗೂ ಮುಕ್ತಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಪ್ರತಿಷ್ಠೆಯ ವೇದಿಕೆ­ಯಾಗಿ ಮೂರು ಬಾರಿ ಉದ್ಘಾಟನೆ ರದ್ದುಗೊಂಡು ಸುದ್ದಿ­ಯಾಗಿದ್ದ ನಾಗರಬಾವಿ ವಾರ್ಡ್‌ 128ರ ವ್ಯಾಪ್ತಿಯ ಚಂದ್ರಗಿರಿ ಉದ್ಯಾನ ಕೊನೆಗೂ ಸಾರ್ವ­ಜನಿಕರ ಬಳಕೆಗೆ ತೆರೆದುಕೊಂಡಿತು. ಸೋಮವಾರ  ಸಾರ್ವ­ಜನಿಕರು ವಾಯುವಿಹಾರ ನಡೆಸಿದರು.

ವಿಧಾನಪರಿಷತ್‌ ಸದಸ್ಯ ವಿ.ಸೋಮಣ್ಣ ಅವರ ಜತೆಗೆ ಸ್ಥಳೀಯ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಸೇರಿ­­ದಂತೆ ಸುಮಾರು 14 ಮಂದಿ ಪಾಲಿಕೆ ಸದ­ಸ್ಯರು ಬೆಳಿಗ್ಗೆ ಉದ್ಯಾನಕ್ಕೆ ಭೇಟಿ ನೀಡಿ, ಒಂದು ತಾಸಿಗೂ ಅಧಿಕ ಕಾಲ ವಾಯುವಿಹಾರ ನಡೆಸಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರ­ರೊಂದಿಗೆ ಸೋಮಣ್ಣ ಮಾತನಾಡಿ, ‘ಉಮೇಶ್ ಶೆಟ್ಟಿ ಅವರು ಮುತು­ವರ್ಜಿ ವಹಿಸಿ ರೂಪಿಸಿರುವ ಈ ಉದ್ಯಾನ ಕೆಲ ಪಟ್ಟಭದ್ರ ಹಿತಾಸಕ್ತಿ­ಗಳಿಂ­ದಾಗಿ ಅಧಿಕೃತವಾಗಿ ಉದ್ಘಾಟನೆ­ಗೊಳ್ಳ­ದಿರು­ವುದು ಬೇಸರ ತಂದಿದೆ’ ಎಂದರು.

‘ಮೇಯರ್‌ ಅವರು ಉದ್ಯಾನವನ್ನು ಸಾರ್ವ­ಜ­ನಿ­ಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಈಗಾಗಲೇ ಹೇಳಿದ್ದಾರೆ. ಇಂದಿ­­ನಿಂದ ಸಾರ್ವ­ಜನಿಕರು ಉದ್ಯಾನದ ಪ್ರಯೋ­­ಜನ ಪಡೆ­ಯಬೇಕು’ ಎಂದು  ಉಮೇಶ್‌ ಶೆಟ್ಟಿ ಹೇಳಿದರು.

ಉದ್ಯಾನದ ನಡಿಗೆ ಪಥದಲ್ಲಿ ಸೋಮಣ್ಣ ಅವರು ಜತೆ ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಗಂಗಭೈರಯ್ಯ, ವಿಶ್ವನಾಥಗೌಡ, ಶಾಂತಕುಮಾರಿ, ಮೋಹನ್ ಕುಮಾರ್, ವಾಗೀಶ್ ಪ್ರಸಾದ್ ಮತ್ತು ಮಾಜಿ ಉಪ­ಮೇಯರ್ ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT